ನಾಪೋಕ್ಲು, ಜ. ೨೪: ಕಂಪ್ಯೂಟರೀಕರಣ ವ್ಯವಸ್ಥೆ ಯೊಂದಿಗೆ ರಾಷ್ಟಿçÃಕೃತ ಬ್ಯಾಂಕ್‌ಗಳಿಗೆ ಸರಿಸಮವಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳವಣಿಗೆ ಸಾಧಿಸಿರುವುದು ಅದರ ಆಡಳಿತ ಮಂಡಳಿಯವರ ಬದ್ಧತೆಗೆ ಸಾಕ್ಷಿ ಯಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್ನಲ್ಲಿ ಸೊಸೈಟಿಯ ೧೮ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈ ಟಿಯು ತನ್ನ ೨೫ನೇ ವರ್ಷದಲ್ಲಿ ೧೮ಕ್ಕೂ ಅಧಿಕ ಶಾಖೆಗಳನ್ನು ಆರಂಭಿಸಿರುವುದು ಸಂಸ್ಥೆಯ ಪ್ರಾಮಾಣಿಕ ಸೇವೆಗೆ ದೊರೆತ ಮನ್ನಣೆಯಾಗಿದ್ದು, ಬೆಳ್ಳಿ ಹಬ್ಬದ ಈ ವರ್ಷದಲ್ಲಿ ೨೫ನೇ ಶಾಖೆಯೂ ಆರಂಭವಾಗುವAತಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಂಸ್ಥೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಡಿಕೇರಿಯ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು, ಗುಣಮಟ್ಟದ ಸೇವೆಯೇ ಬ್ಯಾಂಕ್‌ಗಳ ಬೆಳವಣಿಗೆಗೆ ಅಡಿಗಲ್ಲು ಎಂದು ವಿಶ್ಲೇಷಿಸಿದರು. ಕೇವಲ ರೂ. ೬ ಲಕ್ಷ ಬಂಡವಾಳದಲ್ಲಿ ಆರಂಭಗೊAಡ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ೨೫ ವರ್ಷಗಳಲ್ಲಿ ೧೮ ಶಾಖೆಗಳನ್ನು ಹೊಂದುತ್ತಿರುವುದು ಸಣ್ಣ ಸಾಧನೆಯಲ್ಲ. ಆಡಳಿತ ಮಂಡಳಿಯ ಬದ್ಧತೆ, ಸದಸ್ಯರ ಪ್ರೋತ್ಸಾಹದಿಂದ ಮಾತ್ರ ಇದು ಸಾಧ್ಯವಾಗಿದ್ದು, ಸಂಸ್ಥೆಯು ಹೊರ ಜಿಲ್ಲೆಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರುವುದು ಸಂಸ್ಥೆಯ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಬ್ಯಾಂಕ್‌ನ ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರಲ್ಲದೆ, ೨೫ನೇ ವರ್ಷದಲ್ಲಿ ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸ ಲಾಗಿದೆ ಎಂದು ಘೋಷಿಸಿದರು.

ಗುಣಮಟ್ಟದ ಸೇವೆಯೇ ಬ್ಯಾಂಕ್‌ಗಳ ಬೆಳವಣಿಗೆಗೆ ಅಡಿಗಲ್ಲು ಎಂದು ವಿಶ್ಲೇಷಿಸಿದರು. ಕೇವಲ ರೂ. ೬ ಲಕ್ಷ ಬಂಡವಾಳದಲ್ಲಿ ಆರಂಭಗೊAಡ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ೨೫ ವರ್ಷಗಳಲ್ಲಿ ೧೮ ಶಾಖೆಗಳನ್ನು ಹೊಂದುತ್ತಿರುವುದು ಸಣ್ಣ ಸಾಧನೆಯಲ್ಲ. ಆಡಳಿತ ಮಂಡಳಿಯ ಬದ್ಧತೆ, ಸದಸ್ಯರ ಪ್ರೋತ್ಸಾಹದಿಂದ ಮಾತ್ರ ಇದು ಸಾಧ್ಯವಾಗಿದ್ದು, ಸಂಸ್ಥೆಯು ಹೊರ ಜಿಲ್ಲೆಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರುವುದು ಸಂಸ್ಥೆಯ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಬ್ಯಾಂಕ್‌ನ ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರಲ್ಲದೆ, ೨೫ನೇ ವರ್ಷದಲ್ಲಿ ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸ ಲಾಗಿದೆ ಎಂದು ಘೋಷಿಸಿದರು.

ಮಾತನಾಡಿದರು.

ಈ ಸಂದರ್ಭ ಅತಿಥಿಗಳಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್, ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಹೇಮಚಂದ್ರ ಬಿ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ಬ್ಯಾಂಕಿನ ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು.

ರವಿ ಓಂಕಾರ್ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ನಿರೂಪಿಸಿ, ನಿರ್ದೇಶಕ ಪಿ.ಎಸ್. ಗಂಗಾಧರ ವಂದಿಸಿದರು.