ಗAಭೀರವಾದ ವಿಚಾರ

ತಾ. ೨೭ ರ ಶಕ್ತಿ ದಿನಪತ್ರಿಕೆಯಲ್ಲಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪ್ರಕಟಿಸಿರುವ ವಿಷಯವಾದ ‘ಕೊಡಗು ಮತ್ತೆ ಮೊದಲಿನಂತಾಗುವುದೇ?’ ಎಂಬ ವಿಚಾರವು ಬಹಳ ಅರ್ಥಗರ್ಭಿತವಾಗಿದೆ. ಕೊಡಗಿನ ಜನರ ಕಣ್ತೆರೆಸುವಂತಿದೆ. ಕೊಡಗಿನ ಪ್ರತಿಯೊಬ್ಬ ನಾಗರಿಕರು ಜಾತಿ, ಭೇದ ಮತ್ತು ಪಕ್ಷ ಭೇದ ಮರೆತು ಮುಂದೆ ಹೆಜ್ಜೆ ಇಡುವಂತಾಗಬೇಕು. ‘ನಾಡ ಹಿತಕೋಸ್ಕರ ನಡೆಸುವ ಹೋರಾಟ ಅಪರಾಧವಲ್ಲ’ವೆಂಬ ಕಿವಿಮಾತಿನಲ್ಲಿ ಬಹಳ ಅರ್ಥವಿದ್ದು, ಪ್ರತಿಯೊಬ್ಬ ಕೊಡಗಿನ ಪ್ರಜೆಯೂ ಎಚ್ಚರಗೊಂಡು ವಿಧಾನಸಭೆಯ ಕ್ಷೇತ್ರಗಳ ಬಗ್ಗೆ ಚುನಾವಣೆಗೆ ಮೊದಲೇ ಜಾಗೃತರಾಗೋಣ.

- ಎಸ್.ಬಿ. ದೊರೆ ಗಣಪತಿ, ನಿವೃತ್ತ ಎ.ಎಸ್.ಐ., ಗುಮ್ಮನಕೊಲ್ಲಿ

ಕೊಡಗಿನ ಅಸ್ತಿತ್ವಕ್ಕೆ ಶಕ್ತಿ ತುಂಬಬೇಕಿದೆ

ತಾ. ೨೭ ರ ‘ಶಕ್ತಿ’ ಸಂಪಾದಕೀಯದಲ್ಲಿ ‘ಕೊಡಗು ಮತ್ತೆ ಮೊದಲಿನಂತಾಗುವುದೇ’ ಎಂಬ ಶಿರೋನಾಮೆಯಲ್ಲಿ ಕೊಡಗಿನ ಅಸ್ತಿತ್ವಕ್ಕೆ ಮತ್ತೆ ಮತ್ತಷ್ಟು ಶಕ್ತಿ ತುಂಬಬೇಕೆAಬ ಕಳಕಳಿ ಮೂಡಿರುವುದು ಸಮಯೋಚಿತ.

ಕೊಡಗಿನ ಮೂರು ತಾಲೂಕಿಗೆ ಮೂವರು ಜನಪ್ರತಿನಿಧಿಗಳ ಅವಶ್ಯಕತೆ ಖಂಡಿತಾ ಇದೆ. ಇದು ಜನಾಭಿಪ್ರಾಯವೂ ಆಗಿದೆ. ಆದರೆ, ಪರಿಸ್ಥಿತಿಯ ಒತ್ತಡದಿಂದ ಈ ಸದಾಭಿಪ್ರಾಯ ಜನಮಾನಸದ ಗಾಳಿಯಲ್ಲಿ ತೇಲಿ ಹೋದುದರಿಂದ ಸರಕಾರದ ಮೇಲೆ ಒತ್ತಡವನ್ನು ಅಭಿಮಂತ್ರಿಸಲಾರದ ದುಸ್ಥಿತಿಯಿಂದಾಗಿ ಈ ಅಭಿಪ್ರಾಯಗಳೆಲ್ಲವೂ ಕರಗಿಹೋದಂತಾಗಿರುವುದು ದುರದೃಷ್ಟಕರ. ಈಗ ಈ ವಿಷಯವನ್ನು ‘ಶಕ್ತಿ’ ಪ್ರಸ್ತಾಪಿಸುವುದರ ಮೂಲಕ ಜಿಲ್ಲೆಯ ವಿವಿಧ ಸಂಘಟನೆಗಳು ಜಾಗೃತಗೊಳ್ಳುವಂತೆ ಮಾಡಿರುವುದು ಒಂದು ಶುಭ ಸೂಚನೆ.

