ಮಡಿಕೇರಿ, ಜ. ೩೧: ಇತ್ತೀಚೆಗೆ ಬೆಟ್ಟಗೇರಿಯಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ಹಂಪಿ ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯ್ ಪೂಣಚ್ಚ ತಂಬAಡ ಅವರನ್ನು ಹುಟ್ಟೂರಾದ ಹೊದ್ದೂರು - ಕುಯ್ಯಂಗೇರಿ ಗ್ರಾಮದಲ್ಲಿರುವ ತಂಬAಡ ಕುಟುಂಬದ ಐನ್‌ಮನೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಕುಟುಂಬದ ಹಿರಿಯರಾದ ಬೆಳ್ಯವ್ವ, ಜಾಜಿ, ಮಲ್ಲಿಗೆ, ಗೋಕುಲ, ಪಟ್ಟೆದಾರ ಕಾರ್ಯಪ್ಪ ಅವರುಗಳು ವಿಜಯ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ವಿಜಯ್ ಪೂಣಚ್ಚ ಅವರ ಪತ್ನಿ ಭಾರತಿ ಪೂಣಚ್ಚ ಉಪಸ್ಥಿತರಿದ್ದರು.