ಸಿದ್ದಾಪುರ, ಜ. ೨೫: ವಸತಿ ಯೋಜನೆಯಡಿಯಲ್ಲಿ ಫಲಾನುಭವಿ ಒಬ್ಬರ ಮನೆಗೆ ಜಿ.ಪಿ.ಎಸ್ ಚಿತ್ರ ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ನಿವಾಸಿಗಳಿಬ್ಬರು ಪಿ.ಡಿ.ಓ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಈರ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ನೆಲ್ಯಹುದಿಕೇರಿ ಗ್ರಾ.ಪಂ. ಪಿ.ಡಿ.ಓ ಹೆಚ್.ಎಸ್. ಅನಿಲ್ ಕುಮಾರ್ ತಾ. ೨೪ ರಂದು ಸಂಜೆ ನೆಲ್ಯಹುದಿಕೇರಿ ಗ್ರಾಮದ ೩ನೇ ವಾರ್ಡ್ನ ನಿವಾಸಿಯೊಬ್ಬರ ಮನೆಗೆ ಜಿ.ಪಿ.ಎಸ್ ಮಾಡಿ ಪಂಚಾಯಿತಿ ಕಚೇರಿಗೆ ಬರುತ್ತಿದ್ದ ಸಂದರ್ಭದಲ್ಲಿ ನೆಲ್ಯಹುದಿಕೇರಿ ಗ್ರಾಮದ ನಿವಾಸಿಗಳಾದ ಶಿವಕುಮಾರ್ ಹಾಗೂ ಪದ್ಮನಾಭ ಎಂಬವರು ಪಿ.ಡಿ.ಓ ಅನಿಲ್ ಕುಮಾರ್ ಅವರನ್ನು ತಡೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಜೊತೆಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಪಿ.ಡಿ.ಓ ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಪೊಲೀಸರು ಶಿವಕುಮಾರ್ ಹಾಗೂ ಪದ್ಮನಾಭ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಈರ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.