ನಾಪೋಕ್ಲು, ಜ. ೨೭: ಮಗುವಿನಲ್ಲಿರುವ ಶಕ್ತಿ ಮತ್ತು ಆಸಕ್ತಿ ಯನ್ನು ಅರಿತು ದಾರಿ ತೋರಿಸುವುದೇ ಶಿಕ್ಷಣದ ಕೆಲಸವಾಗಿದೆ ಎಂದು ಶಿಕ್ಷಣ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಬಿ ಸಿ. ನಾಗೇಶ್ ಹೇಳಿದರು.

ಅವರು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಥಳಿಯ ಕರ್ನಾಟಕ ಪಬ್ಲಿಕ್ ಶಾಲಾ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಮಕ್ಕಳಲ್ಲಿ ರಾಷ್ಟ್ರೀಯ ಭಾವನೆ ಮತ್ತು ಸಾಮಾಜಿಕ ಪ್ರಜ್ಞೆ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಹೊಸ ಶಿಕ್ಷಣ ನೀತಿ ಮೂಲಕ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರಕುವಂತಾಗ ಬೇಕೆಂಬ ಸರ್ವ ಶಿಕ್ಷಣ ಅಭಿಯಾನ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕೆ ಪೂರಕವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಕ್ಷೇತ್ರದಲ್ಲಿನ ಈ ಕಟ್ಟಡಗಳೇ ಸಾಕ್ಷಿಯಾಗಿದೆ ಎಂದರು.

೧೮೦ ಶಿಕ್ಷಕರ ನೇಮಕ ನೇಮಕಾತಿ ಆಗಿದ್ದು ಮಾತ್ರವಲ್ಲದೇ ೧೫. ಸಾವಿರ ನೊಂದಾಯಿತ ಶಿಕ್ಷಕರಲ್ಲಿ ೧೩೦೦೦ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಲು ತಯಾರಿ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಎಲ್ಲಾ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿ ಸಂಪೂರ್ಣ ಕೊರತೆಯನ್ನು ನೀಗಿಸಲಾಗುವುದೆಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ನಮ್ಮ ನಾಡಿನ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಮುಂದಾಲೋಚನೆಯಿAದ ಸ್ಥಳೀಯ ದಾನಿಗಳು ಉದಾರವಾಗಿ ನೀಡಲಾದ ಜಾಗವು ಅತಿಕ್ರಮಣ ಮಾಡಿ ಕೊಂಡಿರುವುದು ದೂರದೃಷ್ಟಕರ. ಕಾನೂನಿನಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಬೇಡ ತಾವಾಗೆ ಅತಿಕ್ರಮಿತ ಜಾಗವನ್ನು ಬಿಟ್ಟುಕೊಟು ಸಹಕರಿಸಬೇಕೆಂದರು. ಅತಿವೃಷ್ಟಿ ಮತ್ತು ಕೊರೋನದಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎಂದ ಅವರು ನಾಡಿನ ಜನತೆ ಈ ಶಾಲೆಯ ಸೌಲಭ್ಯಗಳನ್ನು ತಮ್ಮ ಮಕ್ಕಳಿಗೆ ಕೊಡುವುದರೊಂದಿಗೆ ಉತ್ತಮ ಪ್ರಜೆಯಾಗಿಸಬೇಕೆಂದರು. ಈ ಸಂದರ್ಭ ಸಚಿವರಿಗೆ ಶಾಲಾ ವತಿಯಿಂದ ವಿವಿಧ ಬೇಡಿಕೆಯ ಮನವಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎನ್.ಎಂ.ರವಿ ಕಾಳಪ್ಪ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ.ಜಿ ಬೋಪಯ್ಯ, ಎಸ್‌ಡಿಎಂಸಿ ಕಟ್ಟಡ ಕಾಮಗಾರಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ. ಎಂ ಜಿನ್ನು ನಾಣಯ್ಯ, ಶಾಲಾ ಶೈಕ್ಷಣಿಕ ಗುಣಮಟ್ಟ ಖಾತರಿ ಉಪ ಸಮಿತಿ ಅಧ್ಯಕ್ಷ ಉದಯ ಶಂಕರ್, ಸಮಿತಿ ಸದಸ್ಯರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕಂಗಾAಡ ಜಾಲಿ ಪೂವಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಎಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಪುಟ್ಟರಾಜು, ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಸಮಗ್ರ ಶಿಕ್ಷಣ ಜಿಲ್ಲಾ ಸಮನ್ವಯ ಮತ್ತು ಯೋಜನಾಧಿಕಾರಿ ಕೃಷ್ಣಪ್ಪ ಎಂ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ. ನಾಗರಾಜ, ಸಹಾಯಕ ಅಭಿಯಂತರ ಸತೀಶ್ ಪಿ. ಕಂದಾಯ ಪರಿವೀಕ್ಷಕ ರವಿಕುಮಾರ್, ಜಿ.ಎಂ.ಪಿ.ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಲಾ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಿಕ್ಷಕ ಮತ್ತು ಸಿಬ್ಬಂದಿ ಹಾಗೂ ಪೋಷಕ ವೃಂದ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸ ಲಾಯಿತು. ಪ್ರಭಾರ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ ಸ್ವಾಗತಿಸಿ ಶಿಕ್ಷಕಿ ಉಷಾ ರಾಣಿ ನಿರೂಪಿಸಿದರು. ಪ್ರಭಾರ ಉಪಪ್ರಾಂಶುಪಾಲ ಶಿವಣ್ಣ ಎಂ. ಎನ್. ವಂದಿಸಿದರು. ಬಳಿಕ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮವು ಸಾರ್ವಜನಿಕರನ್ನು ರಂಜಿಸಿತು.

- ದುಗ್ಗಳ