ಚೆಟ್ಟಳ್ಳಿ, ಜ. ೨೯: ಬಿಸಿಲಧಗೆ ದಿನದಿಂದ ದಿನಕ್ಕೆ ಏರತೊಡಗುತ್ತಿರುವ ಹಿನ್ನೆಲೆ ರಾಷ್ಟಿçÃಯ ಹುಲಿ ಸಂರಕ್ಷಣಾ ಮೀಸಲು ಅರಣ್ಯದೊಳಗಿನ ವನ್ಯಜೀವಿಗಳು ನೀರನ್ನು ಹುಡುಕಿಕೊಂಡು ಕೆರೆ, ತೋಡು, ತೊರೆಗಳತ್ತ ಬರುತ್ತಿವೆ.ಈ ಅಪರೂಪದ ದೃಶ್ಯವನ್ನು ಮಾಯಮುಡಿಯ ಹವ್ಯಾಸಿ ಛಾಯಾಗ್ರಾಹಕ ಅಪ್ಪನೆರವಂಡ ವಿನು ಕುಂಞ್ಞಪ್ಪ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮನುಷ್ಯರಂತೆ ಪ್ರಾಣಿ ಪಕ್ಷಿಗಳಿಗೂ ಆಹಾರ ಎಷ್ಟು ಮುಖ್ಯವೋ ಅದೇ ರೀತಿ ನೀರು ಅಷ್ಟೇ ಮುಖ್ಯ. ಬೇಸಿಗೆಯ ಬಿಸಿಲು ಏರತೊಡಗಿದಂತೆ ಪ್ರಾಣಿ-ಪಕ್ಷಿಗಳು ನೀರನ್ನು ಅರಸಿ ಬಲುದೂರ ತೆರಳುತ್ತವೆ. ಅರಣ್ಯ ಇಲಾಖೆ ಅರಣ್ಯದೊಳಗೆ ಹಲವೆಡೆ ಕೆರೆಗಳನ್ನು ತೆಗೆದು ವನ್ಯಜೀವಿಗಳಿಗೆ ನೀರನ್ನು ಒದಗಿಸುವ ವ್ಯವಸ್ಥೆ ಮಾಡಿದೆ.