ಗೋಣಿಕೊಪ್ಪ ವರದಿ, ಜ. ೨೯: ಪರಿಸರಕ್ಕೆ ಮಾರಕವಾಗುತ್ತಿರುವ ಎಲೆಕ್ಟಾçನಿಕ್ ವಸ್ತುಗಳನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಉದ್ದೇಶದಿಂದ ಫೆಬ್ರವರಿ ೪ ರಂದು ಇ. ತ್ಯಾಜ್ಯ ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ ತಿಳಿಸಿದ್ದಾರೆ.

ಗೋಣಿಕೊಪ್ಪ, ವೀರಾಜಪೇಟೆ, ಪಾಲಿಬೆಟ್ಟ, ಅಮ್ಮತ್ತಿ ಹಾಗೂ ಸಿದ್ದಾಪುರ ಲಯನ್ಸ್ ಕ್ಲಬ್ ವತಿಯಿಂದ ಇ-ತ್ಯಾಜ್ಯ ಸಂಗ್ರಹಿಸಲಾಗುವುದು. ಸಾರ್ವಜನಿಕರು ಕೆಟ್ಟಿರುವ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟಾçನಿಕ್ ಉಪಕರಣಗಳನ್ನು ನೀಡಿ ಸಹಕರಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಣಿಕೊಪ್ಪದಲ್ಲಿ ಅಂಚೆ ಕಚೇರಿ ಇರುವ ಲೋಕೇಶ್ ಕಾರ್ಯಪ್ಪ ಅವರಿಗೆ ಸೇರಿದ ಕಟ್ಟಡ ಹಾಗೂ ಮಾದಪ್ಪ ಪೆಟ್ರೋಲಿಯಂ, ಅಮ್ಮತ್ತಿಯಲ್ಲಿ ಎಪಿಎಂಸಿ ಕಟ್ಟಡ, ವೀರಾಜಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರು ಇರುವ ಒವರ್ ಡ್ರೆöÊವ್ ಮಳಿಗೆ, ಪಾಲಿಬೆಟ್ಟದಲ್ಲಿ ಅನುಗ್ರಹ

(ಮೊದಲ ಪುಟದಿಂದ) ಲಯನ್ಸ್ ಆವರಣ, ಸಿದ್ದಾಪುರದಲ್ಲಿ ಕರಡಿಗೋಡು ರಸ್ತೆಯ ಲಯನ್ಸ್ ಕ್ಲಬ್ ಆವರಣದಲ್ಲಿ ತ್ಯಾಜ್ಯವನ್ನು ಇಡಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸಂಗ್ರಹಿಸಿದರೆ ಶಾಲಾ-ಕಾಲೇಜಿಗೆ ತೆರಳಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಎಲೆಕ್ಟಾçನಿಕ್ ತ್ಯಾಜ್ಯಗಳಲ್ಲಿ ಟಿ.ವಿ. ಮೊಬೈಲ್ ಫೋನ್, ಫ್ರಿಡ್ಜ್, ಎ.ಸಿ, ವಾಷಿಂಗ್ ಮಷಿನ್, ಚಾರ್ಜರ್, ಪವರ್‌ಬ್ಯಾಂಕ್, ಕಂಪ್ಯೂಟರ್, ಬಿಡಿಭಾಗಗಳನ್ನು ಇಡಬಹುದಾಗಿದೆ. ದೇಶದಲ್ಲಿ ಸುಮಾರು ೩೨ ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಪರಿಸರ ಸ್ನೇಹಿ ವಸ್ತುಗಳ ಅಲಭ್ಯತೆ, ಸೂಕ್ತ ವಿಲೇವಾರಿ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ ಹೆಚ್ಚಿಸುತ್ತಿದೆ. ಪಾದರಸ, ಲಿಥಿಯಂ, ಬೋರಿಯಂ ರಾಸಾಯನಿಕಗಳು ನದಿ, ಸರೋವರಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಅವೈಜ್ಞಾನಿಕ ದಹನದಿಂದ ಗಾಳಿಗೆ ಸೇರುವ ಸೀಸಾ ಕ್ಯಾಡಿಯಂ ಅನಿಲಗಳು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ಅದ್ದರಿಂದ ವೈಜ್ಞಾನಿಕ ವಿಲೇವಾರಿ, ಮರು ಬಳಕೆ ಮಾಡಲು ಲಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಯೋಜನೆ ರೂಪಿಸಿಕೊಂಡಿದ್ದು, ವೈಜ್ಞಾನಿಕ ವಿಲೇವಾರಿ ಸಂಸ್ಥೆ, ಪುನರ್ಬಳಕೆಗೆ ಯೋಗ್ಯವಾದವುಗಳನ್ನು ಸಂಗ್ರಹಿಸಿ ಮರು ಬಳಕೆಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರ ಬೆಂಬಲ ಅಗತ್ಯ ಎಂದರು. ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಆಯಾ ಭಾಗದ ಪ್ರಮುಖರನ್ನು ಸಂಪರ್ಕಿಸಲು ಗೋಣಿಕೊಪ್ಪ - ೯೮೪೫೭೬೩೩೨೦, ವೀರಾಜಪೇಟೆ - ೯೮೪೫೯೧೯೮೧೯, ಪಾಲಿಬೆಟ್ಟ - ೮೭೨೨೨೨೪೮೪೮, ಅಮ್ಮತ್ತಿ -೯೧೦೮೮೮೬೫೪೯, ಸಿದ್ದಾಪುರ - ೯೮೮೦೧೧೯೭೯೮ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪುಟ್ಟಿಚಂಡ ನರೇಂದ್ರ, ಪಾಲಿಬೆಟ್ಟ ಅಧ್ಯಕ್ಷ ಡೋಮಿ ರೊಸಾರಿಯೋ, ಖಜಾಂಚಿ ರಾಣಾ ನಂಜಪ್ಪ, ಅಮ್ಮತ್ತಿ ಅಧ್ಯಕ್ಷೆ ಪೊರುಕೊಂಡ ಸವಿತಾ ಬೋಪಣ್ಣ, ಸಿದ್ದಾಪುರ ಅಧ್ಯಕ್ಷ ಕೀತಿಯಂಡ ವಿವೇಕ್ ಜೋಯಪ್ಪ ಇದ್ದರು.