ಮಹಾಪುರುಷರ ವಾರ್ಷಿಕ ಹುಟ್ಟು ಹಬ್ಬ. ಹರಕೆ ತೀರಿಸುವಂತಹ, ನಾಮಕಾವಸ್ಥೆಯ ಆಚರಣೆ ಆಗಬಾರದು. ಬದಲು ಉತ್ತಮ ಸಂದೇಶ ಸಾರು ವಂತಹ, ಪ್ರಯೋಜನ ಕಾರಿ ಕಾರ್ಯಕ್ರಮ ಆಗಬೇಕು ಎಂಬುದು ಪ್ರಜ್ಞಾವಂತರ ಅನಿಸಿಕೆ.
ಜನವರಿ ೨೮ ಬರುತ್ತದೆ, ಹೋಗುತ್ತದೆ, ಪ್ರಪಂಚ ಖ್ಯಾತಿಯ ಶಿಸ್ತಿನ ಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪ ಅವರ (೧೮೯೯-೧೯೯೩) ಹುಟ್ಟುಹಬ್ಬವೂ ಅಷ್ಟೆ. ಸರಕಾರ, ಸಂಘ-ಸAಸ್ಥೆಗಳವರು ಆಚರಿಸುತ್ತಾರೆ, ಬಿಡುತ್ತಾರೆ, ಇಷ್ಟರಿಂದಲೇ ಸಮಾಜಕ್ಕೆ ಉತ್ತಮ ಸಂದೇಶ ಸಿಗದು, ರಾಜಕೀಯೇತರ ಮಹಾಪುರುಷರ ಹುಟ್ಟುಹಬ್ಬ, ಸ್ಮರಣಾದಿಗಳು ಅರ್ಥಪೂರ್ಣವೂ, ಔಚಿತ್ಯಪೂರ್ಣವೂ ಆಗಿದ್ದರೆ ಸೊಗಸು.
ಸ್ವತಂತ್ರ ಭಾರತದ ರಕ್ಷಣಾಪಡೆಗಳ ಪ್ರಪ್ರಥಮ ಭಾರತೀಯ ಮಹಾದಂಡನಾಯಕ ಕಮಾಂಡರ್ ಇನ್ ಚೀಫ್ ಪದವಿಯಲ್ಲಿ ಪ್ರಪಂಚವೇ ಬೆರಗಾಗುವಂತಹ ಸೇನಾಸಾಧನೆ ಮಾಡಿದವರು ಕೊಡಂದೇರ ಎಂ. ಕಾರ್ಯಪ್ಪ ಅವರು. ೧೯೪೭ರ ತನಕ ಬ್ರಿಟಿಷ್ ಆದಿಪತ್ಯದಲ್ಲಿದ್ದ ಭಾರತೀಯ ಸೇನೆಯನ್ನು ‘‘ಭಾರತೀಕರಣ’’ಗೊಳಿಸಿದ ಖ್ಯಾತಿ ಕಾರ್ಯಪ್ಪ ಅವರದು. ಅಪ್ಪಟ ದೇಶಪ್ರೇಮಿಯೂ, ಶಿಸ್ತಿನ ಸರದರರೂ, ಸಮಯಪ್ರಜ್ಞೆ-ಕರ್ತವ್ಯಪ್ರಜ್ಞೆಗೆ ಖ್ಯಾತನಾಮರೂ ಆಗಿ ಮೆರೆದವರು ಕೊಡಂದೇರ ಕಾರ್ಯಪ್ಪ ಅವರು. ಮಹಾತ್ಮಗಾಂಧಿ, ಮೋತಿಲಾಲ್ ನೆಹರೂ, ಜವಹರಲಾಲ್ನೆಹರೂ...ಇಂತಹ ಹಲವು ಲೋಕಮಾನ್ಯರ ಒಡನಾಟದಲ್ಲಿದ್ದ ಕಾರ್ಯಪ್ಪ ಅವರು ಸ್ನೇಹ, ಸಜ್ಜನಿಕೆ, ಮಾನವತಾ ಗುಣಗಳಿಗೆ ಸಾಕಾರಮೂರ್ತಿಯಂತೆ ಪಳಗಿದವರು.
