ಮಡಿಕೇರಿ, ಜ. ೨೬: ಗುರುಕುಲ ಕಲಾ ಪ್ರತಿಷ್ಠಾನ ತುಮಕೂರು ಇದರ ವತಿಯಿಂದ ಸ್ಫೂರ್ತಿಧಾಮ ಅಂಬೇಡ್ಕರ್ ಸ್ಮಾರಕ ಭವನದ ಸಭಾಗಣದಲ್ಲಿ ರಾಜ್ಯಾಧ್ಯಕ್ಷ ಹುಲಿಯೂರು ದುರ್ಗ ಲಕ್ಷಿö್ಮÃನಾರಾಯಣ ಹಾಗೂ ರಾಜ್ಯ ಕಾರ್ಯದರ್ಶಿ ಡಾ. ಶಿವರಾಜ್ ಗೌಡ ಇವರುಗಳ ಸಾರಥ್ಯ ಹಾಗೂ ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನೆರವೇರಿದ ದ್ವಿತೀಯ ಸಮ್ಮೇಳನದಲ್ಲಿ ಗುರುಕುಲ ಕೊಡಗು ಆನ್ಲೈನ್ ಘಟಕದ ಜಿಲ್ಲಾಧ್ಯಕ್ಷೆ ಶೋಭಾರಕ್ಷಿತ್ ಅವರಿಗೆ ‘ಗುರುಕುಲ ಕೀರ್ತಿ ಕಳಸ’ ರಾಜ್ಯಪ್ರಶಸ್ತಿಯನ್ನು ಪ್ರ್ರದಾನ ಮಾಡಿ ಗೌರವಿಸಲಾಯಿತು. ಸಮ್ಮೇಳನದಲ್ಲಿ ಗುರುಕುಲ ಕೊಡಗು ಘಟಕದ ಉಪಾಧ್ಯಕ್ಷೆ ಪುಷ್ಪ ಮನೋಹರ್, ಸದಸ್ಯರುಗಳಾದ ಬಿಟ್ಟೀರ ಚೋಂದಮ್ಮ ಶಂಭು, ವೇದಾವತಿ ಭಟ್, ಲತಾ ಕೆ.ಎಸ್. ಹೆಗಡೆ ಮುಂತಾದವರು ಭಾಗವಹಿಸಿದ್ದರು.