ಮಡಿಕೇರಿ: ನಗರದ ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಪ್ರಾಂಶುಪಾಲೆ ಜೋಯ್ಸಿ ವಿನಯ ಹಾಗೂ ಶಿಕ್ಷಕಿ ಸುಲ್ಹತ್ ಧ್ವಜಾರೋಹಣವನ್ನು ನಡೆಸಿದರು. ಪ್ರಾಂಶುಪಾಲರು ಗಣರಾಜ್ಯೋತ್ಸವದ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಂದೇಶ ನೀಡಿದರು.
ವಿದ್ಯಾರ್ಥಿಗಳಾದ ಸಾಯಿ ಪ್ರಸಾದ್ ಹಾಗೂ ಕುಶ್ವಂತ್ ಕುಮಾರ್ ಭಾಷಣ ಮಾಡಿದರು. ಶಿಕ್ಷಕಿ ಸುಜ್ಯೋತಿ ಸ್ವಾಗತಿಸಿ, ನಿರೂಪಿಸಿದರು. ಸುಮತಿ ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು. ಮುಬೀನಾ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಜರಿದ್ದರು.ಮಡಿಕೇರಿ: ನಗರದ ಮಹದೇವಪೇಟೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ೭೪ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಬೆಳಿಗ್ಗೆ ಬಡಾವಣೆಯ ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಸಾದಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಈ ವಿಭಾಗದ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಅವರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ಅಮೀನ್ ಮೊಹಿಸಿನ್ ಅವರು ಮಾತನಾಡಿ, ಸಂವಿಧಾನದ ಮಹತ್ವವನ್ನು ಕೂಲಂಕಷವಾಗಿ ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರು, ಬಡಾವಣೆಯ ಪ್ರಗತಿಪರ ಕಾರ್ಯಗಳನ್ನು ಪರಿವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಮುಂದೆ ಬಡಾವಣೆಯ ಎಲ್ಲಾ ಕಾರ್ಯಗಳಿಗೆ ನಗರಸಭೆಯಿಂದ ಸರಕಾರದ ಸವಲತ್ತುಗಳನ್ನು ಈ ವಿಭಾಗದ ನಗರಸಭಾ ಸದಸ್ಯರೊಡಗೂಡಿ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ನಗರಸಭಾ ಸದಸ್ಯ ಮಹೇಶ್ ಜೈನಿ ಹಾಜರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಮಿತಿ ಅಧ್ಯಕ್ಷ ಎಂ.ಎ. ಸಾದಿಕ್ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಆರ್. ಜೀವನ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಪಾಡಿಯಂಡ ಮಣಿ ಮೇದಪ್ಪ, ಕೌಸರ್, ನಾಸಿರ್, ಪರವಂಡ ಉಸ್ಮಾನ್, ಮೌಲಾನ ಅನಿಸುದ್ದೀನ್, ಜಾಲಿ ಮಂದಣ್ಣ, ಎಂ.ಎ. ಭಾಷಾ, ಶಮೀರುದ್ದೀನ್, ಬಿ.ಎಂ. ಹರೀಶ್, ಆತೀಫ್, ಮನ್ಸೂರ್, ಜಿಯಾವುದ್ದೀನ್, ಜಕ್ರಿಯಾ ಉಪಸ್ಥಿತರಿದ್ದರು. ಬಡಾವಣೆಯ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.ವೀರಾಜಪೇಟೆ: ಸಮಾಜವು ವಿಶೇಷಚೇತನರನ್ನು ಕಡೆಗಣಿಸಿದೆ ಎಂದು ಭಾವಿಸಬೇಡಿ, ಅಂಗವಿಕಲತೆ ಎಂಬುದು ದೋಷ ಎಂದು ಪರಿಗಣಿಸಬೇಡಿ, ಮನಸ್ಸು ಮಾತ್ರ ವಿಕಲತೆಯನ್ನು ಹೊಂದುತ್ತದೆ. ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯಿರಿ. ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತ ಕಾರ್ಯಸಾಧನೆಗೆ ಮುಂದಾಗಿ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಸೌಭಾಗ್ಯ ವಿಶೇಷಚೇತನರ ಸೇವಾ ಟ್ರಸ್ಟ್ ಸುಳ್ಯ, ಸೌಭಾಗ್ಯ ವಿಶೇಷಚೇತನ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಶಾಖೆಯ ವತಿಯಿಂದ ಏರ್ಪಡಿಸ ಲಾಗಿದ್ದ ೭೪ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಲಬಾರ್ ರಸ್ತೆಯ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸಿ ವಿಶೇಷಚೇತನರಿಗೆ ಷೇರ್ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು ಬಾಲ್ಯ ದಿಂದಾಗುವ, ಆಕಸ್ಮಿಕವಾಗಿ ಅಪಘಾತ ಸಂಭವಿಸಿ ಅಥವಾ ಇತರ ಘಟನೆಗಳಿಂದ ಸಂಭವಿಸುವ ದುರ್ಘಟಣೆಗಳಿಂದ ಕೆಲವರು ವಿಕಲಾಂಗರಾಗುತ್ತಾರೆ. ಅಂಗ ವೈಫಲ್ಯವಾದರೂ ಗುರಿ ಸಾಧನೆಗಾಗಿ ಬದುಕು ರೂಪಿಸಿಕೊಳ್ಳಬೇಕು. ಆರ್ಥಿಕವಾಗಿ ಸಭಲರಾಗುವತ್ತ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಸರ್ಕಾರದಿಂದ ದೊರಕುವ ಸೌಲಭ್ಯಗಳಿಂದ ವಂಚಿತರಾಗದೆ ಕಚೇರಿಯ ಮೂಲಕ, ಸಂಘದ ಮೂಲಕ ಅರ್ಜಿಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಲು ಮುಂದಾಗಿ ಎಂದು ಕರೆ ನೀಡಿದರು.
ಪುರಸಭೆಯ ವಾರ್ಡಿನ ಸದಸ್ಯ ಅಬ್ದುಲ್ ಜಲೀಲ್ ಅವರು ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದರು. ರಾಜ್ಯ ಸಂಘದ ಉಪಾಧ್ಯಕ್ಷೆ ಆಯಿಷಾ ಫಜಲುದ್ದೀನ್ ಅವರು ಪತ್ತಿನ ಸಹಕಾರ ಸಂಘದ ಬಗ್ಗೆ, ನಿಯಮ ಮತ್ತು ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಆಗಮಿಕ ಸದಸ್ಯರಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವೀರಾಜಪೇಟೆ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧ ಮಂದಣ್ಣ ಅವರು ಧ್ವಜಾರೋಹಣಗೈದು ಗೌರವ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪತ್ತಿನ ಸಹಕಾರ ಸಂಘದ ಸುಮಾರು ೨೦ ಮಂದಿ ಸದಸ್ಯರಿಗೆ ಸಂಘದಿAದ ಷೇರ್ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಯೋಗೇಶ್ ನಾಯ್ಡು, ಸೌಭಾಗ್ಯ ವಿಶೇಷಚೇತನ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಶಾಖೆಯ ಕಾರ್ಯದರ್ಶಿಗಳಾದ ಕುಯಿಮಂಡ ರಾಕೇಶ್ ಬಿದ್ದಪ್ಪ, ಸುಶೀಲಾ ಅಪ್ಪಾಜಿ ಮುಂತಾದವರು ಉಪಸ್ಥಿತರಿದ್ದರು.
ಸೌಭಾಗ್ಯ ವಿಶೇಷಚೇತನ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಶಾಖೆಯ ವ್ಯವಸ್ಥಾಪಕಿ ಚೈತ್ರ, ಸದಸ್ಯರಾದ ಗಾಯತ್ರಿ, ಬಿ.ಬಿ. ವಸಂತ್, ಯೋಜನಾಧಿಕಾರಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ವಿಶೇಷಚೇತನರು, ಸೌಭಾಗ್ಯ ವಿಶೇಷಚೇತನ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಶಾಖೆಯ ಸದಸ್ಯರು ಹಾಜರಿದ್ದರು.ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೈನಿಕ ಹವಾಲ್ದಾರ್ ಕೆ.ಬಿ. ಲವ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಇದ್ದು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಉತ್ತಮ ಉದ್ಯೋಗ ಪಡೆದುಕೊಳ್ಳುವುದರೊಂದಿಗೆ ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಂಡು, ಉತ್ತಮ ಪ್ರಜೆಗಳಾಗಿ ಭ್ರಷ್ಟಾಚಾರ ಮುಕ್ತ, ಸದೃಢ ಭಾರತದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ದೇಶ ಭಕ್ತಿಗೀತೆ, ನೃತ್ಯ, ಭಾಷಣ ಮಾಡಿದರು.
