ನವದೆಹಲಿ, ಫೆ. ೧ : ೨೦೨೩-೨೪ರ ಕೇಂದ್ರ ಮುಂಗಡ ಪತ್ರವನ್ನು ಇಂದು ಸಂಸತ್‌ನಲ್ಲಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ೭ ಸೂತ್ರಗಳ ಮೂಲಕ ಈ ಬಾರಿಯ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸ್ವಾತಂತ್ರö್ಯ ಕಳೆದು ೧೦೦ ವರ್ಷಗಳ ಬಳಿಕದ ದೂರದೃಷ್ಟಿಯನ್ನಿರಿಸಿ ಈ ಬಾರಿಯ ಮುಂಗಡ ಪತ್ರ ಮಂಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ರೂ.೪೫ ಲಕ್ಷ ಕೋಟಿ ಮೂಲಕ ೭ ಸೂತ್ರಗಳಾದ ಅಂತರ್ಗತ ಅಭಿವೃದ್ಧಿ, ‘ರೀಚಿಂಗ್ ಲಾಸ್ಟ್ ಮೈಲ್’, ಮೂಲಭೂತ ಸೌಕರ್ಯ ಹಾಗೂ ಬಂಡವಾಳ ಹೂಡಿಕೆ, ಸಾಮರ್ಥ್ಯ ಹೊರಹಾಕುವುದು, ಹಸಿರು ಕ್ರಾಂತಿ, ಯುವ ಸಬಲೀಕರಣ ಹಾಗೂ ಹಣಕಾಸು ಕ್ಷೇತ್ರ ಎಂಬ ೭ ಸೂತ್ರಗಳ ಮೂಲಕ ಮುಂಗಡ ಪತ್ರ ಮಂಡಿಸಿದರು.

ಅAತರ್ಗತ ಅಭಿವೃದ್ಧಿ

ರೈತ, ಮಹಿಳೆ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಒಳಗೊಂಡು ಈ ಬಾರಿಯ ಆಯವ್ಯಯ ರೂಪಿಸಲಾಗಿದ್ದು ಎಲ್ಲರನ್ನೂ ಒಳಗೊಂಡ ಅಂತರ್ಗತ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ‘ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟçಕ್ಚರ್’ ಮೂಲಕ ಸಹಾಯ ಒದಗಲಿದೆ. ನೂತನ ನಿರ್ಮಿತ ಸಂಸ್ಥೆಗಳ ಸಹಾಯದಿಂದ ರೈತರ ಸಮಸ್ಯೆಗಳಿಗೆ ಪರಿಹಾರ, ಅವರುಗಳ ಬೆಳೆಗಳ ಮಾರಾಟ ಸಲೀಲವಾಗಿ ನಡೆಸಲು ಒತ್ತು ನೀಡಲಾಗಿದೆ. ‘ಹತ್ತಿ’ ಬೆಳೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಗಿ ಬೆಳೆಯಲ್ಲಿ ಭಾರತವು ಮೊದಲನೆಯ ಸ್ಥಾನ ಪಡೆದಿದ್ದು ಹೈದರಾಬಾದ್‌ನಲ್ಲಿರುವ ರಾಗಿ ಸಂಶೋಧನಾ ಕೇಂದ್ರವನ್ನು ರಾಗಿ ಬೆಳೆಗೆ ಅನುಸರಿಸಬೇಕಾದ ವಿವಿಧ ಕ್ರಮಗಳ ಬಗ್ಗೆ, ರಾಗಿಯ ಸಂಶೋಧನಾ ಹಾಗೂ ತಾಂತ್ರಿಕ ಮಾಹಿತಿ ಒದಗಿಸುವ ಕೇಂದ್ರವನ್ನಾಗಿ ಮಾಡಲಾಗುತ್ತದೆ. ಪಿ.ಎಮ್ ಮತ್ಸö್ಯ ಸಂಪದ ಯೋಜನೆ ಮೂಲಕ ರೂ.೬೦೦೦ ಕೋಟಿ ಹೂಡಿಕೆ ಮಾಡಲಾಗುವುದು. ದೇಶದಲ್ಲಿನ ೬೩,೦೦೦ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರೂ.೨,೫೧೬ ಕೋಟಿ ಹೂಡಿಕೆ ಮೂಲಕ ಕಂಪ್ಯೂಟರೀಕರಣಗೊಳಿಸಲಾಗಿದ್ದು, ನ್ಯಾಷನಲ್ ಕೋ-ಆಪರೇಟಿವ್ ಡಾಟಾಬೇಸ್ ಸೃಷ್ಟಿಸಿ ಎಲ್ಲಾ ಸಂಘಗಳ ಮಾಹಿತಿ ಸಂಗ್ರಹ ಮಾಡಲಾಗುವುದು.

