ಮಡಿಕೇರಿ, ಜ. ೩೧: ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸುಬುಲು ಸ್ಸಲಾಂ ಮದ್ರಸದಲ್ಲಿ ನಡೆಯಿತು
ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಎಸ್.ಎ. ಅಧ್ಯಕ್ಷತೆ ವಹಿಸಿದ್ದರು, ಖತೀಬರಾದ ಅಬ್ದುಲ್ ಹಮೀದ್ ಅಮ್ಜದಿ ಉಸ್ತಾದ್ ದುಅ ನೆರವೇರಿಸಿದರು, ಕಾರ್ಯದರ್ಶಿ ರಫೀಕ್ ಪಿ.ಐ. ಲೆಕ್ಕಪತ್ರ ಮಂಡಿಸಿದರು.
ಜಿಲ್ಲಾ ವಕ್ಫ್ ಮಾಜಿ ಸದಸ್ಯ ಎಸ್. ಮೊಯಿದ್ದೀನ್ ಕುಂಞÂ ಹಾಗೂ ಮಾಜಿ ಅಧ್ಯಕ್ಷ ಹಾಜಿ ಅಲವಿ ಕುಟ್ಟಿ ಹಾಗೂ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಸ್.ಪಿ. ಉಪಸ್ಥಿತರಿದ್ದರು. ಸಭೆಯಲ್ಲಿ ಹಿಂದಿನ ಸಮಿತಿಯನ್ನೇ ಮುಂದಿನ ೨೦೨೩ನೇ ಸಾಲಿಗೆ ಪುನರಾಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್.ಎ., ಪ್ರಧಾನ ಕಾರ್ಯದರ್ಶಿ ರಫೀಕ್ ಪಿ.ಐ., ಉಪಾಧ್ಯಕ್ಷ್ಷರಾಗಿ ಕುಂಜಲಿ ಕೆ.ಎ., ಕಾರ್ಯದರ್ಶಿಯಾಗಿ ಹಸೈನಾರ್ ಟಿ.ಎಂ., ನಿರ್ದೇಶಕರಾಗಿ ಹಾಜಿ ಆಲವಿ ಕುಟ್ಟಿ, ಅಬ್ದುಲ್ ರಹಿಮಾನ್ ಎಸ್.ಪಿ., ಮುಹಮ್ಮದ್ ಹಾರಿಸ್, ಟಿ.ಕೆ. ರಫೀಕ್, ನಾಸಿರ್ ಎ.ಯು., ಮುಸ್ತಾಫ ಟಿ.ಎಂ., ಕುಂಜಿ ಮಹಮ್ಮದ್ ಎಂ.ಕೆ., ಇವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಸ್ಥಳೀಯ ಖತೀಬ್ ಅಬ್ದುಲ್ ಹಮೀದ್ ಅಮ್ಜದಿ, ಕುಂಞ ಮಹಮ್ಮದ್ ಟಿ.ಎಂ., ಅಬ್ದುಲ್ಲ ಕೆ.ಎ., ಹನೀಫ್ ಎಸ್.ಪಿ. ಹಾಗೂ ಖಾಯಂ ಆಹ್ವಾನಿತರಾಗಿ ನಸೀರ್ ಎಂ.ಎA. ಆಯ್ಕೆಯಾದರು.