ಮಡಿಕೇರಿ, ಜ. ೨೮: ರಥಸಪ್ತಮಿ ಪ್ರಯುಕ್ತ ಇಂದು ಮಡಿಕೇರಿಯ ಹಾಕಿ ಟರ್ಫ್ ಮೈದಾನದಲ್ಲಿ.. ನಗರದ ೧೯೦ ಯೋಗ ಬಂಧುಗಳು ಸಾಮೂಹಿಕ ೧೦೮ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿಗಳ ಪತ್ನಿ ರೂಪಶ್ರೀ ಸತೀಶ್, ಶಕ್ತಿ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿಯವರಿಂದ ಸೂರ್ಯನಾರಾಯಣ ದೇವರಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ೧೦೮ ಸೂರ್ಯನಮಸ್ಕಾರ ಆರಂಭವಾಯಿತು. ಪ್ರಣವ ಕೇಂದ್ರದ ಶಿಲ್ಪಾ ರವೀಂದ್ರ ರೈ, ಪತಂಜಲಿ ಶಿಕ್ಷಣ ಸಮಿತಿಯ ಲಿಂಗಪ್ಪಣ್ಣ ಹಾಗೂ ಯೋಗ ಭಾರತೀಯ ಮಹೇಶ್ ಕುಮಾರ್ ಶಿಕ್ಷಕರಾಗಿ ಭಾಗವಹಿಸಿದ್ದರು. ಉತ್ಸಾಹದಲ್ಲಿ ಪಾಲ್ಗೊಂಡ ಎಲ್ಲ ಯೋಗಾಭ್ಯಾಸಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.