ಭಾರತ ಮಹಿಳೆಯರ ಮುಡಿಗೆ ಟಿ೨೦ ವಿಶ್ವಕಪ್

ಪೊಟ್ಚೆಫ್ಸ್ಟ್ರೂಮ್, ಜ. ೨೯: ಜಾಗತಿಕ ಕ್ರಿಕೆಟ್ ಲೋಕದಲ್ಲಿ ಭಾರತ ತಂಡ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ಚೊಚ್ಚಲ ಅಂಡರ್ ೧೯ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ದಕ್ಷಿಣ ಆಫ್ರಿಕಾದ ಪೊಟ್ಚೆಫ್ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್ನಲ್ಲಿ ಇಂದು ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆAಡ್ ತಂಡವನ್ನು ಭಾರತ ಮಹಿಳಾ ಯುವ ಪಡೆ ೭ ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದೆ. ಇಂದು ನಡೆದ ಪಂದ್ಯದಲ್ಲಿ ಇಂಗ್ಲೆAಡ್ ಮಹಿಳಾ ಯುವ ತಂಡ ನೀಡಿದ ೬೯ ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತ ಮಹಿಳಾ ತಂಡ ಕೇವಲ ೧೪ ಓವರ್‌ನಲ್ಲಿಯೇ ೩ ವಿಕೆಟ್ ಕಳೆದು ಗುರಿ ಸಾಧಿಸಿತು. ಆ ಮೂಲಕ ಐಸಿಸಿಯ ಚೊಚ್ಚಲ ಮಹಿಳಾ ಅಂಡರ್ ೧೯ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆAಡ್ ತಂಡ ಭಾರತೀಯ ಬೌಲರ್‌ಗಳ ಸಾಂಘಿಕ ಆಕ್ರಮಣಕ್ಕೆ ಪತರಗುಟ್ಟಿ ರನ್ ಗಳಿಸಲು ಪರದಾಡಿತು. ಇಂಗ್ಲೆAಡ್ ನಾಲ್ಕು ಮಂದಿ ಆಟಗಾರ್ತಿಯರು ಮಾತ್ರ ಎರಡಂಕಿ ಮೊತ್ತ ಕಲೆ ಹಾಕಿದರೆ, ೭ ಮಂದಿ ಆಟಗಾರ್ತಿಯರು ಒಂದAಕಿಗೇ ಔಟಾಗಿದ್ದಾರೆ. ಅದರಲ್ಲೂ ಮೂರು ಮಂದಿ ಶೂನ್ಯ ಸುತ್ತಿರುವುದು ಭಾರತದ ಬೌಲಿಂಗ್ ಪಾರಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಭಾರತದ ಪರ ಟೈಟಸ್ ಸಾಧು, ಅರ್ಚನಾ ದೇವಿ, ಪಾರ್ಸವಿ ಚೋಪ್ರಾ ತಲಾ ೨ ವಿಕೆಟ್ ಪಡೆದರೆ, ಮನ್ನತ್ ಕಶ್ಯಪ್, ನಾಯಕಿ ಶೆಫಾಲಿ ವರ್ಮಾ, ಸೋನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಹಾಕಿ ವಿಶ್ವಕಪ್ : ಜರ್ಮನಿ ಚಾಂಪಿಯನ್