ಈ ಸಂದರ್ಭ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಎನ್ಎಸ್ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾ, ಎನ್ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ರೋವರ್ಸ್ ರೇಂಜರ್ಸ್ ಅಧಿಕಾರಿಗಳಾದ. ಸೀಮಾ, ತೀರ್ಥೇಶ್, ಯುವ ರೆಡ್ಕ್ರಾಸ್ ಅಧಿಕಾರಿ ಎಂ.ಎ. ಕುಶಾಲಪ್ಪ, ಕಚೇರಿ ಅಧೀಕ್ಷಕ ಸೋಮನಾಥ್, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ಅನ್ವಿತ್ ಕುಮಾರ್ ಪ್ರಾರ್ಥಿಸಿ, ಎಸ್ ಎಸ್. ಮಾದಯ್ಯ ಸ್ವಾಗತಿಸಿ, ಎಂ.ಎನ್. ವನಿತ್ ಕುಮಾರ್ ವಂದಿಸಿದರು.ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ಗೇಟ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ವೇದಿಕೆಯ ಅಧ್ಯಕ್ಷ ರವಿಗೌಡ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ವೇದಿಕೆಯ ವೀರಾಜಪೇಟೆ ಅಧ್ಯಕ್ಷ ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ಗೇಟ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ವೇದಿಕೆಯ ಅಧ್ಯಕ್ಷ ರವಿಗೌಡ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ವೇದಿಕೆಯ ವೀರಾಜಪೇಟೆ ಅಧ್ಯಕ್ಷ ಪುನೀತ್, ಸತೀಶ್ ಪೈ, ಉದಯ್ ಕುಮಾರ್, ಸಮಾಜ ಸೇವಕರಾದ ಜಾನ್ಸನ್, ಪ್ರವೀಣ್ ಹಾಗೂ ಇನ್ನು ಹಲವು ಸದಸ್ಯರು ಪಾಲ್ಗೊಂಡಿದ್ದರು.
ವೇದಿಕೆಯ ತಾಲೂಕು ಕಾರ್ಯದರ್ಶಿ ಸತೀಶ್ ನೆರೆದಿದ್ದವರನ್ನು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮೀನಾಜ್ ಪ್ರವೀಣ್ ವಂದಿಸಿದರು.ಪೊನ್ನAಪೇಟೆ: ಪೊನ್ನಂಪೇಟೆ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಮುಖ್ಯ ಶಿಕ್ಷಕ ಎ.ಎಸ್. ವಾಸುವರ್ಮ ಧ್ವಜಾರೋಹಣ ನೆರವೇರಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅತಿಥಿ ಶಿಕ್ಷಕಿ ಎಸ್. ಭವ್ಯ ಹಾಗೂ ವಿದ್ಯಾರ್ಥಿಗಳು ಇದ್ದರು.ಮಡಿಕೇರಿ: ಕೊಡ್ಲಿಪೇಟೆಯ ದಲಿತ ಸಂಘಟನೆಗಳ ವತಿಯಿಂದ ೭೪ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ನಂತರ ಭಾರತ ಸಂವಿಧಾನವನ್ನು ಓದುವ ಮೂಲಕ ಸಂವಿಧಾನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭ ಕೊಡ್ಲಿಪೇಟೆ ಪಿಡಿಓ ಹೂವಯ್ಯ, ದಲಿತ ನಾಯಕರುಗಳಾದ ಜೆ.ಎಲ್. ಜನಾರ್ಧನ್, ಸೋಮಣ್ಣ, ಗ್ರಾ.ಪಂ. ಸದಸ್ಯ ಪ್ರಸನ್ನ, ಪ್ರಮುಖರಾದ ಜಗದೀಶ್, ಇಂದ್ರೇಶ್, ವೀರಭದ್ರ, ವಸಂತ್, ಕಾರ್ತಿಕ್, ವಿಜಯ, ಮುರಳಿ ಸತೀಶ್, ವಿನಯ್, ಪ್ರಶಾಂತ್, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.ವೀರಾಜಪೇಟೆ: ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದು ಉತ್ತಮ. ಇದಕ್ಕೆ ಸರಕಾ ರದ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರ ಅಗತ್ಯವಾಗಿದೆ ಎಂದು ಚೇರಂಬಾಣೆಯ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದರು. ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇತರ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದವರು ಅವರ ರಾಜ್ಯದ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಕ್ಕೆ ನಾವುಗಳು ಹೋದಾಗ ಆ ರಾಜ್ಯದ ಭಾಷೆಯಲ್ಲಿ ಮಾತನಾಡ ಬೇಕಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಯಾರೇ ಬಂದರು ಕನ್ನಡವನ್ನೇ ಮಾತನಾಡುವಂತಾಗಬೇಕು. ಕನ್ನಡ ಪ್ರಾಚೀನ ಕಾಲದ ಭಾಷೆಯಾಗಿದ್ದು, ಅವರವರ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿಕೊಂಡರೂ ಪ್ರತಿಯೊಬ್ಬರು ಆಡಳಿತ ಕನ್ನಡ ಭಾಷೆಗೆ ಆದ್ಯತೆ ನೀಡುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ವೀರಾಜಪೇಟೆ: ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದು ಉತ್ತಮ. ಇದಕ್ಕೆ ಸರಕಾ ರದ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರ ಅಗತ್ಯವಾಗಿದೆ ಎಂದು ಚೇರಂಬಾಣೆಯ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದರು. ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇತರ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದವರು ಅವರ ರಾಜ್ಯದ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಕ್ಕೆ ನಾವುಗಳು ಹೋದಾಗ ಆ ರಾಜ್ಯದ ಭಾಷೆಯಲ್ಲಿ ಮಾತನಾಡ ಬೇಕಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಯಾರೇ ಬಂದರು ಕನ್ನಡವನ್ನೇ ಮಾತನಾಡುವಂತಾಗಬೇಕು. ಕನ್ನಡ ಪ್ರಾಚೀನ ಕಾಲದ ಭಾಷೆಯಾಗಿದ್ದು, ಅವರವರ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿಕೊಂಡರೂ ಪ್ರತಿಯೊಬ್ಬರು ಆಡಳಿತ ಕನ್ನಡ ಭಾಷೆಗೆ ಆದ್ಯತೆ ನೀಡುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ತೋರಲು ಕರ್ನಾಟಕ ಸಂಘ ಏರ್ಪಡಿಸಿರುವ ಸ್ಪರ್ಧಾ ಕಾರ್ಯಕ್ರಮಕ್ಕೆ ಎಲೆಮರೆಯ ಕಾಯಿಯಂತಿರುವ ವಿದ್ಯಾರ್ಥಿಗಳು ಅವಕಾಶವನ್ನು ಸದುಪ ಯೋಗಪಡಿಸಿ ಕೊಳ್ಳುವ ಮೂಲಕ ತಮ್ಮ ಗುರಿ ಮುಟ್ಟುವಂತಾಗಬೇಕು ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ನವೆಂಬರ್ ತಿಂಗಳಲ್ಲಿ ಸಂಘದ ವತಿಯಿಂದ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವು ದಾಗಿ ಹೇಳಿದರು. ಸಂಘದ ಕಾರ್ಯ ದರ್ಶಿ ಎಂ.ಬಿ. ಅರುಣ್ ಅಪ್ಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸ ಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚೇನಂಡ ಈ. ಗಿರೀಶ್ ಪೂಣಚ್ಚ ಉಪಸ್ಥಿತರಿದ್ದು ಮಾತ ನಾಡಿದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರ ರಾಗಿ ತಾತಂಡ ಪ್ರಭಾ ನಾಣಯ್ಯ ಮತ್ತು ಎಂ. ಕುಸುಮ ಸೋಮಣ್ಣ ಭಾಗವಹಿಸಿದ್ದರು. ಸಿ.ಎಂ. ಸುರೇಶ್ ನಾಣಯ್ಯ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಎಂ.ಸಿ. ಅಶೋಕ್ ನಿರೂಪಿಸಿದರೆ, ಕಚೇರಿ ಕಾರ್ಯದರ್ಶಿ ಎಂ. ರಾಧ ವಂದಿಸಿ ದರು. ಸಭೆಯಲ್ಲಿ ಸಂಘದ ಸದಸ್ಯರಾದ ಕೆ.ಯು. ಗಣೇಶ್ ತಮ್ಮಯ್ಯ, ಸಿ.ಪಿ. ಕಾವೇರಪ್ಪ, ಎ.ಎಂ. ಜೋಯಪ್ಪ, ಪಿ.ಎಸ್. ನಂದ, ಎಂ. ರಾಣು ಮಂದಣ್ಣ, ಎಂ.ಜಿ. ಪೂಣಚ್ಚ, ಬಿ.