ಮಡಿಕೇರಿ, ಜ. ೨೭ : ಮಡಿಕೇರಿ ತಾಲೂಕು ಸೂರ್ಲಬ್ಬಿ ಸಮೀಪದ ಮುಟ್ಲು ಗ್ರಾಮದಲ್ಲಿ ೧ ವಾರದ ಹಿಂದೆ ಹುಲಿಯೊಂದು ಮೇಯಲು ಬಿಟ್ಟಿದ್ದ ದನವನ್ನು ಕೊಂದುಹಾಕಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರೈತರು ತಾವು ಬೆಳೆದ ಬೆಳೆಯನ್ನು ಕಾಡಾನೆಯಿಂದ ರಕ್ಷಿಸಲಾಗದೆ ನಷ್ಟ ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ಮೀನುಕೆರೆ ಹಡ್ಲುವಿನಲ್ಲಿ ಒಂಟಿ ಸಲಗವೊಂದು ಕಾಣಿಸಿ ಕೊಂಡಿದೆ. ಭಯದೊಂದಿಗೆ ರೈತರಾದ ಮೇದಮ್ಮಯ್ಯ ಆ ಕಡೆಗೆ ದನಗಳು ಹೋಗದಂತೆ ಜಾಗ್ರತೆ ವಹಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಅವರು ದನಗಳನ್ನು ಮೇಯಿಸಿ ಬೆಟ್ಟದಿಂದ ಕೊಟ್ಟಿಗೆಯ ಕಡೆಗೆ ಕಾಡುದಾರಿಯಲ್ಲೀ ಕಾಡಾನೆ ಹಾಗೂ ಹುಲಿರಾಯನ ಭೀತಿ ನಡುವೆ ಬಂದಿದ್ದಾರೆ. ಇನ್ನೇನು ದನಗಳು ಕೊಟ್ಟಿಗೆ ಸೇರುತ್ತಿರುವ ಹೊತ್ತಿಗೆ ಪಕ್ಕದಲ್ಲಿ ನೆರಮನೆಯ ಯೋಗಾತ್ಮ ಎಂಬವರು ‘ಆನೆ... ಬಂತು... ದಾರಿಯಲ್ಲಿ |

ಯಾರೂ ಬರಬೇಡಿ’ ಎಂದು ಬೊಬ್ಬೆ |ಹಾಕಿದ್ದಾರೆ. (ಮೊದಲ ಪುಟದಿಂದ) ರೈತ ಮೇದಮ್ಮಯ್ಯ ಗಾಬರಿಗೊಂಡು ಅತ್ತ ತಿರುಗಿದರೆ ಕೆಲಹೊತ್ತಿನ ಮೊದಲು ಸುಮಾರು ೪ ಕಿ. ಮೀ. ದೂರದ ಮೀನುಕೆರೆ ಹಡ್ಲುವಿನಲ್ಲಿ ನೋಡಿದ್ದ ಈ ಒಂಟಿ ಸಲಗ ಮನೆಯ ಬಳಿ ಪ್ರತ್ಯಕ್ಷವಾಗಿದೆ. ಈ ಸಲಗ ನಿತ್ಯ ದನಗಳು ತಿರುಗುವ ದಾರಿ ಮೂಲಕ ಅಷ್ಟೇ ವೇಗವಾಗಿ ಮನೆಯ ಬಳಿ ಬಂದು ತಲಪಿರುವದು ಕಂಡು ಪ್ರತ್ಯಕ್ಷದರ್ಶಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಈ ಸಲಗ ಯಾವುದೇ ಗಾಬರಿ ಇಲ್ಲದೆ ಅಲ್ಲಿಂದ ಪಟಾಕಿ ಸಿಡಿಸಿ ಬೊಬ್ಬೆ ಹೊಡೆಯುವ ಮೂಲಕ ಅಟ್ಟಿದಾಗ ತಮ್ಮ ದನಗಳ ರೀತಿಯೇ ಪಕ್ಕದ ಕಾಡು ಸೇರಿಕೊಂಡ ದೃಶ್ಯ ಈ ಮಂದಿಯ ಹುಬ್ಬೇರಿಸಿದೆ.

ರೈತರು ಬೆಳೆದ ಕಾಫಿ, ಭತ್ತ, ಏಲಕ್ಕಿ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿರುವುದಾಗಿ ಮುಟ್ಲುವಿನ ಬೆಳೆಗಾರ ಅಶೋಕ್ ಸಿ.ಆರ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸ್ಥಳ ಪರಿಶೀಲನೆ ವೇಳೆ ಕಾಡಾನೆಯು ಕಾಣಸಿಗದ ಪರಿಣಾಮ ಸ್ಥಳೀಯರ ಸಮಸ್ಯೆಗೆ ಪರಿಹಾರ ದೊರಕುವುದು ಕಷ್ಟಸಾಧ್ಯವಾಗಿದೆ.