ಕೂಡಿಗೆ, ಜ. ೩೧: ಜಿಲ್ಲಾ ಬುದ್ಧ ಪ್ರತಿಷ್ಠಾನ ಶಾಖೆಯ ವತಿಯಿಂದ ಕೂಡಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಗತಿಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ವಿಜಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಪುರಸಭೆ ಕಾನೂನು ಸಲಹೆಗಾರ ಕೆ.ಸಿ. ಶಿವಮೂರ್ತಿ, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಡಿ. ಸಂತೋಷ, ಜನ ಔಷಧಿ ಕೇಂದ್ರದ ಪ್ರಮುಖ್ ಕೆ.ಟಿ. ಹರೀಶ್, ಶಾಲಾ ಮುಖ್ಯೋಪಾ ಧ್ಯಾಯ ಯೋಗೇಶ್ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಂದೀಶ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್, ದಿವ್ಯ ಜಯರಾಮ್ ಸೇರಿದಂತೆ ಶಿಕ್ಷಕರ ವಿದ್ಯಾರ್ಥಿಗಳು ಹಾಜರಿ ದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಬುದ್ಧ ಪ್ರತಿಷ್ಠಾನ ಶಾಖೆಯ ಅಧ್ಯಕ್ಷ ಹೆಚ್. ಪಿ. ಶಿವಕುಮಾರ್ ವಹಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರ ವೃಂದ, ಅಧ್ಯಕ್ಷರನ್ನು ಅಭಿನಂದಿಸಲಾಯಿತು. ದಿವ್ಯ ಜಯರಾಮ್ ಸ್ವಾಗತಿಸಿ ವಂದಿಸಿದರು.