ಮಡಿಕೇರಿ, ಜ. ೩೧: ಪದ್ಮಶ್ರೀ ಗೌರವಕ್ಕೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಕೊಡವ ಸಮಾಜ ಅಧ್ಯಕ್ಷ ಮಂಡುವAಡ ಮುತ್ತಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಗೌರವ ದೊರೆತಿರುವುದು ಇಡೀ ಕೊಡವ ಜನಾಂಗಕ್ಕೆ ಹೆಮ್ಮೆ ತಂದಿದೆ. ಕೊಡವ ಸಾಂಸ್ಕೃತಿಕ ನೃತ್ಯ ಉಮ್ಮತ್ತಾಟ್‌ಗೆ ಮನ್ನಣೆ ಬರುವಂತಾಗಲು ರಾಣಿ ಅವರು ಶ್ರಮವಹಿಸಿದ್ದಾರೆ. ಇದರ ಫಲವಾಗಿ ಪದ್ಮಶ್ರೀ ಗೌರವ ಸಂದಿದೆ. ಈ ಹಿನ್ನೆಲೆ ಕೊಡವ ಸಮಾಜದ ವತಿಯಿಂದ ಪೊಮ್ಮಕ್ಕಡ ಕೂಟ, ಕೊಡವ ಕೇರಿ, ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಿಗ್ಗೆ ೯.೪೫ ಗಂಟೆಗೆ ಮಹದೇವಪೇಟೆ ಎ.ವಿ. ಶಾಲೆಯಿಂದ ತೆರೆದ ವಾಹನದಲ್ಲಿ ರಾಣಿ ಮಾಚಯ್ಯ ಮಡಿಕೇರಿ, ಜ. ೩೧: ಪದ್ಮಶ್ರೀ ಗೌರವಕ್ಕೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಕೊಡವ ಸಮಾಜ ಅಧ್ಯಕ್ಷ ಮಂಡುವAಡ ಮುತ್ತಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಗೌರವ ದೊರೆತಿರುವುದು ಇಡೀ ಕೊಡವ ಜನಾಂಗಕ್ಕೆ ಹೆಮ್ಮೆ ತಂದಿದೆ. ಕೊಡವ ಸಾಂಸ್ಕೃತಿಕ ನೃತ್ಯ ಉಮ್ಮತ್ತಾಟ್‌ಗೆ ಮನ್ನಣೆ ಬರುವಂತಾಗಲು ರಾಣಿ ಅವರು ಶ್ರಮವಹಿಸಿದ್ದಾರೆ. ಇದರ ಫಲವಾಗಿ ಪದ್ಮಶ್ರೀ ಗೌರವ ಸಂದಿದೆ. ಈ ಹಿನ್ನೆಲೆ ಕೊಡವ ಸಮಾಜದ ವತಿಯಿಂದ ಪೊಮ್ಮಕ್ಕಡ ಕೂಟ, ಕೊಡವ ಕೇರಿ, ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಿಗ್ಗೆ ೯.೪೫ ಗಂಟೆಗೆ ಮಹದೇವಪೇಟೆ ಎ.ವಿ. ಶಾಲೆಯಿಂದ ತೆರೆದ ವಾಹನದಲ್ಲಿ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸದರು.

ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕಿ ಕಾಂಡೇರ ಲಲ್ಲು ಕುಟ್ಟಪ್ಪ ಹಾಜರಿದ್ದರು.