ಮಡಿಕೇರಿ, ಜ. ೨೫: ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಅಂರ‍್ರಾಷ್ಟಿçÃಯ ಗ್ರಾ÷್ಯಂಡ್ ಗ್ಲೋರಿ ಫಿಲ್ಮ್ ಪ್ರಶಸ್ತಿ ಲಭಿಸಿದೆ. ಮಣಿಪುರದಲ್ಲಿ ನಡೆದ ಐಜಿಜಿಎಫ್‌ಎ ಇಂಪಾಲಾ ಇಂಡಿಯಾ ಸಿನಿಮೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಪ್ರಾಯೋಗಿಕ ಚಿತ್ರ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ಚಿತ್ರದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಸಿನಿಮೋತ್ಸವದಲ್ಲಿ ೧೧೪೫ ಚಿತ್ರಗಳು ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರಗಳಲ್ಲಿ “ನಾಡ ಪೆದ ಆಶಾ” ಕೂಡ ಒಂದು.