ಆರ್. ಗಣೇಶ್, ಬಿ. ಗಣೇಶ್ ಬಿದ್ದಪ್ಪ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೂಡಿಗೆ: ಕುಶಾಲನಗರ ಕೊಡವ ಸಮಾಜದ ವತಿಯಿಂದ ೭೪ನೇ ಗಣರಾಜ್ಯೋತ್ಸವ ಅಂಗ ವಾಗಿ ಸಂಘದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಸಂಘದ ಕಾರ್ಯದರ್ಶಿ ವಾಂಚಿರ ಮನು ನಂಜುAಡ ಅವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಖಜಾಂಚಿ ಬಲಿಯಾಟಂಡ ಚಂಗಪ್ಪ, ನಿರ್ದೇಶಕರುಗಳಾದ ಚೌರೀರ ತಿಮ್ಮಯ್ಯ, ಕೊಳುವಂಡ ಮಂದಪ್ಪ, ಮುಂಡಾAಡ ದಯಾನಂದ, ಸಿದ್ಧಂಡ ಮಹೇಶ್, ನಂದಿನೆರವAಡ ಜಗದೀಶ್, ಬೋಪ್ಪಂಡ ನಂದ, ಮುಕ್ಕಾಟ್ಟಿರ ಪೊನ್ನಣ್ಣ, ಕೇಕಡ ಸೋಮಣ್ಣ, ಬೊಪ್ಪಂಡ ಕನಿಕೆ, ಕೊಕ್ಕಲೆರ ಧರಣಿ, ಸದಸ್ಯರುಗಳಾದ ಅಳ್ತಂಡ ರಂಜಿತ್, ಕಾಳಿಮಾಡ ಪೂವಯ್ಯ ಹಾಜರಿದ್ದರು.ಕುಶಾಲನಗರ: ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಟಿ.ಎಂ ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.ಮಡಿಕೇರಿ: ಜ್ಯೋತಿ ಯುವಕ ಸಂಘದ ವತಿಯಿಂದ ಇಂದಿರಾ ನಗರದಲ್ಲಿ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಇಂದಿರಾ ನಗರದ ನಿವಾಸಿ ಸರೋಜ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ಯುವಕ ಸಂಘದ ಅಧ್ಯಕ್ಷ ಎಸ್.ಎಸ್. ಜಯಕುಮಾರ್ ವಹಿಸಿಕೊಂಡಿದ್ದರು. ಸ್ವಾಗತವನ್ನು ಉಪಾಧ್ಯಕ್ಷ ಅನೀಸ್ ಅವರು ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಮತ್ತು ಸ್ಥಳೀಯರು ಹಾಜರಿದ್ದರು. ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.ಕಡAಗ: ಕಡಂಗ ವಿಜಯ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ದಿನದ ಮಹತ್ವದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವದ ಹಲವು ಅಂಶಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿ ಹಿತೋಪದೇಶ ನೀಡಿದರು.
ಗಣರಾಜ್ಯ ದಿನದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾತನಾಡಿದರು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.ದೇವಣಗೇರಿ: ಇಲ್ಲಿನ ಪ್ರೌಢ ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಕರ್ನಂಡ ಎನ್. ಬೊಳ್ಳಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅವರು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ವಕೀಲ ಸೋಮಲೋಕನಾಥ್ ಆಗಮಿಸಿ ರಾಷ್ಟçಪ್ರೇಮ ಬಿಂಬಿಸುವ ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತೆ ಸಂವಿಧಾನದ ಆಶಯಗಳಾದ ಜಾತ್ಯತೀತತೆ ಹಾಗೂ ಪ್ರಜೆಯ ಮೂಲಭೂತ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಲವಾರು ನಿದರ್ಶನಗಳ ಮುಖಾಂತರ ಮಾಹಿತಿ ನೀಡಿದರು. ಕರ್ನಂಡ ಎನ್. ಬೊಳ್ಳಮ್ಮ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಹಾಗೂ ಜನ್ಮ ನೀಡಿದ ತಂದೆ - ತಾಯಿಯವರಿಗೆ ಹಾಗೂ ದೇಶಕ್ಕೆ ಸದಾ ಗೌರವ ನೀಡುವ ಕರ್ತವ್ಯಗಳನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಬೀನಂಡ ಎಸ್. ಪೂಣಚ್ಚ, ಮೂಕೋಂಡ ಸಾಬು ನಂಜಪ್ಪ, ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ, ಶಾಲಾ ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕಿ ವೈ. ಪ್ರಮೀಳಾ ಕುಮಾರಿ ಮಾಡಿ, ಶಿಕ್ಷಕಿ ಎ.ಸಿ. ಸುನೀತ ವಂದಿಸಿದರು.
ಕ್ರೀಡೋತ್ಸವದಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ನಂತರ ಸಿಹಿ ವಿತರಿಸಲಾಯಿತು.