ಲೋಕೋಪಯೋಗಿ ಇಲಾಖೆಯ ಸೋಮವಾರಪೇಟೆ ಉಪ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ಮಹೇಂದ್ರಕುಮಾರ್ ಅವರು ಅನಾರೋಗ್ಯದಿಂದ ತಾ. ೨೭ರಂದು ನಿಧನರಾದರು.
ಹಾರಂಗಿ ನೀರಾವರಿ ನಿಗಮದಲ್ಲಿ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ಮಹೇಂದ್ರಕುಮಾರ್ ಅವರು ಕಳೆದ ೭ ತಿಂಗಳ ಹಿಂದಷ್ಟೇ ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಯಾಗಿದ್ದು, ಸಹಾಯಕ ಕಾರ್ಯಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸಮುದಾಯ ಸಂಘಟನಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೂಪಾ ಸೇರಿದಂತೆ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೮ರಂದು (ಇಂದು) ಕುಶಾಲನಗರ ಸಮೀಪದ ಬಸವನಹಳ್ಳಿಯ ಸ್ವಗೃಹದಲ್ಲಿ ನೆರವೇರಲಿದೆ.