ಸಿದ್ದಾಪುರ, ಜ. ೩೧: ಹಾಕತ್ತೂರು ಪ್ರೀಮಿಯರ್ ಲೀಗ್ ೧೦ನೇ ವರ್ಷದ ವಾಲಿಬಾಲ್ ಪಂದ್ಯಾಟ ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆಯಿತು. ೮ ತಂಡಗಳ ನಡುವೆ ನಡೆದ ಕ್ರೀಡಾಕೂಟದಲ್ಲಿ ಮಜೀದ್ ಮಾಲೀಕತ್ವದ ಸ್ಪೋರ್ಟ್ಸ್ ಸ್ಟಾರ್ ತಂಡ ಪ್ರಥಮ ಸ್ಥಾನದೊಂದಿಗೆ ಆಕರ್ಷಕ ಟ್ರೋಫಿ ಮತ್ತು ೪೦ ಸಾವಿರ ನಗದನ್ನು ತಮ್ಮದಾಗಿಸಿಕೊಂಡರೆ ಮುತಾಲಿಬ್ ಮಾಲೀಕತ್ವದ ಟೀಂ ಯುನೈಟೆಡ್ ತಂಡ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ ಹಾಗೂ ೩೦ ಸಾವಿರ ನಗದನ್ನು ಪಡೆದುಕೊಂಡಿತು.

ಬೆಸ್ಟ್ ಅಟ್ಯಾಕರ್ ಶುಹೈಬ್ ಮೂರ್ನಾಡು, ಬೆಸ್ಟ್ ಪಾಸರ್ ಸೋಮು ಮಡಿಕೇರಿ, ಬೆಸ್ಟ್ ಡಿಫೆಂಡರ್ ನೌಫಲ್ ಹಾಕತ್ತೂರು ಪ್ರಶಸ್ತಿಯನ್ನು ಪಡೆದುಕೊಂಡರು.

ಪAದ್ಯಾಟದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಎಸ್. ಪೊನ್ನಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಅಪ್ರು, ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕಾದರ್, ಹಾಕತ್ತೂರು ಜಮಾಅತ್ ಉಪಾಧ್ಯಕ್ಷ ಕಾಸಿಂ, ದಾನಿಗಳಾದ ಶಾಕಿಬ್ ಮೇಕೇರಿ, ಸ್ಥಳೀಯರಾದ ಅಲ್ತಾಫ್ ಹಾಗೂ ಇನ್ನಿತರರು ಹಾಜರಿದ್ದರು.