ಕಾಲವಿನ್ನೂ ಮಿಂಚಿಲ್ಲ. ನಮ್ಮ ಕೊಡಗಿನ ಪ್ರಭಾವೀ ಸಂಘಟನೆಗಳು ಜನಾಭಿಪ್ರಾಯದ ಸಭೆಗಳನ್ನು ಕರೆದು ಸರಕಾರದ ಮೇಲೆ ಒತ್ತಡ ಹೇರುವಂತಾಗಬೇಕು. ಈ ಜನತಾ ಕಾರ್ಯವನ್ನು ಕೊಡಗಿನ ಸಹೃದಯೀ ಜನತೆ ಕೂಡ ಒಕ್ಕೊರಲಿನಿಂದ ಬೆಂಬಲಿಸುವAತಾಗಬೇಕೆAಬುದೇ ನಮ್ಮ ಹಾರೈಕೆ. ಇವೆಲ್ಲ ಸಾಧಕಗಳ ಮಧ್ಯೆ ಪ್ರಸ್ತುತ ರಾಜ್ಯ ಸರಕಾರ ಕೂಡಲೇ ವಿಶೇಷ ಅಧಿವೇಶನವನ್ನು ಕರೆಯುವುದರ ಮೂಲಕ ಕೊಡಗಿನ ಈ ಮೂಲಭೂತ ಬೇಡಿಕೆಗೆ ಹಸಿರು ನಿಶಾನೆ ತೋರಿಸುವಂತಾಗಬೇಕೆAಬುದೇ ನಮ್ಮ ಕಳಕಳಿ - ನಮ್ಮ ಒತ್ತಾಯ.

- ಬೈ.ಶ್ರೀ. ಪ್ರಕಾಶ್, ಮಡಿಕೇರಿ

ಕೊಡಗಿನಲ್ಲಿ ಹೋರಾಟದ ಹೆಜ್ಜೆಯಿರಿಸುವಂತಾಗಲಿ

ಕೊಡಗಿನ ನೈಜ ಸಮಸ್ಯೆಗಳ ಬಗ್ಗೆ ಹೃದಯಸ್ಪರ್ಶಿ ಚಿತ್ರಣ ನೀಡಿದ “ಶಕ್ತಿ” ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರಿಗೆ ಅಭಿನಂದನೆಗಳು. ಇಂಥ ಸಮಯೋಚಿತ ಸಂಪಾದಕೀಯ ಲೇಖನಗಳನ್ನು ನೋಡಿದ ಬಳಿಕವಾದರೂ ಕೊಡಗಿನ ಜನತೆ ಎಚ್ಚೆತ್ತು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ಹೆಜ್ಜೆಯಿರಿಸುವಂತಾಗಲಿ; ಕೊಡಗಿನ ಜನತೆಗೆ ಕಾವೇರಿ ತಾಯಿ, ಶ್ರೀ ಇಗ್ಗುತಪ್ಪ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ.

- ಸಣ್ಣುವಂಡÀ ಡಾ. ಕಾವೇರಪ್ಪ, ನಾಪೋಕ್ಲು

ಹೆಚ್ಚಿನ ವಿಧಾನಸಭಾ ಕ್ಷೇತ್ರಗಳು ಅತ್ಯಗತ್ಯ

ಕೊಡಗು ಜಿಲ್ಲೆಯ ಬಹುತೇಕ ಅಭಿವೃದ್ಧಿ ಯೋಜನೆಗಳು "ಶಕ್ತಿ" ಚಿಂತನೆ ವರದಿಗಳ ಮುಖಾಂತರವೇ ನಡೆದಿದೆ. ಕೊಡಗಿನ ಜನತೆ, ಆಡಳಿತ ವಿಷಯದ ಬಗ್ಗೆ ಚಿಂತನೆ ಮಾಡಬೇಕಾದ ವರದಿ ಇದು. ಕೊಡಗು ಜಿಲ್ಲೆ, ಪ್ರತ್ಯೇಕ ಲೋಕಸಭೆ ಕ್ಷೇತ್ರ ಆಗುವುದರೊಂದಿಗೆ ವಿಶೇಷ ಆದ್ಯತೆ ಮೇರೆಗೆ ಮೂರರಿಂದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಆಗಲೇಬೇಕಾಗಿದೆ. ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಬಹುತೇಕ ವಲಯ ಕಚೇರಿಗಳಿಗೆ ಮೈಸೂರು ಅಥವಾ ಮಂಗಳೂರು ಜಿಲ್ಲೆಯನ್ನು ಅವಲಂಭಿಸಬೇಕಾಗಿದೆ.