ಇಂತಹ ಅಪ್ಪಟ ಅಪರೂಪದ ರಾಷ್ಟç ಸಾಧಕನ ಹುಟ್ಟುಹಬ್ಬವನ್ನು ಜವನರಿ ೨೮ ರಂದು ಮಾಮೂಲಿನ ಸರಳತೆಯಲ್ಲಿ ಮಾಡಿ ಮುಗಿಸುವುದು ಆದರ್ಶಪ್ರಾಯ ಅಲ್ಲ. ಬದಲು ಅಪೇಕ್ಷಿತರ ಬಹುಕಾಲದ ಬೇಡಿಕೆಯಂತೆ ಜನವರಿ ೨೮ ರಂದು ಅಖಿಲ ಭಾರತ ಮಟ್ಟದಲ್ಲಿ ‘‘ರಾಷ್ಟಿçÃಯ ಶಿಸ್ತು ದಿನ, ನೇಶನಲ್ ಡಿಸಿಪ್ಲೀನ್ ಡೇ- ಓಚಿಣiಟಿಚಿಟ ಆesಛಿiಠಿಟiಟಿe ಆಚಿಥಿ’’ ಎಂದು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಅಂದು ರಾಷ್ಟçಮಟ್ಟದ ಯುವ ಜನರಿಗೆ ಶಿಸ್ತಿಗೆ ಸಂಬAಧಪಟ್ಟAತೆ ಹಲವಾರು ವಿಶಿಷ್ಟ ಸ್ಪರ್ಧೆಗಳು, ಪ್ರದರ್ಶನಗಳು, ಪ್ರಶಸ್ತಿ-ಪಾರಿತೋಷಕಗಳು ನೀಡುವಂತಹ ಕಾರ್ಯಯೋಜನೆಗಳನ್ನು ರೂಪಿಸಬೇಕು. ರಾಷ್ಟçಮಟ್ಟದ ಎನ್.ಸಿ.ಸಿ. ಯುವಜನರಿಗೂ ಇದರಿಂದ ಸ್ಫೂರ್ತಿ, ಪ್ರಯೋಜನ, ಮಾರ್ಗದರ್ಶನ, ಲಭಿಸುವಂತಾಗಬೇಕು. ಈ ವಿಷಯದಲ್ಲಿ ‘‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ’’ ಸಂಬAಧಿಸಿದವರಿಗೆ ಈಗಾಗಲೇ ಸಾಕಷ್ಟು ಮನವಿ ಪತ್ರ ಸಲ್ಲಿಸಿದ್ದರೂ ಇದುವರೆಗೆ ಪ್ರಯೋಜನ ಆಗಿರುವುದಿಲ್ಲ, ಮುಂದಾದರೂ ಇದು ಕಾರ್ಯರೂಪಕ್ಕೆ ಬರಲಿ ಎನ್ನುವುದು ಅಭಿಮಾನಿಗಳ ಆಶಯ.
೧೯೪೮ರಲ್ಲಿ ಅಂದಿನ ಕೊಡಂದೇರ ಎಂ. ಕಾರ್ಯಪ್ಪ ಅವರು ಭೂಸೇನೆ-ನೌಕಾಸೇನೆ, ವಾಯುಸೇನೆ ಸೇರಿದ ಮೂರೂ ಪಡೆಗಳ ಮುಖ್ಯಸ್ಥರಾಗಿ ಬ್ರಿಟಿಷ್ ಅಧಿಕಾರಿ ಜನರಲ್ ರಾಯ್ಬುಚರ್ನಿಂದ ಅಧಿಕಾರ ಸ್ವೀಕರಿಸಿದ ಜನವರಿ ೧೫ ಅನ್ನು ಅಂದಿನಿAದ ಭಾರತದಲ್ಲಿ ‘‘ಸೇನಾ ದಿನ, ಆರ್ಮಿ ಡೇ’’ ಎಂದು ಆಚರಿಸಲಾಗುತ್ತಿದೆ. ಈ ಮೇರೆ ಈ ವರ್ಷ ೧೫-೦೧-೨೩ ರಂದು ನವದೆಹಲಿಯ ಬದಲು ಇದೇ ಪ್ರಪ್ರಥಮವಾಗಿ ಬೆಂಗಳೂರಿನಲ್ಲಿ ಅಧಿಕೃತ ಸೇನಾದಿನ, ರಕ್ಷಣಾ ಮಂತ್ರಿ ರಾಜನಾಥಸಿಂಗ್, ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಇಂತಹ ಗಣ್ಯರ ಸಮ್ಮುಖದಲ್ಲಿ ನಡೆದಿದೆ.
