ಮಡಿಕೇರಿ, ಜ. ೨೮: ವೀರಾಜಪೇಟೆ ಪಟ್ಟಣದಿಂದ ಕೇರಳಕ್ಕೆ ಹೋಗುವ ರಾಜ್ಯ ಹೆದ್ದಾರಿಯ ೬ ಕಿಲೋಮೀಟರ್ ನಂತರ ಬಲ ಬದಿಯಲ್ಲಿ ಮಾಕುಟ್ಟ ಕೆರಟ್ಟಿ ಮೀಸಲು ಅರಣ್ಯ ಹಾಗೂ ಎಡ ಬದಿಯಲ್ಲಿ ಬ್ರಹ್ಮಗಿರಿ ವನ್ಯ ಜೀವಿ ವಲಯಕ್ಕೆೆ ಸೇರಿದ ಉರ್‌ಟಿ ಅರಣ್ಯದ ಒಳಗೆ ಕೇರಳದಿಂದ ವಾಹನಗಳಲ್ಲಿ ತಂದು ಕಸ, ಬೀರು ಬಾಟಲಿ, ಆಸ್ಪತ್ರೆ ತ್ಯಾಜ್ಯ ಪ್ಲಾಸ್ಟಿಕ್ ಇತ್ಯಾದಿಗಳನ್ನು ಸುರಿಯಲಾಗುತ್ತಿದೆ.

ಮಾಕುಟ್ಟದಲ್ಲಿ ಅರಣ್ಯ ಚೆಕ್‌ಪೋಸ್ಟ್ ಇದ್ದರೂ, ಯಾವುದೇ ಪ್ರಯೋಜನವಿಲ್ಲ ಎಂಬAತಾಗಿದೆ.

ಮೇಲಾಧಿಕಾರಿಗಳು ಕೊಡಲೇ ಕೆರಟ್ಟಿ ಮತ್ತು ಉರ್‌ಟ್ಟಿ ಅರಣ್ಯಕ್ಕೆ ಖುದ್ದು ಭೇಟಿ ನೀಡಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.