ಬುಡಕಟ್ಟು ಸಂಸ್ಕೃತಿ ಅಕಾಡೆಮಿ ರಚನೆಗೆ ನಿರ್ಣಯ ಮಂಡನೆ ಕೊಡಗಿನ ಬುಡಕಟ್ಟು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸರಕಾರ ಅಕಾಡೆಮಿ ರಚಿಸಬೇಕೆಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಯಿತು.

ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು, ಸರಕಾರಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು, ಅನುದಾನಿತ ಶಾಲೆಗೂ ಅಗತ್ಯ ನೆರವು ನೀಡಬೇಕು, ಸ್ಥಳೀಯ ಸಾಹಿತಿ, ಕಲಾವಿದರಿಗೆ ಮಾಸಾಶನ ಒದಗಿಸಬೇಕು, ಮಡಿಕೇರಿ-ತಲಕಾವೇರಿ ಹಾಗೂ ಚೇರಂಬಾಣೆ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಕ.ಸಾ.ಪ. ಗೌರವ ಕಾರ್ಯದರ್ಶಿ ರಂಜಿತ್ ನಿರ್ಣಯ ಮಂಡಿಸಿದರು. ಇದಕ್ಕೆ ಜನರು ಒಪ್ಪಿಗೆ ಸೂಚಿಸಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಮಾತನಾಡಿ, ಈ ನಿರ್ಣಯಗಳನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳುಹಿಸುವುದರೊಂದಿಗೆ ಜಿಲ್ಲೆಯ ಶಾಸಕರಿಗೂ ನಿರ್ಣಯ ಪ್ರತಿಯನ್ನು ಸಲ್ಲಿಸಲಾಗುವುದು ಎಂದರು.ಬೋಪಯ್ಯ ‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ’ ವಿಷಯದ ಕುರಿತು ಮಾತನಾಡಿ, ಭಾರತ ಪುರುಷ ಪ್ರಧಾನ ಸಮಾಜವಾಗಿತ್ತು. ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮೊದಲು ಅಭಿವ್ಯಕ್ತಿ ಸ್ವಾತಂತ್ರö್ಯವಿಲ್ಲದೆ, ಭೋಗದ ವಸ್ತುವಿನ ರೀತಿಯಲ್ಲಿ ಮಹಿಳೆಯರಿದ್ದರು. ಇದರಿಂದ ಪುರುಷರಷ್ಟು ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಲೆಗೆ ಬರಲು ಸಾಧ್ಯವಾಗಲಿಲ್ಲ. ಸಾಮಾಜಿಕ ತಾರತಮ್ಯದ ನಡುವೆ ಮಹಿಳಾ ಸಾಹಿತಿಗಳ ಸಾಧನೆ ಅಗಣನೀಯ. ಭಾರತದ ಮೇಲೆ ವಿದೇಶಿಗರ ಆಕ್ರಮಣದಿಂದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲಾಗಲಿಲ್ಲ. ಇವೆಲ್ಲದರ ನಡುವೆ ಸೂಕ್ಷö್ಮ ಸಂವೇದನಾ ಮಹಿಳಾ ಸಾಹಿತಿಗಳು ಸಮಾಜವನ್ನು ಜಾಗೃತಿಗೊಳಿಸಿ ಬದಲಾವಣೆ ತಂದಿದ್ದಾರೆ. ಇಷ್ಟಲ್ಲ ಸವಾಲಿನ ನಡುವೆ ದಿಟ್ಟ ಬರಹಗಳು ಮಹಿಳೆಯರಿಂದ ಹೊರಹೊಮ್ಮಿವೆ ಎಂದರು.

ಸುಳ್ಯ ಶಾರದ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ತಳೂರು ಸ್ವರ್ಣ ಕಿಶೋರ್ ‘ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ’ ಕುರಿತು ಮಾತನಾಡಿ, ತಂತ್ರಜ್ಞಾನ ಕೂಡ ಸಾಹಿತ್ಯಕ್ಕೆ ವಿಸ್ತಾರ ನೆಲೆ ನೀಡುತ್ತದೆ. ಇಂದು ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಸಮಾನವಾಗಿ ಪ್ರತಿಕ್ಷೇತ್ರ ಬೆಳೆಯಬೇಕಾದರೆ ಸಹಜವಾಗಿ ತಂತ್ರಜ್ಞಾನ ಬಳಸಿಕೊಳ್ಳಲೇಬೇಕು. ಇಂದು ಕೈಬೆರಳ ತುದಿಯಲ್ಲಿ ನಮಗೆ ಬೇಕಾದ ವಿಷಯ ಸಿಗುತ್ತಿದೆ. ತಂತ್ರಜ್ಞಾನದಿAದ ಓದುಗರನ್ನು ಸೃಷ್ಟಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಿಂದ ಲೇಖಕನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಅವಕಾಶಗಳಿವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಆಶಯ ನುಡಿಗಳನ್ನಾಡಿದರೆ, ಜವಾಹರ್ ನವೋದಯ ವಿದ್ಯಾಲಯದ ಅಧ್ಯಾಪಕ ಮಾರುತಿ ದಾಸಣ್ಣನವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುದ ನೀಡಿದ ಕವಿಗೋಷ್ಠಿ