ಇಂತಹ ಅಪರೂಪದ ಪ್ರಸಂಗಕ್ಕೆ ಕಾರಣೀಭೂತರಾದ ಸಾಧಕ ನೋರ್ವನ ಹುಟ್ಟುಹಬ್ಬವು ಇಂದಿನ ಯುವ ಪೀಳಿಗೆಗೆ ಸ್ಮರಣೀಯವೂ ಸ್ಫೂರ್ತಿದಾಯಕವೂ, ಅನುಕರಣೀಯವೂ ಆದರ್ಶಪ್ರಾಯವೂ ಆಗಿರಬೇಕಾದುದು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ಜನವರಿ ೨೮ನೇ ದಿನಾಂಕವನ್ನು ರಾಷ್ಟಿçÃಯ ಶಿಸ್ತಿನ ದಿನ’’ ಎಂದು ಆಚರಿಸುವುದರ ಮೂಲಕ ಅಗಲಿದ ಅಗ್ರಗಣ್ಯ ವೀರಸೇನಾನಿಗೆ ಗೌರವ ಸಲ್ಲಿಸುವಂತಾಗ ಬೇಕು ಎನ್ನುವುದು ಸೇನಾಭಿಮಾನಿಗಳ ಬಹುಕಾಲದ ಬೇಡಿಕೆ ಆಗಿದೆ.
ಕಾರ್ಯಪ್ಪ ಬಾಲ್ಯ: ೨೮-೦೧-೧೮೯೯ ರಂದು ಶನಿವಾರಸಂತೆಯಲ್ಲಿ ಜನನ. ಅಂದು ಕಂದಾಯ ಇಲಾಖೆಯಲ್ಲಿ ಅಧಿಕಾರಿ ಆಗಿ ಶನಿವಾರಸಂತೆಯಲ್ಲಿ ಸರಕಾರೀ ಸೇವೆಯಲ್ಲಿದ್ದ ಕೊಡಂದೇರ ಮಾದಪ್ಪ-ಕಾವೇರಮ್ಮರಿಗೆ ನಾಲ್ಕು ಗಂಡು, ಇಬ್ಬರು ಹೆಣ್ಣು ಮಕ್ಕಳು. ೩ನೇ ಪುತ್ರ ಕಾರ್ಯಪ್ಪ. ಕುಶಾಲನಗರ, ಮಡಿಕೇರಿ, ಚೆನೈನಲ್ಲಿ ಆರಂಭಿಕ ವಿದ್ಯಾಭ್ಯಾಸ, ಓದು, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಅತೀವ ಆಸಕ್ತನಾಗಿದ್ದ ಕಾರ್ಯಪ್ಪ ಅವರಿಗೆ ಅಂದಿನಿAದಲೇ ಶಿಸ್ತಿನ ಸಿಪಾಯಿ ಆಗಬೇಕೆಂಬ ಕನಸು. ೧೯೧೮ರಲ್ಲಿ ಇವರಿಗೆ ೧೯ರ ಪ್ರಾಯ. ಆ ಕಾಲಘಟ್ಟದಲ್ಲಿ ಭಾರತೀಯರು ಸೇನಾಧಿಕಾರಿ ಆಗುವುದು ಬಹು ತ್ರಾಸದಾಯಕ ಆಗಿತ್ತು. ಅಂದೇ ಆರಡಿ ಎತ್ತರದ ಅಜಾನುಬಾಹು ದೇಹ, ಕ್ರೀಡಾಧಿಕಾರ, ಸೈನಿಕ ಬದುಕಿನ ಉತ್ಕಟಪ್ರೇಮಿ ಆಗಿದ್ದ ಕಾರ್ಯಪ್ಪ, ‘‘ಕಿಂಗ್ಸ್ ಕಮೀಷನ್’’ ನ ಕಠಿಣ ಸವಾಲುಗಳೆಲ್ಲವನ್ನು ಎದುರಿಸಿ ಜಯಶೀಲರಾದರು. ಭಾರತೀಯ ಮೂಲದ ಪ್ರಪ್ರಥಮ ಅಧಿಕಾರಿಯಾಗಿ ಕಾರ್ಯಪ್ಪ ಸೆಕೆಂಡ್ ಲೆಫ್ಟಿನೆಂಟ್ ಪದವಿಯಲ್ಲಿ ಸೇನಾಪಡೆಗೆ ನಿರ್ಮಾಪಕರಾದರು. ಅಲ್ಲಿಂದ ಮುಂದಕ್ಕೆ ಸೇನಾ ಬದುಕಿನಲ್ಲಿ ಹಿಂತಿರುಗಿ ನೋಡದ ನಾಗಾಲೋಟ.