ರಾಷ್ಟçದಲ್ಲಿ ೨೦೧೪ ರಿಂದೀಚೆಗೆ ನಿರ್ಮಿಸಲಾಗಿರುವ ೧೫೭ ಔಷಧೀಯ ಕಾಲೇಜುಗಳ ಸ್ಥಳಗಳಲ್ಲಿಯೇ ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಆಗಲಿದೆ. ‘ಸಿಕಲ್ ಸೆಲ್ ಅನೇಮಿಯಾ’ ಕಾಯಿಲೆಯನ್ನು ೨೦೪೭ ರೊಳಗೆ ಸಂಪೂರ್ಣವಾಗಿ ಹೋಗಲಾಡಿಸಲು ಯೋಜನೆ ರೂಪಿಸಲಾಗುವುದು. ಔಷಧೀಯ ಕ್ಷೇತ್ರದಲ್ಲಿ ಐ.ಸಿ.ಎಮ್.ಆರ್ ಮೂಲಕ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಶಿಕ್ಷಕರ ತರಬೇತಿಗಾಗಿ ಸಂಸ್ಥೆಗಳನ್ನು ತೆರೆಯಲಾಗುತ್ತದೆ.

‘ರೀಚಿಂಗ್ ಲಾಸ್ಟ್ ಮೈಲ್‘ (ದೇಶದ ತುತ್ತ ತುದಿ ತಲುಪುವುದು)

ದೇಶದ ತುತ್ತತುದಿಗಳಿಗೂ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಸೂತ್ರ ಸಹಕಾರಿಯಾಗಲಿದೆ. ಹೆಚ್ಚಾಗಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಿ.ವಿ.ಜಿ.ಟಿ ಅಭಿವೃದ್ಧಿ ಯೋಜನೆ ಮೂಲಕ

ದುರ್ಬಲ ಬುಡಕಟ್ಟು ನಿವಾಸಿಗಳ ಅಭಿವೃದ್ಧಿಗೆ ರೂ.೧೫,೦೦೦ ಕೋಟಿ ಖರ್ಚು ಮಾಡಿ ಮೂಲಭೂತ ಸೌಕರ್ಯಗಳನ್ನು ನೀಡಲು ಒತ್ತು ನೀಡಲಾಗುವುದು. ಏಕಲವ್ಯ ಮಾಡಲ್ ವಸತಿ ಶಾಲೆ ಯೋಜನೆಯ ಮೂಲಕ ಮುಂದಿನ ೩ ವರ್ಷಗಳಲ್ಲಿ ಕೇಂದ್ರವು ೩೮,೮೦೦ ಶಿಕ್ಷಕರು, ೭೪೦ ಶಿಕ್ಷಕೇತರ ಸಿಬ್ಬಂದಿಗಳನ್ನು ನೇಮಕ ಮಾಡಲಿದೆ . ಈ ಮೂಲಕ ೩.೫ ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಕ್ರಮ ವಹಿಸಲಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ‘ಮೇಲಿನ ಭದ್ರಾ ಯೋಜನೆ’ ಮೂಲಕ ಕೇಂದ್ರದಿAದ ರೂ.೫,೩೦೦ ಕೋಟಿ ಬಿಡುಗಡೆಗೊಳಿಸಿ ನೀರಿನ ಸಮಸ್ಯೆ ಪರಿಹರಿಸಲಿದೆ.

