ಮಡಿಕೇರಿ, ಜ. ೩೧: ಕೊಡಗಿನಲ್ಲಿ ಬೇಸಿಗೆಯ ಸಮಯ ಆರಂಭವಾಗುತ್ತಿದ್ದAತೆಯೇ ಕ್ರೀಡೆಗಳ ಕಲರವವೂ ಆರಂಭಗೊಳ್ಳುತ್ತವೆ. ಸದ್ಯದಲ್ಲೇ ಪ್ರತಿಷ್ಠಿತವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ಸೇರಿದಂತೆ ವಿವಿಧ ಜನಾಂಗೀಯ ಕ್ರೀಡಾಕೂಟಗಳು, ಸಂಘ - ಸಂಸ್ಥೆ, ಕ್ರೀಡಾಕ್ಲಬ್‌ಗಳ ಮೂಲಕವೂ ವಿವಿಧ ಕ್ರೀಡಾಕೂಟಗಳು ಜಿಲ್ಲೆಯಾದ್ಯಂತ ಬೇಸಿಗೆಯ ಅವಧಿಯುದ್ದಕ್ಕೂ ಕಂಡು ಬರಲಿದೆ.

ಇದೀಗ ಇವುಗಳ ಸಾಲಿಗೆ ಮತ್ತೊಂದು ಕ್ರೀಡಾಹಬ್ಬವಾಗಿ ಕೊಡವ ಕುಟುಂಬಗಳ ನಡುವೆ ಒಂದೇ ಆವರಣದಲ್ಲಿ ಹಾಕಿ - ಫುಟ್‌ಬಾಲ್ ಹಾಗೂ ಥ್ರೋಬಾಲ್ ಒಳಗೊಂಡ ಕ್ರೀಡಾಕೂಟವೊಂದು ಮಾರ್ಚ್ ೨ ರಿಂದ ಪೊನ್ನಂಪೇಟೆಯಲ್ಲಿ ಜರುಗಲಿದೆ.

ಆಕ್ಸ್ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆAಟ್ ಎಂಬ ಸಂಸ್ಥೆಯ ಕೆಲವು ಉತ್ಸಾಹಿ ಯುವಕರು ಇದನ್ನು ಆಯೋಜಿಸುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಅಜ್ಜಿಕುಟ್ಟೀರ ಸುಬ್ಬಯ್ಯ - ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ನ ಮೂಲಕ ಟ್ರಸ್ಟ್ನ ಪ್ರಮುಖರಾದ ಎ.ಎಸ್. ಪೊನ್ನಣ್ಣ ಅವರ ಪ್ರಾಯೋಜಕತ್ವದ ಸಹಕಾರದೊಂದಿಗೆ ‘‘ಕೊಡವ ಫ್ಯಾಮಿಲೀಸ್ ಸ್ಪೋರ್ಟ್ಸ್ ಫೆಸ್ಟಿವಲ್ ೨೦೨೩’’ ಜನರನ್ನು ರಂಜಿಸಲಿದೆ.

ಪೊನ್ನAಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಈ ಕ್ರೀಡಾ ಉತ್ಸವ ನಡೆಯಲಿದೆ. ಪುರುಷರಿಗಾಗಿ ಕೊಡವ ಕುಟುಂಬಗಳ ನಡುವೆ ಎ. ಸೈಡ್ ಫುಟ್‌ಬಾಲ್ ಹಾಗೂ ೬ ಎ ಸೈಡ್ ಹಾಕಿ ಹಾಗೂ ಮಹಿಳೆಯರಿಗೆ ೬ ಎ ಸೈಡ್ ಥ್ರೋಬಾಲ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದೆ.

ಫುಟ್‌ಬಾಲ್ ಹಾಗೂ ಹಾಕಿಗೆ ೫೦ ಕುಟುಂಬಗಳಿಗೆ ಹಾಗೂ ಥ್ರೋಬಾಲ್‌ಗೆ ಕೌಟುಂಬಿಕವಾಗಿ ಎಷ್ಟು ತಂಡಗಳು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. ಹಾಕಿಯಲ್ಲಿ ಆಯಾ ಕುಟುಂಬದವರೇ ಪಾಲ್ಗೊಳ್ಳಬೇಕಾಗಿದೆ. ಫುಟ್‌ಬಾಲ್ ಹಾಗೂ ಥ್ರೋಬಾಲ್‌ಗೆ ತಲಾ ಇಬ್ಬರು ಅತಿಥಿ ಆಟಗಾರರನ್ನು (ಜನಾಂಗದವರು) ಸೇರಿಸಿ ಕೊಳ್ಳಬಹುದಾಗಿದೆ.

ಮಾರ್ಚ್ ೨ ರಿಂದ ೫ ರ ತನಕ ಈ ಪಂದ್ಯಾವಳಿ ಒಂದೇ ಆವರಣದಲ್ಲಿ ನಡೆಯಲಿದೆ. ಸೆಮಿಫೈನಲ್ ಹಂತದಿAದ ಹೊನಲು ಬೆಳಕಿನಲ್ಲಿ ಪಂದ್ಯವನ್ನು

(ಮೊದಲ ಪುಟದಿಂದ) ನಡೆಸುವ ಚಿಂತನೆ ನಡೆಸಲಾಗಿದೆ. ಇದರೊಂದಿಗೆ ಆಕರ್ಷಕವಾದ ಮನರಂಜನಾ ಕಾರ್ಯಕ್ರಮಗಳೂ ಮೂಡಿ ಬರಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ರೂಪು - ರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಎ.ಎಸ್. ಪೊನ್ನಣ್ಣ ಅವರು ಈ ಕ್ರೀಡೆ ಆಯೋಜನೆಗೆ ವಿಶೇಷ ಸಹಕಾರ ನೀಡುತ್ತಿದ್ದಾರೆ ಎಂದು ಅವರುಗಳು ತಿಳಿಸಿದ್ದಾರೆ.

ಹಾಕಿ ಹಾಗೂ ಫುಟ್‌ಬಾಲ್‌ಗೆ ಈಗಾಗಲೇ ತಲಾ ೧೫ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿವೆ. ಮಹಿಳೆಯರ ಥ್ರೋಬಾಲ್‌ಗೂ ಹಲವು ಕುಟುಂಬಗಳು ಆಸಕ್ತಿ ತೋರಿರುವುದಾಗಿ ಆಕ್ಸ್ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆAಟ್‌ನ ಯುವಕರು ‘ಶಕ್ತಿ’ಗೆ ಮಾಹಿತಿ ನೀಡಿದರು. ಹಾಕಿ ಪಂದ್ಯಾವಳಿ ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ನ ಸಹಕಾರದೊಂದಿಗೆ ಜರುಗಲಿದ್ದು, ಈ ಸಂಸ್ಥೆಯಿAದ ಒಪ್ಪಿಗೆ ದೊರೆತಿದೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ಮೂಕಳಮಾಡ ಗಣಪತಿ (೮೯೫೧೨೮೭೩೦೧) ಹಾಗೂ ನಡಿಕೇರಿಯಂಡ ಬಿಪಿನ್ (೯೮೪೫೭೭೧೦೩೮) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ವಿಜೇತರಿಗೆ ಹಾಗೂ ಇತರ ಸಾಧಕರಿಗೆ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಹಾಕಿಯೊಂದಿಗೆ ಫುಟ್‌ಬಾಲ್ ಹಾಗೂ ಥ್ರೋಬಾಲ್ ಕ್ರೀಡೆಗಳನ್ನೂ ಉತ್ತೇಜಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಆಯೋಜಕರು ವಿವರವಿತ್ತಿದ್ದಾರೆ.