ವೈವಾಹಿಕ ಜೀವನ: ೧೯೩೭ರಲ್ಲಿ ಇವರು ಮನೆಯಪಂಡ ಮುತ್ತಣ್ಣನವರ ಪುತ್ರಿ ಮುತ್ತಮ್ಮರನ್ನು ವಿವಾಹ ಆದರು. ಈ ದಂಪತಿಗೆ ನಂದಾ ಮತ್ತು ನಳಿನಿ ಇಬ್ಬರು ಮಕ್ಕಳು. ಮಡಿಕೇರಿಯ ರೋಶನಾರದಲ್ಲಿ ನೆಲೆಸಿರುವ ನಂದಾ ಕಾರ್ಯಪ್ಪ ಅವರು ಭಾರತೀಯ ವಾಯುಪಡೆಯಲ್ಲಿ ಏರ್ಮಾರ್ಷಲ್ ಪದವಿಯಲ್ಲಿ ಸೇವೆ ಸಲ್ಲಿಸಿ, ಈಗ ಸಮಾಜ ಸೇವಕ ಆಗಿರುತ್ತಾರೆ. ನಳಿನಿ ಕಾರ್ಯಪ್ಪನವರೂ ಮಡಿಕೇರಿಯಲ್ಲಿಯೇ ನೆಲೆ ನಿಂತಿದ್ದಾರೆ.
ಕಾರ್ಯಪ್ಪ; ಸೇನಾ ಬದುಕು : ತನ್ನ ಕಠಿಣ ಪರಿಶ್ರಮ, ಹಠ, ಗುರಿ, ಪ್ರಾಮಾಣಿಕತೆ, ಶಿಸ್ತು ಸೇರಿದ ಸ್ವಸಾಮರ್ಥ್ಯ ಬಲದಿಂದ ಸೇನೆಯಲ್ಲಿ ಕ್ರಮವಾಗಿ ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕರ್ನಲ್, ಕರ್ನಲ್ ಬ್ರಿಗೇಡಿಯರ್, ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್, ಜನರಲ್ ಪದವಿಗೆ ಹಂತ-ಹAತವಾಗಿ ಮೇಲೇರಿದ ಕಾರ್ಯಪ್ಪನವರು ಹಲವು ಕ್ಷೇತ್ರದಲ್ಲಿ ‘‘ಪ್ರಪ್ರಥಮ ಭಾರತೀಯ’’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ೧೯೧೮ ರಿಂದ ೧೯೫೩ರ ಸುಮಾರು ೩೫ ವರ್ಷಗಳವರೆಗೆ ಸೇವೆ ಮಾಡಿ ನಿವೃತ್ತರಾದರು. ಸೇವಾವಧಿಯಲ್ಲಿ ೨ನೇ ಪ್ರಪಂಚ ಮಹಾಯುದ್ಧ, ಭಾರತ-ಪಾಕಿಸ್ತಾನ ಮೊದಲ ಯುದ್ಧ, ಕಾಶ್ಮೀರ ವಿಮೋಚನೆಯ ಕದನ...ಇತ್ಯಾದಿಗಳಲ್ಲಿ ಮುಂಚೂಣಿಯಲ್ಲಿದ್ದ ಕಾರ್ಯಪ್ಪ ಯಾವತ್ತಿಗೂ ಯಾವದೇ ಸೇನಾ ಕುಂದುಕೊರತೆಗಳಿಗೆ ಆಸ್ಪದ ಆಗದಂತೆ ಕರ್ತವ್ಯ ನಿಭಾಯಿಸಿದ ಚತುರ.