ಮೂಲಭೂತ ಸೌಕರ್ಯ ಹಾಗೂ ಬಂಡವಾಳ ಹೂಡಿಕೆ

ಕ್ಯಾಪಿಟಲ್ ಇನ್‌ವೆಸ್ಟ್ಮೆಂಟ್ ಔಟ್‌ಲೇ ಅನ್ನು ಶೇ. ೩೩ ರಷ್ಟು ಹೆಚ್ಚಿಸಿದ್ದು, ರೂ.೧೦ಲಕ್ಷ ಕೋಟಿ ಆಗಲಿದೆ. ಇದು ಜಿ.ಡಿ.ಪಿ ಯ ಶೇ.೩.೩ ರಷ್ಟು ಆಗಲಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದರು. ೫೦ ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೊಂದು ವರ್ಷ ಮುಂದುವರಿಸಲು ನಿಶ್ಚಯಿಸಲಾಗಿದೆ. ದೇಶದ ರೈಲ್ವೇ ಅಭಿವೃದ್ಧಿಗೆ ರೂ.೨.೪ ಲಕ್ಷ ಕೋಟಿ ಮೀಸಲಿಡಲಾಗುವುದು. ೫೦ ಹೆಚ್ಚುವರಿ ಏರ್‌ಪೋರ್ಟ್, ಹೆಲಿಪೋರ್ಟ್ ಹಾಗೂ ವಾಟರ್ ಏರೋಡ್ರೋಮ್ಸ್ಗಳಿಗೆ ಮರುಜೀವ ನೀಡಿ ಪ್ರಾದೇಶಿಕ ಏರ್ ಕನೆಕ್ಟಿವಿಕೆಗೆ ಸಹಾಯ ಮಾಡಲಾಗುವುದು. ರಾಜ್ಯಗಳಲ್ಲಿನ ನಗರ ಪ್ರದೇಶಗಳನ್ನು ಸೂಕ್ತ ಯೋಜನೆಗಳ ಮೂಲಕ ಭವಿಷ್ಯಕ್ಕೆ ಯೋಗ್ಯವಾಗುವ ರೀತಿ ಅಭಿವೃದ್ಧಿ ಪಡಿಸುವಂತೆ ಕ್ರಮ ವಹಿಸಲಾಗುವುದು. ಲ್ಯಾಬ್ ತಯಾರಿತ ವಜ್ರಗಳ ತಯಾರಿಕೆಗೆ ಯಾವುದಾದರೊಂದು ಐ.ಐ.ಟಿಗೆ ೫ ವರ್ಷಗಳ ಗ್ರಾಂಟ್ ನೀಡಲಾಗುವುದು.

(ಮೊದಲ ಪುಟದಿಂದ)

‘ಅನ್‌ಲೀಶಿAಗ್ ಪೊಟೆಂಶಿಯಲ್’ (ಸಾಮರ್ಥ್ಯ ಅನಾವರಣ)

ಸಾಮಾನ್ಯರ ಸಾಮರ್ಥ್ಯ ಬಳಸಲು ಕೇಂದ್ರ ಈ ಬಾರಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಮಿಷನ್ ಕರ್ಮಯೋಗಿ ಮೂಲಕ ಸರಕಾರಿ ನೌಕರರಿಗೆ ನಿರಂತರ ಕಲಿಕಾ ಅಭಿಯಾನ, ಕೃತಕ ಬುದ್ಧಿವಂತಿಕೆಗೆ ಒತ್ತು, ಡಿಜಿಟಲ್ ಇಂಡಿಯಾದಡಿ ಕೆ.ವೈ.ಸಿ ಮಾಡಿಸುವ ಕಾರ್ಯವಿಧಾನವನ್ನು ಸುಲಭ ಮಾಡಲಾಗುವುದು. ಇ-ಕೋರ್ಟ್ಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹಕ್ಕೆ ರೂ.೭,೦೦೦ ಕೋಟಿ ಮೀಸಲಿಡಲಾಗುವುದು, ೫ಜಿ ಅಂತರ್ಜಾಲ ಅಭಿವೃದ್ಧಿಗೆ ೧೦೦ ಲ್ಯಾಬ್‌ಗಳನ್ನು ಸೃಷ್ಟಿಸಲಾಗುವುದು.

