ನಾಪೋಕ್ಲು, ಜ. ೩೧: ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬವನ್ನು ಎಮ್ಮೆಮಾಡಿನಲ್ಲಿ ಆಚರಿಸಲಾಯಿತು.
ಎಮ್ಮೆಮಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಕ್ಕಳು ಆಟ-ಪಾಠಗಳೊಂದಿಗೆ ಸಂಭ್ರಮಿಸಿದರು. ಮೊದಲಿಗೆ ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಅತಿಥಿಗಳು, ಶಿಕ್ಷಕರು, ಕ್ಲಸ್ಟರ್ನ ಶಾಲೆಯಿಂದ ಬಂದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಯಿಸ ನೆರವೇರಿಸಿದರು. ಮಡಿಕೇರಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ. ನಳಿನಿ ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್, ಐಸಮ್ಮ, ಗಪೂರ್, ಬಿ.ಆರ್. ಪಿ. ಮಂಜುಳಾ ಚಿತ್ತಾಪುರ, ಸಿಆರ್ಪಿ ಸರಸ್ವತಿ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮೊಯಿದು ಕುಂಞÂ, ಪ್ರಾಥಮಿಕ ಶಾಲಾ ಅಧ್ಯಕ್ಷ ಅಶ್ರಫ್, ಸದಸ್ಯರಾದ ಮುಸ್ತಫಾ ಪಿ.ಎ., ಸದಸ್ಯರು, ವಿವಿಧ ಶಾಲಾ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು. ಪ್ರಾಥಮಿಕ ಮುಖ್ಯ ಶಿಕ್ಷಕ ಲೋಕೇಶ್ ಸ್ವಾಗತಿದರು. ಶಿಕ್ಷಕಿ ವಂಜಮ್ಮ ಪ್ರಾರ್ಥಿಸಿದರು. ಶಿಕ್ಷಕಿ ರಮ್ಯಾ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ ವಂದಿಸಿದರು.