ಮಡಿಕೇರಿ, ಜ. ೨೬: ಭಾರತ ಸರಕಾರ, ನೆಹರೂ ಯುವ ಕೇಂದ್ರ, ಮಡಿಕೇರಿ, ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಕಲ್ಲುಬಾಣೆ ಇದರ ಆಶ್ರಯದಲ್ಲಿ ರಾಷ್ಟಿçÃಯ ಯುವ ಸಪ್ತಾಹದ ಅಂಗವಾಗಿ ಸಮಾಜಕ್ಕಾಗಿ ಯುವ ಜನರು ಕಾರ್ಯಕ್ರಮ ನಡೆಸಲಾಯಿತು. ವಿಘ್ನೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಬಡಕಡ ರೇಷ್ಮಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಪ್ರಾಧ್ಯಾಪಕರಾದ ಎ.ಎಂ. ಜಯಲಕ್ಷಿö್ಮ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಪ್ರಗತಿ ಶಾಲಾ ಮುಖ್ಯ ಶಿಕ್ಷಕಿ ಪ್ರತೀಮ ಪ್ರಶಾಂತ್, ಬೆಂಗಳೂರು ನಿಮ್ಹಾನ್ಸ್ ಸಂಸ್ಥೆಯ ನಿವೃತ್ತ ಸ್ಟಾಫ್ ನರ್ಸ್ ಶಾಲಿ ಹಾಗೂ ಅನುಪಮ ಉಪಸ್ಥಿತರಿದ್ದರು.