ಗ್ರೀನ್ ಗ್ರೋತ್ (ಹಸಿರು ಕ್ರಾಂತಿ)

೨೦೭೦ ರೊಳಗೆ ೦ ಕಾರ್ಬನ್ ಎಮಿಶನ್ ಮೂಲಕ ವಾಯು ಮಾಲಿನ್ಯ ತಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರೀನ್ ಹೈಡ್ರೋಜನ್ ಮಿಷನ್ ಮೂಲಕ ೨೦೩೦ ರೊಳಗೆ ೫ ಎಮ್.ಎಮ್.ಟಿ ಹೈಡ್ರೋಜನ್ ಉತ್ಪಾದನೆ ಮಾಡಿ ಇತರ ಇಂಧನಗಳ ಬಳಕೆ ನಿಯಂತ್ರಿಸಲು ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬ್ಯಾಟರಿ ಶಕ್ತಿ ಶೇಖರಣಾ ವಿಭಾಗದ ಸಾಮರ್ಥ್ಯವನ್ನು ೪೦೦೦ ‘ಒegಚಿತಿಚಿಣಣ houಡಿ’ ಗೆ ಏರಿಸಲಾಗುವುದು. ರೂ.೨೦,೭೦೦ ಕೋಟಿ ವೆಚ್ಚದಲ್ಲಿ ೧೩ ಗಿಗಾವಾಟ್ ರಿನೀವೇಬಲ್ ಎನರ್ಜಿ ಯೋಜನೆ ಲಡಾಕ್‌ನಲ್ಲಿ ನಿರ್ಮಿಸಲಾಗುವುದು. ‘ಗ್ರೀನ್ ಕ್ರೆಡಿಟ್ ಪ್ರೋಗ್ರಾಮ್’ ಮೂಲಕ ರಿನೀವೆಬಲ್ ಎನರ್ಜಿಗೆ ಒತ್ತು ನೀಡುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಗೋಬರ್ಧನ್ ಯೋಜನೆ ಮೂಲಕ ೫೦೦ ನೂತನ ’ವೇಸ್ಟ್ ಟು ವೆಲ್ತ್’ ಘಟಕಗಳನ್ನು ನಿರ್ಮಿಸಿ ೨೦೦ ಕಂಪ್ರೆಸ್ಡ್ ಬಯೋ-ಗ್ಯಾಸ್ ಘಟಕಗಳನ್ನು ನಿರ್ಮಿಸಲಾಗುವುದು. ಮುಂದಿನ ೩ ವರ್ಷಗಳಲ್ಲಿ ೧ ಕೋಟಿಗೂ ಅಧಿಕ ರೈತರನ್ನು ನೈಸರ್ಗಿಕ ಕೃಷಿ ಮಾಡಲು ಒತ್ತು ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೇರಿದ ಹಳೇ ವಾಹನಗಳನ್ನು ಸ್ಕಾçಪ್ ಮಾಡಲಾಗುವುದು.

ಯೂತ್ ಪವರ್ (ಯುವ ಸಬಲೀಕರಣ)

ಯುವಜನತೆಗೆ ನೂತನ ಶಿಕ್ಷಣ ನೀತಿ, ಕೌಶಲ್ಯ ಅಭಿವೃದ್ಧಿಗೆ ಮಹತ್ವ ನೀಡಲಾಗಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಮೂಲಕ ಮುಂದಿನ ೩ ವರ್ಷಗಳಲ್ಲಿ ಲಕ್ಷಾಂತರ ಯುವಜನತೆಯ ಕೌಶಲ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಪ್ರವಾಸೋದ್ಯಮಕ್ಕೆ ಒತ್ತು ಸೇರಿದಂತೆ ರಾಜ್ಯಗಳ ರಾಜಧಾನಿಗಳಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಯೂನಿಟಿ ಮಾಲ್ ನಿರ್ಮಿಸಿ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ.