ಜನಸಂಖ್ಯೆಯ ಕೊರತೆ ಇದ್ದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ನಡೆಯುವ ಮೂಲಕ ನೆರೆಯ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಆಲೋಚನೆ ಮಾಡಬಹುದು .

- ಎಂ.ಎನ್. ಚಂದ್ರಮೋಹನ್, ಕುಶಾಲನಗರ.

ಬಡಿದೆಬ್ಬಿಸಿದ ಸಂಪಾದಕೀಯ

ತಾ. ೨೭ರ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ‘ಕೊಡಗು ಮತ್ತೆ ಮೊದಲಿನಂತಾಗುವುದೇ’ ಸಂಪಾದಕಿಯ ನಿಜಕ್ಕೂ ಅರ್ಥಪೂರ್ಣವಾಗಿತ್ತು ಹಾಗೂ ಕಣ್ಣಿದ್ದು ಕುರುಡಾಗಿರುವ ವ್ಯವಸ್ಥೆಯ ಕುರಿತು ಬೆಳಕನ್ನು ಚೆಲ್ಲಿದೆ. ಜಿಲ್ಲೆಯ ಎಲ್ಲೆಡೆ ಪ್ರಮುಖವಾಗಿ ಹಳ್ಳಿ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಕೂಡ ಗುಂಡಿ ಬಿದ್ದಿರುವ ರಸ್ತೆಗಳು. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಹಲವಷ್ಟು ವರ್ಷಗಳ ಬೇಡಿಕೆಗಳಿಗೆ ಇನ್ನೂ ಸ್ಪಂದನ ಸಿಕ್ಕಿಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ನಮ್ಮ ಕೊಡಗು ಜಿಲ್ಲೆಗೆ ಮುಕ್ತಿಸಿಗುವುದೆಂದು? ಕೊಡಗು ಜಿಲ್ಲೆಯ ಸಮಸ್ಯೆಗಳ ನೈಜ ಚಿತ್ರಣವನ್ನು ಓದುಗರಿಗೆ ನೀಡಿ ಸರಕಾರ ಮತ್ತು ಸಂಬAಧಿಸಿದವರನ್ನು ಬಡಿದೆಬ್ಬಿಸಿದ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ನಿಜಕ್ಕೂ ಪ್ರಶಂಸನಾರ್ಹರು ಇವರನ್ನು ಮೆಚ್ಚಲೇಬೇಕು.

- ಬಿ.ಎಂ. ದಿನೇಶ್ ರೈ, ಮುಳ್ಳುಸೋಗೆ

ಮೂವರು ಪ್ರತಿನಿಧಿಗಳು ಬೇಕು

ಉತ್ತಮವಾದ ಲೇಖನ. ಹೌದು, ಕೊಡಗಿಗೆ ಸಮರ್ಥವಾದ ಮೂವರು ಪ್ರತಿನಿಧಿಗಳು ಬೇಕು.

- ಕಿಗ್ಗಾಲು ಗಿರೀಶ್.

ಸುಮ್ಮನಿದ್ದರೆ ಜಿಲ್ಲೆಯ ಹೆಸರೇ ಅಳಿಸಿಹೋಗುತ್ತದೆ

ಸಮರ್ಪಕ ಅಭಿಪ್ರಾಯವಾಗಿದೆ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ, ಕೊಡಗಿನ ಜನತೆ ಇನ್ನೂ ಸುಮ್ಮನಿದ್ದರೆ ಕೊಡಗಿನ ಹೆಸರೇ ಅಳಿಸಿಹೋಗುತ್ತದೆ, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು.

- ಕೊಡವನಾಡ್ ಸಂಘಟನೆ, ಪೊನ್ನಂಪೇಟೆ.

