ಎ.ಎಸ್. ಪೊನ್ನಣ್ಣ

ವೀರಾಜಪೇಟೆ, ಜ. ೨೯: ಸಾಧನೆಯೊಂದಿಗೆ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದ್ದು ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಕರೆ ನೀಡಿದರು.

ಶಂಸುಲ್ ಉಲಾಮಾ ಅಕಾಡೆಮಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಬೃಹತ್ ಮಾದರಿ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಓದು - ಕಲಿಕೆ ಮೂಲಕ ಪ್ರತಿಭಾನ್ವಿತರಾಗಿ ಗುರುತಿಸಿ ಕೊಳ್ಳುವುದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು. ಭವಿಷ್ಯದ ಚಿಂತನೆಯೊAದಿಗೆ ಮಾದರಿ ಪ್ರದರ್ಶನ ಆಯೋಜಿಸಿ ಗಮನ ಸೆಳೆದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜು ಪ್ರಾಂಶುಪಾಲೆ ಭಾನುಮತಿ ಮಾತನಾಡಿ, ಸಾಧಿಸುವ ಛಲವಿದ್ದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದ್ದು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಶಂಸುಲ್ ಉಲಾಮ ಕಾಲೇಜು ಆಡಳಿತ ಮಂಡಳಿ ಅವಕಾಶ ಕಲ್ಪಿಸಿದ್ದು ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಪದವಿ ವಿಭಾಗ ವಿದ್ಯಾರ್ಥಿಗಳು ರಚಿಸಿದ ಮಾದರಿ ಪ್ರದರ್ಶನ ಇತರ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಮಾಜ ಸೇವಕ ಡಿಎಚ್‌ಎಸ್ ಸೂಫಿ ಹಾಜಿ, ಶಂಸುಲ್ ಉಲಾಮ ಅಕಾಡೆಮಿ ಕಾಲೇಜು ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಮತೀನ್, ಪ್ರಮುಖರಾದ ಉಮ್ಮರ್ ಫೈಝಿ, ಸಲೀಂ ಹಾಜಿ, ಮೊಹಮ್ಮದ್ ಅಲಿ ಹಾಜಿ, ರೌವೂಪ್ ಹಾಜಿ, ಬಶೀರ್ ಹಾಜಿ, ಲತೀಫ್, ಅಮೀದ್ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.