ಕುಶಾಲನಗರ, ಜ. ೩೧: ಸಮೀಪದ ಶಿರಂಗಾಲ ವ್ಯಾಪ್ತಿಯ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸಂಘಟನೆಗಳು ಶ್ರಮಿಸುವುದರೊಂದಿಗೆ ಹಿಂದುಳಿದ ಹಾಗೂ ಅಶಕ್ತರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ವಿಶ್ವಕರ್ಮ ಮಠಾಧಿಪತಿ ಅನಂತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಕರೆ ನೀಡಿದರು. ಕುಶಾಲನಗರ ತಾಲೂಕು ವಿಶ್ವಕರ್ಮ ಕುಲಬಾಂಧವರು ಆಯೋಜಿಸಿದ್ದ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ ಎಂದರು.