ಗೋಣಿಕೊಪ್ಪ ವರದಿ, ಜ. ೨೮: ಬೈತೂರು ಉತ್ಸವ ಹಿನ್ನೆಲೆ, ವೀರಾಜಪೇಟೆಯಿಂದ ಬೈತೂರಪ್ಪ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ಯುವಕರು ಗಮನ ಸೆಳೆದರು. ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್, ಮಾಚಂಗಡ ಸಚಿನ್ ಪಾದಯಾತ್ರೆ ನಡೆಸಿದ ಯುವಕರು.
ಸೋಮವಾರ ವೀರಾಜಪೇಟೆ, ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಬಲ್ಲಿತೋಡ್, ಹುಲಿಕಲ್ ಮೂಲಕ ಸಾಯಂಕಾಲ ೪ ಗಂಟೆ ಸುಮಾರಿಗೆ ೪೦ ಕಿ.ಮಿ. ಕ್ರಮಿಸಿ ದೇವಸ್ಥಾನ ತಲುಪಿದರು. ನಂತರ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿ, ವೀರಾಜಪೇಟೆಗೆ ಬುಧವಾರ ಹಿಂತಿರುಗಿದರು.