*ಗೋಣಿಕೊಪ್ಪ, ಜ. ೨೮: ಕೊರೊನ ಲಸಿಕೆ ಅಳವಡಿಕೆ ಮತ್ತು ಅತಿವೃಷ್ಠಿ ಪರಿಹಾರಕ್ಕೆ ಸರ್ಕಾರ ಅತಿ ಹೆಚ್ಚು ಅನುದಾನವನ್ನು ಬಳಕೆ ಮಾಡಿದೆ. ಕೊಡಗಿನಲ್ಲಿ ೫ ಲಕ್ಷ ಜನರಿಗೆ ಕೋವಿಡ್ ಲಸಿಕೆಯನ್ನು ನೀಡಿ ಕೊರೊನ ತಡೆಗಟ್ಟುವಲ್ಲಿ ಪ್ರಮುಖ ನಿರ್ವಹಣೆಯನ್ನು ಸರ್ಕಾರ ಜವಾಬ್ದಾರಿಯುತವಾಗಿ ನಿಭಾಯಿಸಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ದೇವರಪುರ ಗ್ರಾ.ಪಂ.ಯ ದೇವರ ಕಾಡು ಹಾಡಿ ಸಂಪರ್ಕ ರಸ್ತೆಗೆ ಶಾಸಕರ ಅನುದಾನದ ೪ ಲಕ್ಷ ಬಳಕೆಯೊಂದಿಗೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಿ.ಟಿ. ಶಾರಾದ, ಉಪಾಧ್ಯಕ್ಷ ಮನೆಯಪಂಡ ಮಹೇಶ್, ಪ್ರಮುಖರಾದ ಗುಮ್ಮಟೀರ ಕಿಲನ್‌ಗಣಪತಿ, ಅಮ್ಮತ್ತಿರ ಟಿಪುö್ಪ ಗಣೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದು ದೇವಯ್ಯ, ಕಾಣತಂಡ ದಮಯಂತಿ, ಹೆಚ್.ವಿ. ಮಣಿಕಂಠ, ಕೃಷ್ಣಮೇಸ್ತಿç, ಮಂಜುನಾಥ, ಹಾಡಿ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.