ವೀರಾಜಪೇಟೆ, ಜ. ೨೪: ಸಾಲ ಬಾಧೆ, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ಬೇಟೋಳಿ ಗ್ರಾಮದ ನಿವಾಸಿ ಪಿ.ಕೆ. ನಾಣಿಯಪ್ಪ ಅವರ ಪುತ್ರ ಪಿ.ಎನ್. ಸತೀಶ್ (೪೭) ನೇಣಿಗೆ ಶರಣಾದ ವ್ಯಕ್ತಿ.
ವೀರಾಜಪೇಟೆ ನಗರದ ಗೌರಿಕೆರೆ ಸನಿಹದ ಖಾಸಗಿ ಕಟ್ಟಡದ ಮಳಿಗೆಯೊಂದರಲ್ಲಿ ವಾಹನಗಳ ವಿಮೆ ಮಾಡುವ ಕಚೇರಿಯನ್ನು ನಡೆಸುತಿದ್ದ ಸತೀಶ್, ಮನೆಯ ಹಿಂಬದಿಯ ಸ್ಟೋರ್ ರೂಂನಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಮೃತನ ತಂದೆ ನಾಣಿಯಪ್ಪ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.