ಅಪರೂಪದ ಸೇನಾ ಕಾರ್ಯ: ತನ್ನ ಅಧಿಕಾರವಧಿಯಲ್ಲಿ ೧೯೪೭ರವರೆಗೆ ಬ್ರಿಟಿಷ್ಮಯ ಆಗಿದ್ದ ಸೇನೆಯನ್ನು ಸಂಪೂರ್ಣ ಭಾರತೀಕರಣ ಗೊಳಿಸಿದ್ದುದ್ದು; ಸೇನಾಪಡೆಗಳಲ್ಲಿ ರಾಜಕೀಯ ನುಸುಳದಂತೆ ಭದ್ರಬುನಾದಿ ಹಾಕಿದುದು; ಸೈನಿಕರ ರಕ್ತದಲ್ಲಿ ದೇಶಭಕ್ತಿ, ಶಿಸ್ತು, ಸಂಯಮಗಳAತಹ ಗುಣಗಳನ್ನು ವೃದ್ಧಿಸಿದುದು; ಸೈನಿಕರಲ್ಲಿ ವಿಧೇಯತೆ, ಕರ್ತವ್ಯಪರತೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆಯಂತಹ ಗುಣಾಭಿವೃದ್ಧಿಗೆ ನೆರವಾದುದು ಇಂತವುಗಳು ಕಾರ್ಯಪ್ಪ ಅವರ ವಿಶಿಷ್ಟ ಸಾಧನೆಯ ಪಟ್ಟಿಗೆ ಸೇರುತ್ತದೆ.
ವಿದೇಶಗಳಲ್ಲಿ ಸೇವೆ : ೧೯೫೩ರಲ್ಲಿ ಸೇನೆಯಿಂದ ನಿವೃತ್ತರಾದ ಬಳಿಕ ಕಾರ್ಯಪ್ಪ ಅವರು ಆಸ್ಟೆçÃಲಿಯಾ ಮತ್ತು ನ್ಯೂಜಿಲ್ಯಾಂಡ್, ದೇಶಗಳಲ್ಲಿ ಭಾರತೀಯ ರಾಯಭಾರಿ (ಅಂಬಾಸಿಡರ್, ಹೈಕಮೀಷನರ್) ಆಗಿ ಶಿಸ್ತಿನ ಸೇವೆ ಸಲ್ಲಿಸಿ ಅಲ್ಲಿಯೂ ಜನಪ್ರಿಯತೆ ಪಡೆದರು.
