*ಗೋಣಿಕೊಪ್ಪ, ಜ. ೩೧: ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರನ್ನು ತಿತಿಮತಿ ಕಾರೆಕಂಡಿ ಗಿರಿಜನ ಹಾಡಿಯ ನಿವಾಸಿಗಳು, ಗ್ರಾಮಸ್ಥರು ಮತ್ತು ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು.

ಕಾವೇರಿ ಜಲಾನಯನ ಅಭಿವೃದ್ಧಿ ನಿಗಮದ ೯೦ ಲಕ್ಷ ಅನುದಾನದಲ್ಲಿ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಕಾರೆಕಂಡಿ ಗಿರಿಜನ ಹಾಡಿಯ ಕಾಂಕ್ರಿಟ್ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಿ ಈ ಭಾಗದ ಜನರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಹಿನ್ನೆಲೆ ಗೌರವಿಸಲಾಯಿತು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ವಿಜಯ, ಸದಸ್ಯರು ಗಳಾದ ಎನ್.ಎನ್. ಅನೂಪ್ ಕುಮಾರ್, ಆಶಾ, ಶಂಕರ, ಶ್ಯಾಮಲ, ಸುಬ್ರು, ಶೇಖರ, ಪೊನ್ನಿ, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ಸದಸ್ಯರುಗಳಾದ ಗೋವಿಂದ, ಶಕ್ತಿ ಕೇಂದ್ರ ಪ್ರಮುಖ್ ಶಿವು ಅಪ್ಪಿ, ಪ್ರಮುಖರುಗಳಾದ ಎಂ.ಎನ್. ಕೃಷ್ಣ, ಪಾಲೆಂಗಡ ಮನು ನಂಜಪ್ಪ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ನವೀನ್, ಗುತ್ತಿಗೆ ದಾರ ನಾಮೇರ ನವೀನ್, ದಿಲೀಪ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಜಗದೀಶ್, ಹಾಡಿ ನಿವಾಸಿಗಳು ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.