ಮಡಿಕೇರಿ, ಜ. ೨೭: ಚಾಲನಾ ಅನುಜ್ಞಾ ಪತ್ರದ ನವೀಕರಣ ಸೇರಿದಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಂಬAಧಿಸಿದ ಕೆಲಸ ಕಾರ್ಯಗಳಿಗೆ ಸರಕಾರವು ರೂಪಿಸಿರುವ ತಂತ್ರಾAಶ (ಆನ್‌ಲೈನ್) ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇಂತಹ ಕೆಲಸ - ಕಾರ್ಯಗಳಿಗೆ ಖಾಸಗಿ ಉದ್ಯಮದವರು ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿರುವುದಾಗಿ ಆಕ್ಷೇಪಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ ಹಾಗೂ ಸಮಿತಿಯವರು ಸಲ್ಲಿಸಿದ್ದ ಮನವಿಗೆ ಅವರು ಸ್ಪಂದಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತ ಸರ್ಕಾರದ ಕಾರ್ಯದರ್ಶಿ, ರಸ್ತೆ ಸಾರಿಗೆ ಸಚಿವಾಲಯದ ಆದೇಶದಂತೆ, ಸರ್ಕಾರವು ಸಾರ್ವಜನಿಕರ ಅನುಕೂಲಕ್ಕೆ ಆನ್‌ಲೈನ್ ಮುಖಾಂತರ ಎಲ್ಲಾ ಸೇವೆಗಳನ್ನು ಒದಗಿಸುವ (ಅಂಗೈಯಲ್ಲಿ ದಾಖಲಾತಿಗಳು) ಯೋಜನೆಯಲ್ಲಿ ಈ ಇಲಾಖೆಯ ಎಲ್ಲಾ ಸೇವೆಗಳನ್ನು ಪರಿವಾಹನ್ ಹಾಗೂ ಸಾರಥಿ-೪ ತಂತ್ರಾAಶದ ಮುಖಾಂತರ ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ಸೇವೆಗಳನ್ನು ಒದಗಿಸಲು ಆನ್‌ಲೈನ್ ಮುಖಾಂತರ ಯೋಜನೆಗಳನ್ನು ಜಾರಿಗೊಳಿಸಿ ಆದೇಶಿಸಿರುತ್ತದೆ.

ಈ ಕಚೇರಿಗೆ ಚಾಲನಾ ಅನುಜ್ಞಾ ಪತ್ರದ ಬಗ್ಗೆ ಅಂತರ್ಜಾಲದ ವಿಳಾಸ : hಣಣಠಿs://sಚಿಡಿಚಿಣhi.ಠಿಚಿಡಿivಚಿhಚಿಟಿ.gov.iಟಿ ಅಥವಾ ಮೊಬೈಲ್ ಂPP ಓexಣ ಉeಟಿ ಒPಚಿಡಿivಚಿhಚಿಟಿ ಸುಲಭವಾದ ರೀತಿಯಲ್ಲಿ ಅಗತ್ಯವಿರುವ ಸೇವೆ ಪಡೆಯಲು ಅವಕಾಶವಿರುತ್ತದೆ ಹಾಗೂ ಸರ್ಕಾರವು ನಿಗಧಿ ಪಡಿಸಿದ ಶುಲ್ಕವನ್ನು ಆನ್‌ಲೈನ್ ಮುಖಾಂತರವೇ ಪಾವತಿಸಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ತೊಂದರೆಯಾದಲ್ಲಿ hಣಣಠಿs://ಣಡಿಚಿಟಿsಠಿoಡಿಣ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್‌ಲೈನ್ ಸೇವೆಯ ಉಪಯೋಗದ ಬಗ್ಗೆ ವಿವರ ಪಡೆಯಬಹುದು, ಕಚೇರಿಯಲ್ಲಿ ಈ ಬಗ್ಗೆ ಆನ್‌ಲೈನ್ ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಲು ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸರ್ಕಾರವು ರೂಪಿಸಿರುವ ತಂತ್ರಾAಶದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಏನಾದರೂ ತೊಂದರೆವುAಟಾದಲ್ಲಿ ನೇರವಾಗಿ ಕಚೇರಿಯನ್ನು ಸಂಪರ್ಕಿಸುವAತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬAಧಿಸಿದAತೆ ಪೊನ್ನಂಪೇಟೆ ಉಪನೋಂದಣಿ ಕಚೇರಿಯಲ್ಲಿನ ಸಮಸ್ಯೆ ಕುರಿತು ಸಮಿತಿ ಜಿಲ್ಲಾ ನೋಂದಣಾಧಿಕಾರಿಗಳ ಗಮನಕ್ಕೆ ತಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಪನೋಂದಣಾಧಿಕಾರಿಗಳು ಈ ಬಗ್ಗೆ ವರದಿ ನೀಡುವಂತೆ ಪೊನ್ನಂಪೇಟೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.