*ಗೋಣಿಕೊಪ್ಪ, ಫೆ. ೧: ರೂ. ೧ ಕೋಟಿ ಅನುದಾನದಲ್ಲಿ ಡಾಂಬರೀಕರಣಗೊAಡ ಪೊನ್ನಂಪೇಟೆ ಕಾನೂರು, ನಿಟ್ಟೂರು ಸಂಪರ್ಕ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಬಿಡುಗಡೆಯಾದ ಅನುದಾನದಲ್ಲಿ ಮಾರ್ಚ್ ಅಂತ್ಯದೊಳಗೆ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳು ಮುಗಿಯಲಿದೆ ಎಂದು ಭರವಸೆ ನೀಡಿದರು. ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ಶಾಸಕರ ವಿಶೇಷ ಕಾಳಜಿಯಿಂದ ಗ್ರಾ.ಪಂ. ವ್ಯಾಪಿಯ ಜನರ ಮೂಲ ಸೌಕರ್ಯಗಳು ಬೇಡಿಕೆಗೆ ತಕ್ಕಂತೆ ಈಡೇರಿದೆ ಎಂದು ಹೇಳಿದರು. ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಕೃಷಿ ಮೋರ್ಚಾ ಮಾಜಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ಶಾಸಕರ ವಿಶೇಷ ಕಾಳಜಿಯಿಂದ ಗ್ರಾ.ಪಂ. ವ್ಯಾಪಿಯ ಜನರ ಮೂಲ ಸೌಕರ್ಯಗಳು ಬೇಡಿಕೆಗೆ ತಕ್ಕಂತೆ ಈಡೇರಿದೆ ಎಂದು ಹೇಳಿದರು. ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಕೃಷಿ ಮೋರ್ಚಾ ಮಾಜಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಮಾಚಂಗಡ ಸುಜಾ, ಪೊನ್ನಪ್ಪಸಂತೆ ಗ್ರಾ.ಪಂ. ಸದಸ್ಯ ಆದೇಂಗಡ ವಿನು ಚಂಗಪ್ಪ, ಪ್ರಮುಖರಾದ ಪ್ರಭುಕುಮಾರ್, ಗುತ್ತಿಗೆದಾರರಾದ ಹರೀಶ್ಗೌಡ, ಸವಿತಾ ತಿಮ್ಮಯ್ಯ, ತೋಟದಪ್ಪ ನಾಯಕ್, ಐಟಿಡಿಪಿ ಅಧಿಕಾರಿ ನವೀನ್, ಗ್ರಾ.ಪಂ. ಸದಸ್ಯರುಗಳು, ಕೊಲ್ಲಿ ಹಾಡಿ ನಿವಾಸಿಗಳು ಹಾಗೂ ಸ್ಥಳೀಯ ಪ್ರಮುಖರು ಇದ್ದರು.