ಕೊಡ್ಲಿಪೇಟೆ, ಜ. ೩೧: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲಿಕೋತ್ಸವ ಮತ್ತು ಕ್ರೀಡೋತ್ಸವ ಸಂಭ್ರಮದಿAದ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಬಿ.ಕೆ. ದಿನೇಶ್ ಕುಮಾರ್, ಶಾಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳಿದ್ದು ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಗ್ರಾಮದ ಪ್ರಮುಖರಾದ ಪ್ರಸಾದ್ ಪಟೇಲ್ ಮಾತನಾಡಿ, ಶಾಲೆಗೆ ಸೇರಿದ ೭ ಎಕರೆ ಜಾಗವಿದ್ದು, ಇಲ್ಲಿ ವಸತಿ ಶಾಲೆಯನ್ನು ನಿರ್ಮಿಸಿದರೆ ಶಾಲೆ ಉಳಿಯಲಿದೆ. ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಬೇಕೆಂದು ಸಲಹೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಬಿ.ಎಲ್. ವಿಶ್ವನಾಥ್ ಸಮಾರಂಭದ ಕೊಡ್ಲಿಪೇಟೆ, ಜ. ೩೧: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲಿಕೋತ್ಸವ ಮತ್ತು ಕ್ರೀಡೋತ್ಸವ ಸಂಭ್ರಮದಿAದ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಬಿ.ಕೆ. ದಿನೇಶ್ ಕುಮಾರ್, ಶಾಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳಿದ್ದು ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಗ್ರಾಮದ ಪ್ರಮುಖರಾದ ಪ್ರಸಾದ್ ಪಟೇಲ್ ಮಾತನಾಡಿ, ಶಾಲೆಗೆ ಸೇರಿದ ೭ ಎಕರೆ ಜಾಗವಿದ್ದು, ಇಲ್ಲಿ ವಸತಿ ಶಾಲೆಯನ್ನು ನಿರ್ಮಿಸಿದರೆ ಶಾಲೆ ಉಳಿಯಲಿದೆ. ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಬೇಕೆಂದು ಸಲಹೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಬಿ.ಎಲ್. ವಿಶ್ವನಾಥ್ ಸಮಾರಂಭದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಘ್ನೇಶ್ವರ ತಂಡ ಪ್ರಥಮ , ಕಲ್ಲೇಶ್ವರ ತಂಡ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ವಿಘ್ನೇಶ್ವರ ಎ. ಪ್ರಥಮ, ವಿಘ್ನೇಶ್ವರ ಬಿ. ದ್ವಿತೀಯ, ಮೂರು ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಬಸವರಾಜ್ ಪ್ರಥಮ, ಧನುಷ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಮಹಿಳೆಯರ ವಿಭಾಗದ ಥ್ರೋ ಬಾಲ್ ಪಂದ್ಯಾಟದಲ್ಲಿ ಕಲ್ಲೇಶ್ವರ ತಂಡ ಬೆಂಬಳೂರು ಪ್ರಥಮ, ಬಸವೇಶ್ವರ ತಂಡ ಶಿವರಳ್ಳಿ ದ್ವಿತೀಯ ಹಾಗೂ ಹಗ್ಗ ಜಗ್ಗಾಟದಲ್ಲಿ ವಿಘ್ನೇಶ್ವರ ತಂಡ ಪ್ರಥಮ, ಕಲ್ಲೇಶ್ವರ ತಂಡ ದ್ವಿತೀಯ ಸ್ಥಾನ ಪಡೆಯಿತು. ಕಾಯಿಗೆ ಗುಂಡು ಹೊಡೆಯುವುದು, ಬಸ್ಸಿನ ಹುಡುಕಾಟ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.