ಭುವನೇಶ್ವರ, ಜ. ೨೯: ಹಾಲಿ ಚಾಂಪಿಯನ್ ಬೆಲ್ಲಿಯಮ್ ತಂಡವನ್ನು ರವಿವಾರ ನಡೆದ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ೫-೪ ಅಂತರದಿAದ ರೋಚಕವಾಗಿ ಮಣಿಸಿದ ಜರ್ಮನಿ ಮೂರನೇ ಬಾರಿ ಹಾಕಿ ವಿಶ್ವಕಪ್ ಜಯಿಸಿದೆ. ಈ ಸೋಲಿನಿಂದಾಗಿ ಬೆಲ್ಲಿಯಮ್ ತಂಡಕ್ಕೆ ಪಾಕಿಸ್ತಾನ, ಜರ್ಮನಿ ಹಾಗೂ ಆಸ್ಟೆçÃಲಿಯದ ನಂತರ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ ೪ನೇ ತಂಡ ಎಂಬ ಹಿರಿಮೆಗೆ ಪಾತ್ರವಾಗುವ ಕನಸು ಈಡೇರಲಿಲ್ಲ. ಆದರೆ ಅದು ಕೊನೆಯ ತನಕ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು. ಇದಕ್ಕೂ ಮೊದಲು ಕಳಿಂಗ ಸ್ಟೇಡಿಯಮ್‌ನಲ್ಲಿ ಉಭಯ ತಂಡಗಳು ನಿಗದಿತ ಸಮಯದ ಆಟದಲ್ಲಿ ತೀವ್ರ ಪೈಪೋಟಿ ನಡೆಸಿದ್ದು, ೩-೩ರಿಂದ ಸಮಬಲ ಸಾಧಿಸಿದವು. ಈ ಹಿನ್ನೆಲೆಯಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಗುಂಡಿನ ದಾಳಿಯಿಂದ ಒಡಿಶಾ ಸಚಿವ ನಿಧನ

ಭುವನೇಶ್ವರ್, ಜ. ೨೯: ಪೊಲೀಸ್ ಸಿಬ್ಬಂದಿಯಿAದಲೇ ಗುಂಡಿನ ದಾಳಿಗೆ ಗುರಿಯಾಗಿದ್ದ ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ನಿಧನರಾಗಿದ್ದಾರೆ. ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್‌ನ ಗಾಂಧಿ ಚಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ೧೨.೩೦ಕ್ಕೆ ಪೊಲೀಸ್ ಅಧಿಕಾರಿ ಎಎಸ್‌ಐ ಗೋಪಾಲ್ ಚಂದ್ರ ದಾಸ್ ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೇ ಸಚಿವರು ಕೊನೆಯುಸಿರೆಳೆದಿದ್ದಾರೆ. ನಬ ಕಿಶೋರ್, ಬಿಜು ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ಪ್ರಬಲ ಸಚಿವರಲ್ಲೊಬ್ಬರಾಗಿದ್ದರು. ಸಚಿವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿತ್ತು. ನಬ ದಾಸ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡಿದ್ದರು. ನಬ ಕಿಶೋರ್ ದಾಸ್ ಅವರು ಇತ್ತೀಚೆಗೆ ಮಹಾರಾಷ್ಟçದ ಶನಿ ಶಿಂಗನಾಪುರ ದೇವಸ್ಥಾನಕ್ಕೆ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದರು. ಆರೋಪಿ ಗೋಪಾಲ್ ಚಂದ್ರ ದಾಸ್‌ನ್ನು ಪೊಲೀಸರು ಬಂಧಿಸಿದ್ದಾರೆ.

ವಿಷ್ಣುವರ್ಧನ್ ಸ್ಮಾರಕ ಅನಾವರಣ

ಮೈಸೂರು, ಜ. ೨೯: ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನಲ್ಲಿ ಇಂದು ವಿಷ್ಣು ಸ್ಮಾರಕ ಅನಾವರಣವಾಗಿದೆ. ಚಲನಚಿತ್ರ ನಟ ವಿಷ್ಣುವರ್ಧನ್ ಅಭಿಮಾನಿಗಳ ಮುಗಿಲುಮುಟ್ಟುವ ಜಯಘೋಷದ ನಡುವೆ ‘ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆ ಮಾಡಿದರು. ಮೈಸೂರಿನ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ ‘ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ ೭ ಅಡಿ ಎತ್ತರದ ಪ್ರತಿಮೆಯನ್ನೂ ಅವರು ಅನಾವರಣಗೊಳಿಸಿದರು.

