ಗೋಣಿಕೊಪ್ಪ ವರದಿ, ಜ. ೨೬: ವೀರಾಜಪೇಟೆ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಂಘಟನಾ ವೇದಿಕೆ ವತಿಯಿಂದ ಧನುಗಾಲ ಗ್ರಾಮದ ಮುರುಡೇಶ್ವರ ದೇವಸ್ಥಾನದಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಯ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಸೋಮವಾರ ಆಚರಿಸಲಾಯಿತು. ವೇದಿಕೆಯ ಸದಸ್ಯರುಗಳು ಪಾಲ್ಗೊಂಡು ಶಾಂತಿ ಕೋರಿದರು.

ದೇವಸ್ಥಾನಕ್ಕೆ ೫೦ ಕುರ್ಚಿಗಳನ್ನು ಈ ಸಂದರ್ಭ ವಿತರಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ವಿರೂಪಾಕ್ಷ, ವೇದಿಕೆ ಅಧ್ಯಕ್ಷೆ ಜೆ.ಜಿ. ಅರ್ಪಿತಾ, ಪ್ರಧಾನ ಕಾರ್ಯದರ್ಶಿ ಜೆ.ಎನ್. ಶೋಭಾರಾಣಿ ಇದ್ದರು.