ಜನತೆ ನಿಜವಾದ ವಿರೋಧ ಪಕ್ಷವಾಗಬೇಕು

ಆಡಳಿತ, ವಿರೋಧ ಪಕ್ಷಗಳು ಜವಾಬ್ದಾರಿ ಮರೆತಿದ್ದರೆ, ಪ್ರಜಾಪ್ರಭುತ್ವದಲ್ಲಿ ನಿಜವಾದ ವಿರೋಧ ಪಕ್ಷ ಆಗಬೇಕಿರುವ ಜನತೆ ಆಡಳಿತ ಪಕ್ಷದ ಭಾಗವಾಗಿ ಯಾವುದೇ ಪ್ರತಿಕ್ರಿಯೆ, ವಿರೋಧ ವ್ಯಕ್ತಪಡಿಸುತ್ತಿಲ್ಲ. ವಿರೋಧ ಪಕ್ಷಗಳ ಹೋರಾಟಕ್ಕೆ ಜನ ಸಾಥ್ ನೀಡುತ್ತಿಲ್ಲ. ಮಾಧ್ಯಮಗಳು ಒಗ್ಗಟ್ಟಾಗಿ ಜನಸಂಖ್ಯೆ ಆದಾರಿಸಿ ಕೊಡಗಿಗೆ ಮೂರು ಅಸೆಂಬ್ಲಿ ಕ್ಷೇತ್ರ ಘೋಷಣೆ ಮಾಡುವವರೆಗೆ ನಿರ್ಣಾಯಕ ಹೋರಾಟ ಮಾಡಿದರೆ ಜಿಲ್ಲೆಯ ಹಿತದೃಷ್ಟಿಯಿಂದ ನಿಮ್ಮ ಅಭಿಲಾಷೆ ಈಡೇರಬಹುದು.

- ಯೂಸುಫ್ ಪಟೇಲ್, ಪತ್ರಕರ್ತ, ಬೆಂಗಳೂರು.

ಸರಿಯಾಗಿ ಕಾರ್ಯ ನಿರ್ವಹಿಸಿದರೆ ಈಡೇರುತ್ತದೆ

ಧನಾತ್ಮಕ ಚಿಂತನೆÀಯೊAದಿಗೆ, ಒಗ್ಗಟ್ಟಿನ ಮನೋಭಾವದೊಂದಿಗೆ, ಜವಾಬ್ದಾರಿಕೆಯಿಂದ ಕಾರ್ಯ ನಿರ್ವಹಿಸಿದರೆ ಮೂರು ಕ್ಷೇತ್ರಗಳ ಉದ್ದೇಶ ಈಡೇರುತ್ತದೆ.

- ಪಿ.ಟಿ. ಆಂತೊಣಿ, ಮಡಿಕೇರಿ.

ರಸ್ತೆ ದುರಸ್ತಿ ಬಗ್ಗೆ ಯಾರ ಬಳಿ ಹೇಳೋದು?

ನಮ್ಮ ರಸ್ತೆಗಳ ದುರವಸ್ಥೆಯನ್ನು ಯಾರ ಬಳಿ ಹೇಳೋದು. ಗುಂಡಿ ಮುಚ್ಚುವವರಿಲ್ಲ. ರಸ್ತೆ ಬದಿ ಗಿಡಗಂಟಿಗಳು ತುಂಬಿಹೋಗಿದೆ.

ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳು ಅಗತ್ಯವಿದೆ.

- ಎಸ್.ಇ. ಮೊಹಮ್ಮದ್ ಕುಂಞ, ಕೊಯನಾಡು.

ಸತ್ಯವನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಿ

ಇದು ಕಣ್ಣು ತೆರೆಸುವ ಲೇಖನವಾಗಿದೆ. ಇದನ್ನು ವಿಶ್ಲೇಷಿಸುವ ಎಲ್ಲಾ ನಾಗರಿಕರು ಕೈಜೋಡಿಸಲು ಮರೆಯದಿರಿ. ಸರ್ಕಾರ ಮತ್ತು ಸಂಬAಧಪಟ್ಟವರು ಸತ್ಯವನ್ನು ಪರಿಗಣಿಸಲಿ. ವಿಶೇಷ ಪ್ರಕರಣವಾಗಿ ಮನಗಾಣಲಿ. ಅಗತ್ಯ ಕ್ರಮವನ್ನು ಕೈಗೊಳ್ಳುವಂತಾಗಲಿ.

"ಏಳು ಎದ್ದೇಳು ಗುರಿ ಮುಟ್ಟುವವರೆಗೆ ನಿಲ್ಲಬೇಡ" ಎನ್ನುವುದನ್ನು ಜ್ಞಾಪಿಸಿಕೊಳ್ಳೋಣ.

