ಗೋಣಿಕೊಪ್ಪ ವರದಿ, ಜ. ೨೮: ಏಪ್ರಿಲ್ ತಿಂಗಳಿAದ ನಾಪೋಕ್ಲು ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಬಾಳೆಯಡ ಕ್ರಿಕೆಟ್ ನಮ್ಮೆ ಲಾಂಛನವನ್ನು ಗೋಣಿಕೊಪ್ಪ ಪ್ಲಾಂರ‍್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಅನಾವರಣ ಗೊಳಿಸಲಾಯಿತು.

ಬಾಳೆಯಡ ಕುಟುಂಬಸ್ಥರು, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಪೂಮಾಲೆ ಕೊಡವ ವಾರಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕುಟುಂಬ ಅಧ್ಯಕ್ಷ ಲೆ. ಕ. ಬಾಳೆಯಡ ಕೆ. ಸುಬ್ರಮಣಿ ಲಾಂಛÀನವನ್ನು ಬಿಡುಗಡೆಗೊಳಿಸಿದರು. ಏಪ್ರಿಲ್ ೧೬ ರಿಂದ ಮೇ ೭ ರವರೆಗೆ ನಾಪೋಕ್ಲುವಿನಲ್ಲಿ ನಮ್ಮೆ ನಡೆಸುವುದಾಗಿ ಈ ಸಂದರ್ಭ ಘೋಷಿಸಲಾಯಿತು.

ಕುಟುಂಬದ ಅಧ್ಯಕ್ಷ ಲೆ. ಕ. ಬಾಳೆಯಡ ಕೆ. ಸುಬ್ರಮಣಿ ಮಾತನಾಡಿ, ಕ್ರಿಕೆಟ್ ನಮ್ಮೆ ಆಯೋಜನೆಯಿಂದ ಎಲ್ಲರೂ ಒಗ್ಗಟ್ಟಾಗಲು ಅವಕಾಶ ದೊರಕುತ್ತದೆ. ೨೧ ನೇ ವರ್ಷದ ನಮ್ಮೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಸರ್ಕಾರ ಕೊಡವರ ಅಭಿವೃದ್ಧಿಗಾಗಿ ರೂ. ೧೦ ಕೋಟಿಗಳನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಿದೆ. ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ೨೫ ಎಕರೆ ಆವರಣದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಥಾನವಾಗಿ ರೂಪುಗೊಳಿಸಲು ಅನುದಾನ ಪ್ರಯೋಜನವಾಗಲಿದೆ. ಕೊಡವ ಹಾಕಿ ಗಿನ್ನಿಸ್ ದಾಖಲೆಯಾಗಿರುವುದು ಕೂಡ ಮಾದರಿಯಾಗಿದ್ದು, ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡAಡ ಕುಟ್ಟಣಿ ಅವರ ಚಿಂತನೆಯಿAದ ಆರಂಭಗೊAಡ ಕೌಟುಂಬಿಕ ಕ್ರೀಡಾಕೂಟವನ್ನು ಎಲ್ಲಾ ಜನಾಂಗ ದವರು ಅನುಕರಿಸುವಂತಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಕೊಡಗಿನ ಮಣ್ಣು, ಗಾಳಿ ವಿಶ್ವದಲ್ಲಿಯೇ ವಿಶೇಷವಾಗಿದ್ದು, ಇದರ ಸಂರಕ್ಷಣೆ ಮುಖ್ಯವಾಗಿದೆ. ಯಾರೂ ಕೂಡ ಜಾಗವನ್ನು ಮಾರಾಟ ಮಾಡಬಾರದು ಎಂದು ಹೇಳಿದರು.

ಬೆಂಗಳೂರು ಉಚ್ಚ ನ್ಯಾಯಾಲಯ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ, ಕೊಡವರು ಕ್ರೀಡೆಯಲ್ಲಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಕಿಯಲ್ಲಿ ಕೊಡಗಿನಿಂದ ದೇಶ ಪ್ರತಿನಿಧಿಸುತ್ತಿರುವುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಮಸ್ಯೆ ಮೂಲ ಅರಿತು ಮುಂದುವರಿಯಬೇಕಿದೆ. ಗ್ರಾಮ ಮಟ್ಟದಲ್ಲಿ ಮೈದಾನಗಳ ಕೊರತೆ ಹೆಚ್ಚಾಗುತ್ತಿದೆ. ಮೂಲಭೂತ ಸೌಕರ್ಯ ಸರ್ಕಾರದ ಮಟ್ಟದಲ್ಲಿ ದೊರೆತರೆ ಮಾತ್ರ ಕ್ರೀಡೆಗೆ ಪ್ರೋತ್ಸಾಹ ದೊರೆಯಲಿದೆ. ಒಗ್ಗಟ್ಟಿನ ಮೂಲಕ ಮೂಲಭೂತ ಸೌಕರ್ಯ ಪಡೆಯಲು ಯೋಜನೆ ರೂಪಿಸಬೇಕಿದೆ ಎಂದರು.

ಪೂಮಾಲೆ ಕೊಡವ ವಾರಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಬಾಳೆಯಡ ವಕ್ಕ ಬಾಳೋ ಎಂಬ ಸಂದೇಶದೊAದಿಗೆ ಕ್ರೀಡೆಯ ಮೂಲಕ ಸಾರಿರುವ ಒಗ್ಗಟ್ಟನ್ನು ಮುಂದುವರಿಸಬೇಕು. ಸಹಬಾಳ್ವೆ ಕ್ರೀಡೆಗೆ ಮಾತ್ರ ಸೀಮಿತವಾಗದಂತೆ ಎಚ್ಚರವಹಿಸಬೇಕಿದೆ. ಕಡಿಮೆ ಜನಸಂಖ್ಯೆ ಇರುವ ಕೊಡವ ಜನಾಂಗ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ, ಆರ್ಥಿಕವಾಗಿ ಬಡತನದಲ್ಲಿದೆ ಎಂಬುದನ್ನು ಸರ್ಕಾರಕ್ಕೆ ಅರಿವಾಗಬೇಕಿದೆ ಎಂದರು.

ಲಾಂಛನ ವಿನ್ಯಾಸಕಾರ ಬಾಳೆಯಡ ಅನೀಶ್ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ, ಕುಟುಂಬದ ಸಲಹೆಗಾರ ಬಾಳೆಯಡ ಕರುಣ್‌ಕಾಳಪ್ಪ, ಸುಮನ್ ಪೂಣಚ್ಚ, ಶಂಭು ಮಂದಪ್ಪ ಇದ್ದರು.

ಬಾಳೆಯಡ ದಿವ್ಯ ನಿರೂಪಿಸಿದರು. ಅಪ್ಪುಮಣಿಯಂಡ ಶೈಲಾ ಪ್ರಾರ್ಥಿಸಿದರು.