ಅಂತರರಾಷ್ಟಿçÃಯ ಗೌರವ: ವಿಶ್ವ ಮಟ್ಟ ಸೇನಾನಿ ಆದ ಕಾರ್ಯಪ್ಪ ಅವರು ಅತೀವ ಶಿಸ್ತಿನ ಸರದಾರನಾಗಿ ಕಾರ್ಯನಿರ್ವಹಿಸಿದ ಪರಿಯನ್ನು ಮೆಚ್ಚಿ ಬ್ರಿಟಿಷ್ ಸರಕಾರ ಇವರಿಗೆ ‘‘ಆರ್ಡರ್ ಆಫ್ ಬ್ರಿಟಿಷ್ ಅಂಪೈರ್ ‘‘ಔಡಿಜeಡಿ oಜಿ bಡಿiಣish emಠಿiಡಿe obe’’ ಪ್ರಶಸ್ತಿ ನೀಡಿ ಗೌರವಿಸಿತು. ಅಮೇರಿಕಾ ಸರಕಾರ ‘‘ಲೀಜನ್ ಆಫ್ ಮೆರಿಟ್’’ ‘‘ಐegioಟಿ oಜಿ meಡಿiಣ’’ ಪ್ರಶಸ್ತಿ ನೀಡಿ ಗೌರವಿಸಿತು. ನೇಪಾಳದೇಶ ‘‘ಗೌರವ ಜನರಲ್’’ ಪದವಿ ನೀಡಿ ಸನ್ಮಾನಿಸಿತು. ಆಗ್ರ ಮೈಸೂರು ವಿಶ್ವವಿದ್ಯಾನಿಲಯ ‘‘ಗೌರವ ಡಾಕ್ಟರೇಟ್’’ ಪದವಿ ನೀಡಿ ಗೌರವಿಸಿತು. ಬಳಿಕ ೧೪-೦೧-೧೯೮೬ರಲ್ಲಿ ಭಾರತ ಸರ್ಕಾರ ರಕ್ಷಣಾ ಪಡೆಯ ಅತ್ಯುನ್ನತ ಸ್ಥಾನ ‘‘ಫೀಲ್ಡ್ ಮಾರ್ಷಲ್’’ ಪದವಿಯನ್ನು ಜೀವನ ಪರ್ಯಂತ ನೀಡಿ ದೆಹಲಿ ರಾಷ್ಟçಪತಿ ಭವನದಲ್ಲಿ ಸನ್ಮಾನಿಸಿತು. ರಾಷ್ಟç-ಅಂತರರಾಷ್ಟç ಮಟ್ಟದ ಸಂಘ-ಸAಸ್ಥೆಗಳೂ ಇವರನ್ನು ಗೌರವಿಸಿದುದು ಅಗಣಿತವಾಗಿದೆ.
ದೇಶಸೇವೆ ಸಮಾಜ ಪ್ರೀತಿ : ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಕಾರ್ಯಪ್ಪ ಅವರಿಗೆ ತನ್ನ ಹುಟ್ಟೂರು, ನಾಡಿನ ಪ್ರಕೃತಿ ಪರಿಸರ, ಸ್ವಂತ ಮನೆ, ‘ರೋಶನಾರ’ ಇದರ ಬಗ್ಗೆ ಅತಿಯಾದ ಮಮತೆ ಎಂದೂ ಕುಂದಿರಲಿಲ್ಲ, ಇದರ ಮಧ್ಯೆ ಅಖಿಲಭಾರತ ಕ್ರೀಡಾ ಪರಿಷತ್ತಿನ ಅಧ್ಯಕ್ಷ, ಅಖಿಲ ಭಾರತ ಮಾಜಿ ಸೈನಿಕರ ಸಂಘದ ಅಧ್ಯಕ್ಷ... ಇಂತಹ ಹಲವು ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದರು. ಆ ಕಾಲದಲ್ಲಿ ತನ್ನ ಸ್ವಂತ ಆದಾಯ ಮೂಲ ಕಡಿಮೆ ಇದ್ದರೂ ದೇಶ ಮಟ್ಟದಲ್ಲಿ ಮಿಂಚಿನAತೆ ಸಂಚರಿಸಿ, ಯುವ ಜನರಲ್ಲಿ ಸ್ಫೂರ್ತಿ ತುಂಬಿಸುತ್ತಿದ್ದರು. ಎಳೆಯರು ಸೇರಿದ ದೇಶಿಗರಲ್ಲಿ ರಾಷ್ಟçಭಕ್ತಿ, ಶಿಸ್ತು, ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆ, ಮೂಡಿಸುವುದೇ ಇವರ ಅಂತಿಮ ಗುರಿಯಾಗಿತ್ತು. ಇದಕ್ಕಾಗಿ ಇಂಗ್ಲಿಷ್ನಲ್ಲಿ ‘‘ಎ ಕಾಲ್ ಟೂ ಯೂತ್’’ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸಿ ಉಚಿತವಾಗಿ ವಿತರಿಸುತ್ತಿದ್ದರು. ಪ್ರತೀ ಸಭೆ-ಸಮಾರಂಭದ ಕೊನೆಯಲ್ಲಿ ‘‘ಜೈಹಿಂದ್’’ ಎಂಬ ಘೋಷಣೆ ಯನ್ನು ಜೋರಾಗಿ ಮೊಳಗಿಸಲು ಸಭಿಕರಿಗೆ ಪ್ರೇರೇಪಿಸಿ ಆನಂದಿಸುತ್ತಿದ್ದರು.