- ತುಳಸಿ ಬೆಳ್ಯಪ್ಪ

ಮೂರು ಕ್ಷೇತ್ರಗಳಾಗಬೇಕು ಎಂದು ಅನೇಕರ ಬೆಂಬಲ

ಸAಪಾದಕೀಯದ ಅಂಶಗಳನ್ನು ಆಧರಿಸಿ ಮೂರು ವಿಧಾನಸಭಾ ಕ್ಷೇತ್ರಗಳು ಅಗತ್ಯ ಎಂದು ಈ ಕೆಳಗಿನವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂಲತ: ಕೊಡಗಿನವರಾಗಿ ಇತರ ಕಡೆ ನೆಲೆಸಿದವರೂ ಮೂರು ಕ್ಷೇತ್ರಗಳಾಗಬೇಕು ಎಂಬ ಅಭಿಪ್ರಾಯಕ್ಕೆ ಈ ಕೆಳಗೆ ಒಲವು ವ್ಯಕ್ತಪಡಿಸಿದ್ದಾರೆ.

ಹೆಚ್.ಕೆ. ಜಗದೀಶ್, ಗೋಣಿಕೊಪ್ಪಲು; ಶಶಿ ಕಿರಣ್ ಯಲವಟ್ಟಿ, ಮಡಿಕೇರಿ; ಚೋಕಂಡ ಜಾನ್ಸಿ ಪ್ರತಾಪ್; ವಿಷ್ಣು ನಾಚಪ್ಪ, ಮೈಸೂರು; ಕಡ್ಲೇರ ಕೀರ್ತನ್; ಲೋಕನಾಥ್ ಅಮೇಚೂರ್, ಮಡಿಕೇರಿ; ಕೆ.ಕೆ. ಶಂಕರ್ ನಾರಾಯಣ್ ಹೆಬ್ಬಾರ್, ಮಡಿಕೇರಿ; ಡಾ. ಕುಶುವಂತ್ ಕೋಳಿಬೈಲ್, ಮಡಿಕೇರಿ; ಕಂಬೇಯAಡ ಪುಷ್ಪ ದೇವಯ್ಯ, ಬೆಂಗಳೂರು; ಬಟ್ಟಿಯಂಡ ಲಿಖಿತ, ವೀರಾಜಪೇಟೆ; ಬಿ.ಎನ್. ರಾಜ್ ಗೋಪಾಲ್, ಮಡಿಕೇರಿ.; ಸೋಮು ಭೀಮರಾವ್, ಬೆಂಗಳೂರು; ನಡುವಟ್ಟಿರ ರಾಜೇಶ್; ಚಿತ್ರಾ ಸುಜನ್, ಮಡಿಕೇರಿ; ವಿಜಯ್ ಉತ್ತಯ್ಯ, ಮಡಿಕೇರಿ; ರಘುನಾಥ್ ಗೌಡ, ಗೋಣಿಕೊಪ್ಪಲು; ಕುಂಬೇರ ಶರು ಸುಬ್ಬಯ್ಯ, ವೀರಾಜಪೇಟೆ; ಸಂಪತ್ ಕುಮಾರ್ ಸರಳಾಯ, ಮಡಿಕೇರಿ; ಎಂ.ಸಿ. ಕಾವೇರಪ್ಪ, ಮಡಿಕೇರಿ; ತೀತಿಮಾಡ ಅನಿಲ್ ಅಪ್ಪಣ್ಣ; ಎಂ.ಎ. ಮನ್ಸೂರ್ ಆಲಿ, ನಾಪೋಕ್ಲು; ವಿ.ವಿ. ಪ್ರಕಾಶ್, ಮಡಿಕೇರಿ; ಕೊಟ್ಟುಕತ್ತೀರ ಪ್ರಕಾಶ್, ಮಡಿಕೇರಿ; ಸೋಮೆಯಂಡ ಕೌಶಲ್ಯ ಸತೀಶ್; ವಿಷ್ಣುಮೂರ್ತಿ ಭಟ್; ಸಿ.