ಕನ್ನಡ ನಾಡು-ನುಡಿ, ಪರಿಸರ ಸೇರಿದಂತೆ ಇನ್ನಿತರ ವಿಷಯಗಳ ಕುರಿತ ಕವನಗಳು ಕವಿಗೋಷ್ಠಿಯಲ್ಲಿ ಅನಾವರಣಗೊಂಡವು. ಈರಮಂಡ ಹರಿಣಿ ವಿಜಯ್ ‘ಕಾಲೈ ತಸ್ಮೆöÊ ನಮಃ’ ಎಂಬ ಕವನದ ಮೂಲಕ ಕೊರೊನಾ ತಂದಿಟ್ಟ ಅವಾಂತರ, ಆ ಪರಿಸ್ಥಿತಿಯಲ್ಲಿ ಸೃಷ್ಟಿಯಾದ ಸಂದಿಗ್ದತೆಯ ಕುರಿತು ಪದಗಳಲ್ಲಿ ಕಟ್ಟಿಕೊಟ್ಟರು.

ಪ್ರಕೃತಿ ಮೇಲಿನ ಮಾನವನ ಹಸ್ತಕ್ಷೇಪದ ಪರಿಣಾಮ ಇಂದು ಪ್ರಕೃತಿ ಕಲಿಸುತ್ತಿರುವ ಪಾಠದ ಬಗ್ಗೆ ಲತಾ ಆಚಾರ್ಯ ‘ಮುನಿಸೇತೆಕೆ ತಾಯಿ’ ಎಂಬ ಕವನದ ಮೂಲಕ ಎಚ್ಚರಿಸಿ ತಪ್ಪಾಗಿದೆ ಕ್ಷಮಿಸು ತಾಯಿ ಎಂದು ಪ್ರಕೃತಿಯನ್ನು ಪ್ರಾರ್ಥಿಸಿದರು. ಯು.ಎಲ್. ಜನನಿ ‘ನಮ್ಮ ಹೆಮ್ಮೆಯ ಕರುನಾಡು’, ಪಿ.ಪಿ. ಗಿರಿಜಾ ‘ನಾ ಸ್ವಾಭಿಮಾನಿ ಕನ್ನಡಿಗ’, ತಳೂರು ಕುಸುಮ ದಿನೇಶ್ ‘ಹಬ್ಬ’, ಬಾರಿಕೆ ಹರ್ಷಿತ ಡಿಂಪಲ್ ‘ಕನ್ನಡ ನಾಡು’ ಎಂಬ ಕವನಗಳ ಮೂಲಕ ಕನ್ನಡ ನಾಡು ನುಡಿಯನ್ನು ಬಿಂಬಿಸಿದರು.

ಕಡ್ಲೇರ ರುಷಿಕ ‘ಅಂದದ ಹೂ’, ಬಿ.ಬಿ.ಕಿಶೋರ್ ಕುಮಾರ್ ‘ಮೋಸದ ತೀರ್ಪನ್ನು ನೀಡದಿರಿ’, ರವಿ ಓಂಕಾರ್ ‘ಜೀವನಾಮೃತ’, ಕೆ.ಎಸ್.ಡಿಂಪಲ್ ‘ಇಷ್ಟೇ ಜೀವನ’, ಹೇಮಲತಾ ಪೂರ್ಣಪ್ರಕಾಶ್ ‘ವಿಸ್ಮಯಗಳ ಸುತ್ತ’ ಎಂಬ ಕವನ ವಾಚಿಸಿದರು. ನಿವೃತ್ತ ಉಪನ್ಯಾಸಕಿ ಶಿವದೇವಿ ಅವನೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಡಿಕೇರಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಕೆ. ಜಯಲಕ್ಷಿö್ಮ ಆಶಯ ನುಡಿಯಾಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೧೪ ಸಾಧಕರನ್ನು ಸನ್ಮಾನಿಸಲಾಯಿತು. ತೆನ್ನೀರ ಗಣೇಶ್ (ಕೃಷಿ), ಮೇ. ಡಾ. ಕುಶ್ವಂತ್ ಕೋಳಿಬೈಲು (ಸಾಹಿತ್ಯ), ಬಿ.ಎಂ. ಪುಷ್ಪಾವತಿ (ಮಕ್ಕಳ ಪಾಲನೆ), ಪರಿಚನ ವಿಮಲ ವಾಸುದೇವ್ (ನಾಟಿ ವೈದ್ಯೆ), ಸೂದನ ಡಾಲಿ (ಕ್ರೀಡೆ), ತಣಲ್ ಸಂಸ್ಥೆ (ಸಮಾಜ ಸೇವೆ), ಪುಟ್ಟು (ಮೋರಿ ವಾದನ), ಕೇಶವಪರವ (ದೈವ ನರ್ತಕ), ಯೋಗ ಪಟು ಮುಕ್ಕಾಟಿ ದಿವ್ಯಾ, ಬಿ.ಎಸ್. ಜೀಷ್ಮಾ (ಯುವಪ್ರತಿಭೆ), ನೀರ್ಕಜೆ ಕೆ. ಆಕಾಶ್ (ತಂತ್ರಜ್ಞಾನ), ಎನ್.ಎ. ಪೊನ್ನಮ್ಮ (ಶಿಕ್ಷಣ), ಸುಧೀರ್ ಮಕ್ಕಿಮನೆ (ತೋಟಗಾರಿಕೆ), ಕುಟ್ಟೇಟಿರ ಕಾವೇರಿಯಪ್ಪ (ಕರಕುಶಲ), ಗೋವಿಂದಮ್ಮನ ಕೆ. ಮುತ್ತಪ್ಪ (ಸೇನೆ) ಅವರುಗಳನ್ನು ಸನ್ಮಾನಿಸಲಾಯಿತು.