ಹಣಕಾಸು ಕ್ಷೇತ್ರ

ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರೆಂಟಿ, ಹಣಕಾಸು ಸಂಬAಧಿತ ಕೇಂದ್ರೀಕೃತ ಮಾಹಿತಿಗಾಗಿ ಮಾಹಿತಿ ರೆಜಿಸ್ಟಿç ಸ್ಥಾಪನೆ, ಬ್ಯಾಂಕಿAಗ್ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ, ಡಿಜಿಟಲ್ ಪೇಮೆಂಟ್ಸ್ಗೆ ಹೆಚ್ಚಿನ ಒತ್ತು ನೀಡಲಾಗಿದೆ.

ತೆರಿಗೆ ದರದಲ್ಲಿ ಬದಲಾವಣೆ

ಇದೀಗ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಬದಲಾವಣೆಯೆಂದರೆ ವೇತನ ಪಡೆಯುವ ಮಂದಿ ಹಾಗೂ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ರಿಬೇಟ್ ಅನ್ನು ರೂ. ೫ ಲಕ್ಷ ದಿಂದ ರೂ. ೭ ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇದರ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಈ ಹಿಂದೆ ಇದ್ದ ರೂ. ೨.೫೦ ಲಕ್ಷ ಆದಾಯದಿಂದ ೩ ಲಕ್ಷ ಆದಾಯದವರೆಗೆ ಏರಿಕೆ ಮಾಡಲಾಗಿದೆ. ಅಲ್ಲದೆ, ಹೊಸ ಮತ್ತು ಹಳೆ ಕ್ರಮದಲ್ಲೂ ತೆರಿಗೆ ಪಾವತಿಯನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೊಸ ಕ್ರಮದಲ್ಲಿ ಈ ಹಿಂದೆ ಇದ್ದ ೭ ಸ್ಲಾö್ಯಬ್‌ಗಳ ಬದಲು ೬ ಸ್ಲಾö್ಯಬ್‌ಗಳನ್ನು ಮಾಡಲಾಗಿದೆ. ಅದು ಈ ಕೆಳಗಿನಂತಿವೆ.

ರೂ. ೩ ಲಕ್ಷ ಆದಾಯದವರೆಗೆ ತೆರಿಗೆಯಿಲ್ಲ. ರೂ.೩ ಲಕ್ಷದಿಂದ ೬ ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. ೫ರಷ್ಟು ತೆರಿಗೆ ವಿಧಿಸಲಾಗುತ್ತದೆ. ರೂ.೬ ಲಕ್ಷದಿಂದ ೯ ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. ೧೦ ತೆರಿಗೆ ಇರಲಿದೆ. ರೂ.೯ ಲಕ್ಷದಿಂದ ೧೨ ಲಕ್ಷದವರೆಗಿನ ಆದಾಯಕ್ಕೆ ಶೇ. ೧೫ ತೆರಿಗೆ ವಿಧಿಸಲಾಗುತ್ತದೆ. ರೂ. ೧೨ ಲಕ್ಷದಿಂದ ೧೫ ಲಕ್ಷದವರೆಗಿನ ಆದಾಯಕ್ಕೆ ಶೇ. ೨೦ ತೆರಿಗೆ ಇರಲಿದೆ ಹಾಗೂ ರೂ.೧೫ ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. ೩೦ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಹಳೆ ಪದ್ಧತಿಯಲ್ಲಿ ಪಾವತಿಸಬಯಸುವವರು ಅದನ್ನು ಮುಂದುವರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.