ಮಾತಾಪಿತರು...ಸೈನಿಕ...ಸ್ಮರಣೆ: ತನಗೆ ಜನ್ಮ ನೀಡಿದ ಮಾತಾಪಿರತನ್ನು ಪೂಜ್ಯತಾ ಭಾವದಿಂದ ಸ್ಮರಿಸಿ, ಪ್ರತಿದಿನ ಎದ್ದ ಕೂಡಲೇ ಅವರ ಭಾವಚಿತ್ರಕ್ಕೆ ನಮಿಸುತ್ತಿದ್ದರು. ಅದರ ಬಳಿಕ ಸೈನಿಕನೋರ್ವನ ಭಾವಚಿತ್ರಕ್ಕೆ ಪ್ರತಿದಿನ ‘‘ಸೆಲ್ಯೂಟ್’’ ಹೊಡೆಯುತ್ತಿದ್ದರು.
ಮಾನವೀಯತೆಯ ಮೌಲ್ಯ : ಮೊದಲಿಗೆ ‘‘ಹಿಂದೂಸ್ತಾನ್ (ಭಾರತ) ಬಳಿಕ ‘‘ಫೌಜ್ಸ್ತಾನ್’’ (ಮಿಲಿಟರಿ) ಎಂಬುದು ಇವರ ದೇಶಪ್ರೇಮ, ಸೇನಾ ಪ್ರೇಮಕ್ಕೆ ಸಾಕ್ಷಿ ಆಗಿತ್ತು. ಜನಸ್ನೇಹಿ ಆಗಿದ್ದ ಇವರು ಮಾನವೀಯತೆ ಗುಣಗಳಿಗೆ ಪ್ರಾಶಸ್ತö್ಯ ನೀಡುತ್ತಿದ್ದರು. ಎಲ್ಲಾ ಜಾತಿ-ಜನಾಂಗ-ಧರ್ಮ-ದೇವರನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನು ಸಮಾನತೆಯಿಂದ ಕಾಣುತ್ತಿದ್ದರು.
ಸ್ಮಾರಕ: ೯೪ ವರ್ಷಗಳವರೆಗೆ ಬಾಳಿ ಬದುಕಿದ ಫೀ. ಮಾ. ಕಾರ್ಯಪ್ಪ್ಪ ಅವರು ೧೫-೦೫-೧೯೯೩ ರಂದು ವಿಧಿವಶರಾದರು. ಬಳಿಕ ೧೯೯೬ ರಲ್ಲಿ ಮಡಿಕೇರಿಯ ಅಂದಿನ ಸುದರ್ಶನ ವೃತ್ತದ ಬಳಿ ಆಳೆತ್ತರದ ‘‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಸ್ಥಾಪನೆ ಆಯಿತು, ಅಂದಿನಿAದ ವೃತ್ತಕ್ಕೆ ‘‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ’’ ಎಂದು ನಾಮಕರಣವಾಯಿತು. ದೇಶ ವಿದೇಶ ಮಟ್ಟದಲ್ಲಿ ಫೀ. ಮಾ. ಕಾರ್ಯಪ್ಪ ಹೆಸರಿನ ರಸ್ತೆ, ಬಡಾವಣೆ, ಉಪನಗರ, ವೃತ್ತ, ಕಾಲೇಜು, ಕ್ರೀಡಾ ಸಮುಚ್ಚಯ ಸ್ಟೇಡಿಯಂ, ಆಟದ ಮೈದಾನ, ಪೆರೇಡ್ ಮೈದಾನ, ಮಿಲಿಟರಿ ಯೂನಿಟ್, ಪುಸ್ತಕ ಭಂಡಾರ, ವಸ್ತು ಸಂಗ್ರಹಾಲಯ, ಮಿಲಿಟರಿ ಸ್ಮಾರಕ, ಪ್ರತಿಮೆ, ಕಟ್ಟಡ, ಕಾಂಪ್ಲೆಕ್ಸ್ ಇತ್ಯಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ತಲೆ ಎತ್ತಿದೆ. ಭಾರತ ಸರಕಾರದ ಅಂಚೆ ಇಲಾಖೆ ಕಾರ್ಯಪ್ಪ ಸ್ಮರಣಾರ್ಥ ೧೯೯೭ರಲ್ಲಿ ವಿಶೇಷ ಅಂಚೆ ಚೀಟಿಯನ್ನು Sಠಿeಛಿiಚಿಟ ಅommemoಡಿಚಿಣiue Sಣಚಿmಠಿ ಹೊರ ತಂದು ಗೌರವಿಸಿದೆ. ಈ ಅಪರೂಪದ ಗೌರವ ಪಡೆದವರಲ್ಲಿ ಕಾರ್ಯಪ್ಪ ಅವರು ಕೊಡಗಿನ ಪ್ರಪ್ರಥಮ ಸಾಧಕ ಎನಿಸಿದ್ದಾರೆ.
ಇಂತಹ ವಿಶಿಷ್ಟ ಸಾಧನೆಗಳ ಸರದಾರ, ಅದ್ವಿತೀಯ ಮಹಾಪುರುಷ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪ (ಚಿಮ್ಮ) ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ...ದಂತಕಥೆ ರೂಪದಲ್ಲಿ ಹರಡಿ ಹಬ್ಬಿರುವ ಅವರ ಅಪಾರ ಸೇವಾಪರಿ, ಸಂದೇಶಾದಿಗಳು ಎಂದೂ ಜೀವಂತ ಆಗಿದೆ. ಈ ಬಗೆಯ ಅಪ್ರತಿಮ ರಾಷ್ಟçನಾಯಕನ ಹೆಸರು ಸದಾ ಹಚ್ಚಹಸುರಾಗಿ ಮೆರೆಯಬೇಕು. ಮಹಾತ್ಮ ಗಾಂಧೀಜಿ ‘‘ರಾಷ್ಟçಪಿತ’’ ರಾದರೆ, ಫೀ. ಮಾ. ಕಾರ್ಯಪ್ಪ ಅವರು ‘‘ಸೇನಾಪಿತ’’ ರಾಗಿ ಅನನ್ಯ ಸೇವೆ-ತ್ಯಾಗ ಮಾಡಿದ್ದಾರೆ.
ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರಿಗೆ ಮರಣೋತ್ತರ ‘‘ಭಾರತ ರತ್ನ’’ ಪ್ರಶಸ್ತಿ ಸಿಗಬೇಕು; ಅವರ ಜನ್ಮದಿನ ‘‘ರಾಷ್ಟಿçÃಯ ಶಿಸ್ತಿನ ದಿನ ಆಗಬೇಕು. ಎಂಬೀ ಬೇಡಿಕೆಗಳೂ ಹಚ್ಚ ಹಸುರಾಗಿಯೇ ಉಳಿಯುತ್ತದೋ ಅಥವಾ ಕಾರ್ಯರೂಪಕ್ಕೆ ಬರುತ್ತದೋ ಎಂಬುದನ್ನು ಜನ ಕಾದು ನೋಡಬೇಕಾಗಿದೆ.
‘‘ಜೈ ಹಿಂದ್ ಎಫ್.ಎಂ.ಸಿ.’’
-ಡಾ. ಉಳ್ಳಿಯಡ ಎಂ. ಪೂವಯ್ಯ,
ಕಾರ್ಯದರ್ಶಿ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಜನರಲ್ ತಿಮ್ಮಯ್ಯ ಫೋರಂ, ಮಡಿಕೇರಿ.
ಮೊ: ೯೪೪೮೭೨೦೧೬೮