ಇರಾನ್‌ನಲ್ಲಿ ಭೂಕಂಪ - ೭ ಮಂದಿ ಸಾವು

ಟೆಹ್ರಾನ್, ಜ. ೨೯: ವಾಯುವ್ಯ ಇರಾನ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ೭ ಜನ ಮೃತಪಟ್ಟಿದ್ದಾರೆ. ೪೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ೫.೯ ರಷ್ಟು ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಮತ್ತು ಭೂಕಂಪನವು ಇರಾನ್ ಮತ್ತು ಟರ್ಕಿ ಗಡಿ ಅಂಚಿನಲ್ಲಿರುವ ಖೋಯ ನಗರ ಸಮೀಪಿಸಿದೆ. ಇರಾನ್‌ನ ಪಶ್ಚಿಮ ಅಜೆರ್‌ಬೈಜಾನ್ ಪ್ರಾಂತ್ಯದ ಪ್ರದೇಶಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಇರಾನ್ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪೀಡಿತ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದೆ, ಘನೀಕರಿಸುವ ತಾಪಮಾನ ಮತ್ತು ಕೆಲವು ವಿದ್ಯುತ್ ಕಡಿತ ವರದಿಯಾಗಿದೆ ಎಂದು ತುರ್ತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೊವಾಕ್ ಜೊಕೊವಿಚ್ ಚಾಂಪಿಯನ್

ಮೆಲ್ಬೋರ್ನ್, ಜ. ೨೯: ಪ್ರತಿಷ್ಠಿತ ಆಸ್ಟೆçÃಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರಾö್ಯನ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದು, ಈ ಮೂಲಕ ಸ್ಪೇನ್‌ನ ರಾಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾನುವಾರ ರಾಡ್ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಮುಖಾಮುಖಿಯಲ್ಲಿ ಜೊಕೊವಿಚ್ ಅವರು ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಸ್ ವಿರುದ್ಧ ೬-೩, ೭-೬ (೭-೪), ೭-೬ (೭-೫)ರ ಅಂತರದಲ್ಲಿ ಗೆಲುವು ದಾಖಲಿಸಿದರು. ಪಂದ್ಯದುದ್ಧಕ್ಕೂ ಎದು ರಾಳಿ ವಿರುದ್ಧ ಸವಾರಿ ಮಾಡಿದ ಜೊಕೊವಿಚ್ ನೂತನ ಇತಿಹಾಸ ಸೃಷ್ಟಿಸಿದರು. ಈ ಗೆಲುವಿನ ಮೂಲಕ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯ ೨೨ ಗ್ರ‍್ಯಾನ್‌ಸ್ಲಾಮ್ ಪ್ರಶಸ್ತಿ ಸಾಧನೆಯನ್ನು ಜಾಕೋವಿಚ್ ಸರಿಗಟ್ಟಿದ್ದಾರೆ.

ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಮೃತ

ಬೆಳಗಾವಿ, ಜ. ೨೯: ಮಧ್ಯಪ್ರದೇಶದಲ್ಲಿ ಸುಖೋಯ್-೩೦ಎಂಕೆಐ ಮತ್ತು ಮಿರಾಜ್-೨೦೦೦ ಯುದ್ಧ ವಿಮಾನಗಳ ನಡುವೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ವಿಂಗ್ ಕಮಾಂಡರ್ ಹನುಮಂತ್ ರಾವ್ ಸಾರಥಿ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಬೆಳಗಾವಿಗೆ ತರಲಾಗಿದೆ. ಭಾರತೀಯ ವಾಯುಪಡೆಯ (ಐಎಎಫ್) ಎರಡು ಮುಂಚೂಣಿ ಯುದ್ಧ ವಿಮಾನಗಳು ಶನಿವಾರ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ತರಬೇತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪತನಗೊಂಡಿದ್ದವು. ಇದರ ಪರಿಣಾಮವಾಗಿ ವಿಂಗ್ ಕಮಾಂಡರ್ ಸಾರಥಿ ಸಾವಿಗೀಡಾಗಿದ್ದರು ಮತ್ತು ಇತರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಬಂದರು. ವಿಶೇಷ ಐಎಎಫ್ ವಿಮಾನದ ಮೂಲಕ ಸಾರಥಿ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ನಂತರ ಅದನ್ನು ಗಣೇಶಪುರದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು.

ಕುಕ್ಕರ್ ಸ್ಫೋಟದ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್‌ಐಎ

ಬೆಂಗಳೂರು, ಜ. ೨೯: ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ಚೇತರಿಸಿಕೊಂಡ ನಂತರ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಸುಟ್ಟ ಗಾಯಗಳಿಂದ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರಿಕ್, ಗಾಯಗಳಿಂದ ಚೇತರಿಸಿಕೊಂಡಿರುವುದಾಗಿ ತಿಳಿದುಬಂದಿದೆ.