ಚೆಯ್ಯಂಡಾಣೆ, ಜ. ೨೯: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ಭಾನುವಾರ ಮುಂಡಿಯೋಳAಡ ಐನ್‌ಮನೆಗೆ ಆಗಮಿಸಿರುತ್ತಾರೆ. ಮುಂಡಿಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್ ರನ್ನು ಬರಮಾಡಿಕೊಂಡರು.

ತಾ. ೩೦ ರಂದು ಬೊವ್ವೇರಿಯಂಡ ಐನ್‌ಮನೆಗೆ ತೆರಳಿ ಅಲ್ಲಿಂದ ಕೊಕೇರಿ ಗ್ರಾಮದ ಚೇರುವಾಳಂಡ, ಬಿದ್ದಂಡ, ಮೂಡೇರ, ಮಚ್ಚಂಡ, ಪೆಮ್ಮಂಡ ಐನ್‌ಮನೆ ಹಾಗೂ ಕೊಕೇರಿ ಭಗವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕಿರುಂದಾಡು ಮಚ್ಚಂಡ ಐನ್‌ಮನೆ ಕೈಕಾಡು ನಾಯಕಂಡ, ಪಾಡೇಯಂಡ, ಅಪ್ಪನೆರವಂಡ ಐನ್‌ಮನೆಗೆ ತೆರಳಿ ಹೊದ್ದೂರು ತೋರೆರ ಐನ್‌ಮನೆ ಚೇರಂಬಾಣೆಯ ಬೈಮನ, ಬಲಮುರಿ ಭಗವತಿ ದೇವಸ್ಥಾನ, ಚೆಯ್ಯಂಡ, ಬೋಳ್ತÀಂಡ, ಬೆಲ್ಲತಂಡ, ಅರಪ್ಪಟ್ಟು ಗ್ರಾಮದ ಪಾಂಡAಡ, ಕರಡ ಗ್ರಾಮದ ನಡಿಕೇರಿಯಂಡ, ಐತಿಚಂಡ, ಪಾಲಂಗಾಲ ಗ್ರಾಮದ ಕರಿನೇರವಂಡ, ನರಿಯಂದಡ ಗ್ರಾಮದ ಪೊಕ್ಕುಳಂಡ್ರ ಐನ್‌ಮನೆಗೆ ತೆರಳಿ ಹಿಂತಿರುಗಿ ಬೊವೈರಿಯಂಡ ಐನ್‌ಮನೆಯಲ್ಲಿ ಉಳಿದುಕೊಳ್ಳುತ್ತಾರೆ.

ನಂತರ ನಾಡ್ ಮಂದ್ ಪೆಬ್ಬಟ್ಟಾಣೆ ಯಲ್ಲಿ ದೇವರು ಬಂದು ನಿಂತ ಸ್ಥಳದಲ್ಲಿ ಮುಂಡಿಯೋಳAಡ ತಕ್ಕ ಮುಖ್ಯಸ್ಥರಿಗೆ ‘ಕಂಡಿ ಪಣ’ವನ್ನು ನೀಡಲಿದ್ದಾರೆ.ನಂತರ ಚೇಲಾವರದ ಪಟ್ಟಚೇರುವಳಂಡ ಐನ್ ಮನೆಗೆ ತೆರಳಿ ಅಲ್ಲಿಂದ ಚೇಲವಾರ ಪೋನ್ನೊಲ ದೇವಸ್ಥಾನದಲ್ಲಿ ಉಳಿದು ಫೆಬ್ರವರಿ ೯ ರಂದು ಬೆಳಿಗ್ಗೆ ಕಾಲ್ನಡಿಗೆಯ ಮುಖಾಂತರ ಚೇಲಾವರದಿಂದ ಕಾಡುದಾರಿಯಲ್ಲಿ ಕೇರಳ ರಾಜ್ಯದ ಪಯ್ಯವೂರ್‌ಗೆ ತೆರಳಲಿದ್ದಾರೆ. -ಅಶ್ರಫ್