ಕೂಡಿಗೆ, ಜ. ೨೮:' ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿರುವ ಬಾರ್ ಮುಂಭಾಗ ಚಿಕ್ಕತ್ತೂರು ಗ್ರಾಮದ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.

ಚಿಕ್ಕತ್ತೂರು ಗ್ರಾಮದ ಅನಿಲ್ ಕುಮಾರ್ ಮತ್ತು ದೀಪಕ್ ಸೇರಿ ಅನುಕುಮಾರ್ ಎಂಬಾತನಿಗೆ ಬೀರು ಬಾಟಲಿಯಿಂದ ಹಲ್ಲೆ ಮಾಡಿ, ನೀನು ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ವಾಹನವನ್ನು ಏಕೆ ಓಡಿಸುತ್ತೀಯ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಅನುಕುಮಾರ್ ಪೊಲೀಸ್ ದೂರು ನೀಡಿದ್ದಾರೆ.

ಅನುಕುಮಾರ್ ಮತ್ತು ಅವನ ಸ್ನೇಹಿತರು ಸೇರಿ ಅನಿಲ್ ಕುಮಾರ್‌ಗೆ ಹೊಡೆದರು ಎಂದು ಅನಿಲ್‌ಕುಮಾರ್ ದೂರು ನೀಡಿದ್ದಾರೆ.