ಸಾಹಿತಿ ಬಾರಿಯಂಡ ಆರ್. ಜೋಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಸಮ್ಮೇಳನ ಅಧ್ಯಕ್ಷ ಡಾ. ವಿಜಯ್ ಪೂಣಚ್ಚ ತಂಬAಡ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಬಾಬುಚಂದ್ರ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

- ಹೆಚ್. ಜೆ. ರಾಕೇಶ್ ಕವನ ವಾಚಿಸಿದರು. ನಿವೃತ್ತ ಉಪನ್ಯಾಸಕಿ ಶಿವದೇವಿ ಅವನೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಡಿಕೇರಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಕೆ. ಜಯಲಕ್ಷಿö್ಮ ಆಶಯ ನುಡಿಯಾಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೧೪ ಸಾಧಕರನ್ನು ಸನ್ಮಾನಿಸಲಾಯಿತು. ತೆನ್ನೀರ ಗಣೇಶ್ (ಕೃಷಿ), ಮೇ. ಡಾ. ಕುಶ್ವಂತ್ ಕೋಳಿಬೈಲು (ಸಾಹಿತ್ಯ), ಬಿ.ಎಂ. ಪುಷ್ಪಾವತಿ (ಮಕ್ಕಳ ಪಾಲನೆ), ಪರಿಚನ ವಿಮಲ ವಾಸುದೇವ್ (ನಾಟಿ ವೈದ್ಯೆ), ಸೂದನ ಡಾಲಿ (ಕ್ರೀಡೆ), ತಣಲ್ ಸಂಸ್ಥೆ (ಸಮಾಜ ಸೇವೆ), ಪುಟ್ಟು (ಮೋರಿ ವಾದನ), ಕೇಶವಪರವ (ದೈವ ನರ್ತಕ), ಯೋಗ ಪಟು ಮುಕ್ಕಾಟಿ ದಿವ್ಯಾ, ಬಿ.ಎಸ್. ಜೀಷ್ಮಾ (ಯುವಪ್ರತಿಭೆ), ನೀರ್ಕಜೆ ಕೆ. ಆಕಾಶ್ (ತಂತ್ರಜ್ಞಾನ), ಎನ್.ಎ. ಪೊನ್ನಮ್ಮ (ಶಿಕ್ಷಣ), ಸುಧೀರ್ ಮಕ್ಕಿಮನೆ (ತೋಟಗಾರಿಕೆ), ಕುಟ್ಟೇಟಿರ ಕಾವೇರಿಯಪ್ಪ (ಕರಕುಶಲ), ಗೋವಿಂದಮ್ಮನ ಕೆ. ಮುತ್ತಪ್ಪ (ಸೇನೆ) ಅವರುಗಳನ್ನು ಸನ್ಮಾನಿಸಲಾಯಿತು.

ಸಾಹಿತಿ ಬಾರಿಯಂಡ ಆರ್. ಜೋಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಸಮ್ಮೇಳನ ಅಧ್ಯಕ್ಷ ಡಾ. ವಿಜಯ್ ಪೂಣಚ್ಚ ತಂಬAಡ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಬಾಬುಚಂದ್ರ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

- ಹೆಚ್. ಜೆ. ರಾಕೇಶ್