ಮಡಿಕೇರಿ, ಜ. ೨೯: ಪೊನ್ನಂಪೇಟೆ ತಾಲೂಕು ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಇತ್ತೀಚೆಗೆ ನಡೆಯಿತು. ಶಿಲಾಕೆತ್ತನೆಯ ನೂತನ ಗುಡಿಯನ್ನು ತಾ. ೨೫ರಿಂದ ೨೭ರವರೆಗೆ ಹೋಮ, ಹವನ, ವಾದ್ಯಗೋಷ್ಠಿಗಳೊಂದಿಗೆ ಕೈಂಕರ್ಯವನ್ನು ವಿಜೃಂಭಣೆಯಿAದ ನಡೆಸಲಾಯಿತು. ಹರಿಹರ ಶ್ರೀ ಸುಬ್ರಹ್ಮಣ್ಯ ದೇವರ ಅರ್ಚಕರಾದ ರಾಘವೇಂದ್ರ ವೈಲಾಯರ ನೇತೃತ್ವದಲ್ಲಿ ಪುತ್ತೂರು ಕಡಬದ ವೇದಮೂರ್ತಿ ಬ್ರಹ್ಮಶ್ರೀ ದಿನೇಶ್ ಬನ್ನಿಂತಾಯರು ಪ್ರತಿಷ್ಠಾಪನೆ ನೆರವೇರಿಸಿದರು. ಶಾಸಕರಾದ ಕೆ.ಜಿ. ಬೋಪಯ್ಯ ಅವರು ಪೂಜಾರಂಭ ಕಾಲದಲ್ಲಿ ದೇವಾಲಯಕ್ಕೆ ಭೇಟಿ ನೀಡಿದರು.
ತಾ. ೨೫ರ ಸಂಜೆ ವಿವಿಧ ಪೂಜೆಗಳು ಜರುಗಿದವು. ಇನ್ನು ಮುಂದೆ ದೇವಿಯ ಪೂಜಾ ವಿಧಿ-ವಿಧಾನಗಳು ಎಂದಿನAತೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ ನಡೆಯಲಿದೆ. ಭಕ್ತಾದಿಗಳು ಅರ್ಚಕರನ್ನು ಸಂಪರ್ಕಿಸಿ (ಮೊ.೯೪೮೦೭೮೭೮೭೪, ೬೩೬೪೬೮೭೮೭೪) ವಾರದ ಯಾವುದೇ ದಿನ ಬೆಳಿಗ್ಗೆ ದೇವರ ದರ್ಶನವನ್ನು ಪಡೆಯಬಹುದಾಗಿದೆ.
ದೇವಾಲಯದ ಜೀರ್ಣೋದ್ಧಾರ ಕಾರ್ಯ ಮುಂದಿನ ಭಾಗವಾಗಿ ಸುತ್ತು ಪೌಳಿ, ತಡೆಗೋಡೆ ನಿರ್ಮಾಣ ಹಾಗೂ ಇಂಟರ್ಲಾಕ್ ಅಳವಡಿಸುವ ಕೆಲಸವು ಆಗಬೇಕಿದ್ದು, ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯು ಭಕ್ತಾದಿಗಳಿಂದ ಧನ ಸಹಾಯ ನಿರೀಕ್ಷಿಸುತ್ತಿದೆ. ಧನ ಸಹಾಯ ಮಾಡಲಿಚ್ಚಿಸುವವರು ತಮ್ಮ ಪೂರ್ಣ ಮಾಹಿತಿಯೊಂದಿಗೆ ಸಮಿತಿಯ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.
ಕೆನರಾ ಬ್ಯಾಂಕ್, ಗೋಣಿಕೊಪ್ಪಲು, ಖಾತೆ ಸಂಖ್ಯೆ: ೧೧೦೦೮೦೩೧೭೩೨೭, IಈSಅ ಅoಜe : ಅಓಖಃ೦೦೦೦೬೮೬