ಮಡಿಕೇರಿ, ಜ. ೩೧: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಆಯೋಗದ ಮಾರ್ಗಸೂಚಿಯ ಅನುಸಾರ ವಿವಿಧ ಪೊಲೀಸ್ ಠಾಣೆಯ ವೃತ್ತನಿರೀಕ್ಷಕರು ಹಾಗೂ ಉಪನಿರೀಕ್ಷಕರುಗಳನ್ನು ವರ್ಗಾವಣೆಗೊಂಡಿದ್ದಾರೆ. ಖಾಲಿ ಇದ್ದ ಸ್ಥಾನಕ್ಕೆ ನೂತನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಜಿಲ್ಲಾ ಡಿಎಸ್‌ಐಬಿಯ ವೃತ್ತ ನಿರೀಕ್ಷಕರಾಗಿದ್ದ ಐ.ಪಿ. ಮೇದಪ್ಪ ಮೈಸೂರು ನಗರಕ್ಕೆ, ಮೈಸೂರು ನಗರದಿಂದ ನಾಗೇಗೌಡ ಕೊಡಗು ಜಿಲ್ಲೆಯ ಡಿಎಸ್‌ಐಬಿ ವಿಭಾಗಕ್ಕೆ, ಮಡಿಕೇರಿ ಗ್ರಾಮಾಂತರ ವೃತ್ತದ ಉಪನಿರೀಕ್ಷಕ ಅನೂಪ್ ಮಾದಪ್ಪ ಮೈಸೂರು ನಗರದ ಸಿಸಿಬಿ ವಿಭಾಗಕ್ಕೆ, ಮೈಸೂರು ನಗರ ಸಿಸಿಬಿಯಿಂದ ಜಿ.ಶೇಖರ್ ಮಡಿಕೇರಿ ಗ್ರಾಮಾಂತರ ವಿಭಾಗಕ್ಕೆ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಚಾಮರಾಜನಗರಕ್ಕೆ ವರ್ಗಾವಣೆಗೊಂಡರೆ ಈ

ಸ್ಥಾನಕ್ಕೆ ಬಿ.ಎಸ್.ರವಿಶಂಕರ್ ನಿಯುಕ್ತಿ ಗೊಂಡಿದ್ದಾರೆ.

(ಮೊದಲ ಪುಟದಿಂದ) ಗೋಣಿಕೊಪ್ಪ ವೃತ್ತ ನಿರೀಕ್ಷಕ ಎಂ.ವಿ.ಗೋವಿAದರಾಜು ಮೈಸೂರು ಜಯಲಕ್ಷಿö್ಮಪುರಂಗೆ ಅವರ ಸ್ಥಾನಕ್ಕೆ ಚನ್ನರಾಯಪಟ್ಟಣದ ಕೆ.ಎಂ.ವಸAತ್, ಆಲನಹಳ್ಳಿ ಪೊಲೀಸ್ ಠಾಣೆಯಿಂದ ಕುಶಾಲನಗರ ಪೊಲೀಸ್ ಠಾಣೆಗೆ ಶ್ರೀಕಾಂತ್ ಜಿ.ಎನ್, ಶನಿವಾರಸಂತೆಯಿAದ ಚಾಮರಾಜನಗರದ ಸಂತೆ ಮಾರನಹಳ್ಳಿಗೆ ಎಸ್.ಪರಶಿವಮೂರ್ತಿ, ಮೈಸೂರು ಮಂಡಿ ಠಾಣೆಯಿಂದ ಶನಿವಾರಸಂತೆಗೆ ಎಸ್.ನಾಗೇಶ್ ನಿಯೋಜನೆಗೊಂಡಿದ್ದಾರೆ.

ಇದರೊಂದಿಗೆ ೧೩ ಉಪನಿರೀಕ್ಷಕರುಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯ ಹೆಚ್.ವಿ. ಚಂದ್ರಶೇಖರ್ ಹಾಸನ ಜಿಲ್ಲೆ ಹಿರಿಸಾವೆಗೆ, ಗೋಣಿಕೊಪ್ಪ ಕೆ.ಪಿ. ದೀಕ್ಷಿತ್ ಕುಮಾರ್ ಮಂಡ್ಯ ಜಿಲ್ಲೆಗೆ, ನಾಪೋಕ್ಲು ಪೊಲೀಸ್ ಠಾಣೆಯ ಎಂ.ಕೆ. ಸದಾಶಿವ ಕೊಡಗು ಡಿಸಿಆರ್‌ಬಿ ವಿಭಾಗಕ್ಕೆ, ಕುಶಾಲನಗರ ಸಂಚಾರ ಠಾಣೆಯ ಚಂದ್ರಪ್ಪ ಚನ್ನರಾಯಪಟ್ಟಣಕ್ಕೆ, ಕುಟ್ಟದ ಹೆಚ್.ಕೆ. ಮಹದೇವ್ ಮೈಸೂರು ದಕ್ಷಿಣ ವಿಭಾಗಕ್ಕೆ, ವೀರಾಜಪೇಟೆ ನಗರದ ಸಿ.ವಿ.ಶ್ರೀಧರ್ ಹುಣಸೂರು, ಕುಶಾಲನಗರ ಸಂಚಾರಿ ವಿಭಾಗದ ಹೆಚ್.ಟಿ. ಗೀತಾ ಪಿರಿಯಾಪಟ್ಟಣ, ಬಿ.ಎಸ್. ವಾಣಿಶ್ರೀ ಮಡಿಕೇರಿ ಗ್ರಾಮಾಂತರದಿAದ ಹಾಸನದ ಶಾಂತಿಗ್ರಾಮ, ಎ.ಬಿ. ರಾಧಾ ಮಡಿಕೇರಿಯಿಂದ ಹುಣಸೂರು, ಹೆಚ್.ಸಿ. ಸ್ವಾಮಿ ಸುಂಟಿಕೊಪ್ಪದಿAದ ಕೊಣನೂರು, ಕೆ.ಹೆಚ್. ಭಾರತಿ ಕುಶಾಲನಗರ ಗ್ರಾಮಾಂತರದಿAದ ಚಾಮರಾಜನಗರ, ಹೆಚ್.ಎಸ್. ರವಿ ಕುಟ್ಟದಿಂದ ಹುಣಸೂರು, ಹೆಚ್.ಸಿ. ಸುಬ್ರಮಣಿ ಪೊನ್ನಂಪೇಟೆಯಿAದ ಸರಗೂರಿಗೆ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಗಳಿಗೆ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು ನಿಯೋಜನೆಗೊಳಿಸಲಾಗಿದೆ. ವಿಧಾನಸಭಾ ಚುನಾವಣೆ : ಪೊಲೀಸ್ ಅಧಿಕಾರಿಗಳ ವರ್ಗಾವಣೆ - ನಿಯೋಜನೆ