ಕೂಡಿಗೆ, ಜ. ೩೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಒಳ ನೀರಿನ ಮಟ್ಟದಲ್ಲಿ ಈ ಸಾಲಿನಲ್ಲಿ ಬಾರಿ ಕುಸಿತ ಗೊಂಡಿದೆ. ಅಣೆಕಟ್ಟೆಯ ನೀರಿನ ಸಾಮರ್ಥ್ಯ ೭ ಟಿಎಂಸಿ ಇದ್ದು, ಈ ಸಾಲಿನಲ್ಲಿ ನೀರಿನ ಮಟ್ಟವು ೨.೫೨೫೮೦ ಟಿಎಂಸಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ. ೬.೮೮೯೯೯ ಟಿಎಂಸಿ ನೀರಿನ ಸಂಗ್ರಹವಿತ್ತು. ಕಳೆದ ಸಾಲಿನಲ್ಲಿ ನವೆಂಬರ್, ಡಿಸೆಂಬರ್ನಲ್ಲಿ ಅಧಿಕ ಪ್ರಮಾಣದ ಮಳೆಯಿಂದಾಗಿ ನೀರಿನ ಸಂಗ್ರಹ ಹೆಚ್ಚಾಗಿತ್ತು,
ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣದಲ್ಲಿ ಕಡಿಮೆಗೊಂಡಿದರೂ ಸಹ ಅಣೆಕಟ್ಟೆಯಲ್ಲಿ ಇರಬೇಕಾದ ನೀರಿನ ಸಂಗ್ರಹ ಮಟ್ಟವನ್ನು ನೀರಾವರಿ ಇಲಾಖೆಯವರು ಕಾಯ್ದಿರಿಸಿಕೊಂಡಿರುತ್ತಾರೆ.