ಪೊನ್ನಂಪೇಟೆ, ಜ. ೩೦: ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ೧೨೪ನೇ ಜನ್ಮ ದಿನಾಚರಣೆ ಆಚರಿಲಾಯಿತು. ಕಾರ್ಯಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸ ಲಾಯಿತು. ಈ ಸಂದರ್ಭ ಸಿ.ಐ.ಪಿ.ಯು. ಕಾಲೇಜಿನ ಕನ್ನಡ ಉಪನ್ಯಾಸಕಿ ಪಿ.ವಿ. ಸುಶ್ಮಿತ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ವ್ಯಕ್ತಿತ್ವ, ಶಿಸ್ತು, ಸಮಯಪಾಲನೆ ನೈಪುಣ್ಯತೆ, ಕಾರ್ಯಕ್ಷಮತೆ ಸರ್ವರೂ ಮೆಚ್ಚುವಂತದ್ದು. ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡರಲ್ಲೂ ಅಪ್ರತಿಮವಾದ ಮೇರು ವ್ಯಕ್ತಿತ್ವ ಕಾರ್ಯಪ್ಪನವರದು. ಅವರ ಶಿಸ್ತು, ಸಾಧನೆ, ಸರಳತೆ, ನಿಸ್ವಾರ್ಥತೆ, ಆತ್ಮಸ್ಥೆöÊರ್ಯ ಇವೆಲ್ಲವನ್ನು ನಾವು ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.