ಕೆ. ಶ್ರೀಪತಿ, ಮಡಿಕೇರಿ; ಅನಂತರಾಜ ಗೌಡ, ಬೆಂಗಳೂರು; ಕೊಲ್ಲೀರ ಉಮೇಶ್, ಗೋಣಿಕೊಪ್ಪಲು; ರಾಧಾಕೃಷ್ಣ ರೈ, ಮಡಿಕೇರಿ; ಮಂಡೇಪAಡ ಗೀತಾ ಮಂದಣ್ಣ, ಅಮ್ಮತ್ತಿ; ರಘು ಹೆಬ್ಬಾಲೆ; ಸುನಿಲ್ ಪೊನ್ನೆಟ್ಟಿ, ಕುಶಾಲನಗರ; ಕುಲ್‌ದೀಪ್ ಪೂಣಚ್ಚ, ಪೊನ್ನಂಪೇಟೆ; ಲಲಿನಾ ಪೂಣಚ್ಚ, ವೀರಾಜಪೇಟೆ; ಕೆಕೆಜಿ ಗಂಗಾಧರನ್, ಬೆಂಗಳೂರು; ಜಿ.ಕೆ. ವಿಜಯರಾಘವನ್, ಬೆಂಗಳೂರು; ವಹೀದ್ ಜಾನ್, ಸುಂಟಿಕೊಪ್ಪ; ಯು.ಆರ್. ನಾಗೇಶ್, ಮಂಗಳೂರು; ಗೀತಾ ಸತೀಶ್; ಕೃಷ್ಣಮೂರ್ತಿ ಶಬರಿತ್ತಾಯ, ಮೈಸೂರು; ಗಂಗಾಧರ ಶೆಟ್ಟಿ; ರಾಧಾಕೃಷ್ಣ ಕನ್ನಾರಾಯ; ಸಿ.ಎಸ್. ಸತೀಶ್; ರಾಮು ನಾಯಕ್, ಬೆಂಗಳೂರು; ನರಸಿಂಹರಾಜ ದೇಸಾಯಿ, ಮಡಿಕೇರಿ; ಅಚ್ಚಾಂಡಿರ ಪವನ್ ಪೆಮ್ಮಯ್ಯ, ಮಡಿಕೇರಿ; ಬಿ.ಆರ್. ಮಂಜುನಾಥ್; ರಜತ್ ರಾಜ್, ಮಡಿಕೇರಿ; ರಾಜೇಂದ್ರÀಕುಮಾರ್, ಮಂಡ್ಯ; ಎ.ಪಿ. ಕಾರ್ಯಪ್ಪ, ಬೆಂಗಳೂರು; ಟಿ.ಎಂ. ಕುಟ್ಟಪ್ಪ, ಮಡಿಕೇರಿ; ಟಿ.ಜಿ.ಸತೀಶ್, ಮಡಿಕೇರಿ; ಪಂಚಮ್ ಬೋಪಣ್ಣ; ಕರ್ಷನ್ ಉತ್ತಪ್ಪ; ಸತೀಶ್ (ಅಬ್ಬಿ), ವೀರಾಜಪೇಟೆ; ಪಾಲಂದಿರ ಜೋಯಪ್ಪ; ಬಿ.ಸಿ. ಬೋಪಣ್ಣ, ಬೆಂಗಳೂರು; ಹೆಚ್.ಆರ್.ಎನ್. ಮೂರ್ತಿ, ಮಡಿಕೇರಿ; ಚಂಗಣಮಾಡ ಚರಣ್ ಚಂಗಪ್ಪ, ಬೆಂಗಳೂರು; ಡೈಸಿ ಫ್ರಾನ್ಸಿಸ್; ಷರೀಫ್, ಮಡಿಕೇರಿ; ಐಮುಡಿಯಂಡ ರಾಯ್ ತಿಮ್ಮಯ್ಯ, ಬೆಂಗಳೂರು; ನವೀನ್, ಮಡಿಕೇರಿ; ಕೆ.ಎಂ. ಇಸ್ಮಾಯಿಲ್, ಮಡಿಕೇರಿ; ಶರತ್ ಕುಮಾರ್ ಪೂಜಾರಿ; ದೀಪಕ್ ಡೇನಿಯಲ್ ಪೂಜಾರಿ, ಮಡಿಕೇರಿ; ಮುಬಾರಕ್ ಕೊಡಗು; ಚಂದ್ರಶೇಖರ್ ಭಟ್; ಕಟ್ಟೆಮನೆ ಶ್ರೀನಿವಾಸ ರವಿ, ಮೈಸೂರು; ಪರಮೇಶ್ ಗಣಪಮಯ್ಯ, ಮಡಿಕೇರಿ; ಕುಪ್ಪಣಮಾಡ ಅರ್ಜುನ್, ಬೆಂಗಳೂರು; ಮೊಣ್ಣಂಡ ಸುಮತಿ, ಮಡಿಕೇರಿ; ಹೆಚ್.ಟಿ. ಸೋಮ್‌ಶೇಖರ್; ಗಿರೀಶ್ ಕಾಂತ್ ಗೌಡ ಪರಪ್ಪು, ಮಡಿಕೇರಿ; ಹೆಚ್. ಎನ್. ಸುಬ್ರಮಣ್ಯ, ಕುಶಾಲನಗರ.