ಗೋಣಿಕೊಪ್ಪಲು, ಜ. ೩೧: ವೃತ್ತಿಕ್ಕಿಂತ ಸಂಘಟನೆಯ ಶಕ್ತಿ ಮುಖ್ಯ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.

ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಟೈಲರ್ ಆಸೋಸಿಯೇಷನ್ ವಲಯ ಸಮಿತಿ ಗೋಣಿಕೊಪ್ಪ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯ ಶಕ್ತಿ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಸಂಘಟನೆಯ ಬೇಡಿಕೆಗಳನ್ನು ಬಹು ಬೇಗನೇ ಈಡೇರಿಸಲು ಮುಂದಾಗುತ್ತದೆ. ವೈಯಕ್ತಿಕವಾಗಿ ಯಾವುದೇ ಫಲ ಪಡೆಯಲು ಸಾಧ್ಯವಿಲ್ಲ. ಸಂಘಟನೆಯ ಮೂಲಕ ತಮ್ಮ ಬೇಡಿಕೆಯನ್ನು ಅತ್ಯಂತ ವೇಗವಾಗಿ ಸರ್ಕಾರಕ್ಕೆ ತಲುಪಿಸಬಹುದಾಗಿದೆ ಎಂದರು. ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಗೋಣಿಕೊಪ್ಪದ ಅಧ್ಯಕ್ಷರಾದ ಎಂ.ಎಸ್. ಹಬೀಬುನ್ನಿಸ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಸಿ. ನಂದೀಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಸಂಘಟನೆಯನ್ನು ಹಂತ ಹಂತವಾಗಿ ಕಟ್ಟಲಾಗಿದೆ. ಕಳೆದ ೨೩ ವರ್ಷಗಳಿಂದ ರಾಜ್ಯದಲ್ಲಿ ಸಂಘಟನೆಯು ಅಸ್ತಿತ್ವದಲ್ಲಿದ್ದರೂ ಕೊಡಗು ಜಿಲ್ಲೆಯಲ್ಲಿ ಸಂಘಟನೆ ಅಷ್ಟಾಗಿ ಬೆಳೆದಿರಲಿಲ್ಲ. ಇದೀಗ ವೃತ್ತಿ ಬಾಂಧವರು ಹೆಚ್ಚಾಗಿ ಸಂಘಟನೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು. ಮುಖ್ಯ ಅತಿಥಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಕೊಣಿಯಂಡ ಬೋಜಮ್ಮ ಮಾತನಾಡಿ ವೃತ್ತಿ ಬಾಂಧವರು ಸಮಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಟೈಲರ್ ವೃತ್ತಿಯಲ್ಲಿ ಬಹಳಷ್ಟು ಮಂದಿ ಮಹಿಳೆಯರು ತೊಡಗಿಸಿ ಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ವಿಜಯ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ೧೬ ಲಕ್ಷ ಸದಸ್ಯರು ನೊಂದಾವಣೆ ಯಾಗಿದ್ದಾರೆ. ಈ ಬಾರಿ ರಾಜ್ಯ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಮೂಲಕ ಮುಂದಿನ ಬಜೆಟ್‌ನಲ್ಲಿ ದರ್ಜಿಗಳನ್ನು ಪರಿಗಣಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಗಿದೆ ಎಂದರು. ಅಸೋಸಿಯೇಷನ್ ಗೌರವ ಅಧ್ಯಕ್ಷ ಶೇಕ್ ಅಹಮ್ಮದ್ ಮಾತನಾಡಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಮೂರು ಬಾರಿ ಸಂಘವನ್ನು ಕಟ್ಟಲಾಗಿತ್ತು. ಆದರೆ ಕಾರಣಾಂತರ ದಿಂದ ಮುಂದುವರಿಯಲಿಲ್ಲ. ನಂತರ ಸಂಘದ ಜವಾಬ್ದಾರಿಯನ್ನು ಮಹಿಳೆ ಯರಿಗೆ ವಹಿಸಲಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪೊನ್ನಂಪೇಟೆ ವಲಯ ಅಧ್ಯಕ್ಷರಾದ ಎಸ್.ಟಿ. ಗಿರೀಶ್, ವೀರಾಜಪೇಟೆ ವಲಯ ಅಧ್ಯಕ್ಷರಾದ ಪೊನ್ನಕ್ಕಿ, ಸಿದ್ದಾಪುರ ವಲಯ ಅಧ್ಯಕ್ಷರಾದ ರವೀಂದ್ರ, ಮೂರ್ನಾಡು ವಲಯ ಅಧ್ಯಕ್ಷ ಸಜೀವ, ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಗೋಣಿಕೊಪ್ಪದ ಉಪಾಧ್ಯಕ್ಷೆ ನಳಿನಿ, ಗಣೇಶ್, ಪ್ರಧಾನ ಕಾರ್ಯ ದರ್ಶಿ ಗೀತಾ ಮೋಹನ್, ಖಜಾಂಚಿ ಪದ್ಮಗೋಪಿ, ಸಹ ಕಾರ್ಯದರ್ಶಿ ಜಯ್, ಸಂಘಟನಾ ಕಾರ್ಯದರ್ಶಿ ಬಿ.ಎಲ್. ಮೋಹನ್, ಲಕ್ಷö್ಮಣ, ಸದಸ್ಯ ರಾದ ಕೃಷ್ಣಕುಮಾರ್, ಗಿರೀಶ್, ಕೃಷ್ಣ ಕುಲಾಲ್, ಅನಿಲ್ ಕುಮಾರ್, ರಮೇಶ್, ಸುಲೇಮಾನ್, ಜೆಸಿಂತ, ಲೀಲಾವತಿ, ಸ್ಮಿತಾ ಎಂ.ಎಸ್., ಪುಷ್ಪಾಲತ. ಹೆಚ್. ಉಪಸ್ಥಿತರಿದ್ದರು. ಗೌರವ ಅಧ್ಯಕ್ಷ ಸಾಜಿ ಅಚ್ಚುತ್ತನ್ ಸ್ವಾಗತಿಸಿದರು.