ವರದಿ : ರಫೀಕ್ ತೂಚಮಕೇರಿ

ಪೊನ್ನಂಪೇಟೆ, ಜ. ೨೪: ಬೆಂಗಳೂರು ನೋಂದಣಿಯ ಹಳದಿ ಬೋರ್ಡ್ ಟೊಯೋಟಾ ಎಟಿಯೋಸ್ ಕಾರೊಂದು ಸೋಮವಾರದಂದು ಗೋಣಿಕೊಪ್ಪಲಿ ನಲ್ಲಿ ಮಧ್ಯಾಹ್ನದಿಂದಲೇ ಅತ್ತಿಂದಿತ್ತ ಸಂಚರಿಸುತ್ತದೆ. ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿದ ಈ ಕಾರು ವಾತಾವರಣವನ್ನೆಲ್ಲ ಸೂಕ್ಷö್ಮವಾಗಿ ಗಮನಿಸಿ ಕೊನೆಗೆ ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆಯಲ್ಲಿರುವ ವ್ಯಾಪಾರ ಕೇಂದ್ರವೊAದರ ಮುಂದೆ ಬಂದು ನಿಲ್ಲುತ್ತದೆ. ಕಾರು ನಿಂತ ಕೂಡಲೇ ಹೆಚ್ಚು ವಯಸ್ಸಾದಂತೆ ಕಂಡು ಬರುವ ವ್ಯಕ್ತಿಯೊಬ್ಬರು ಇಳಿದು ನೇರವಾಗಿ ವ್ಯಾಪಾರ ಕೇಂದ್ರದೊಳಗೆ ನುಗ್ಗಿ, ತಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದು, ಬೆಂಗಳೂರಿನಿAದ ಇಲ್ಲಿಗೆ ದಾಳಿ ನಡೆಸಲು ಬಂದಿರುವುದಾಗಿ ಹೇಳುತ್ತಾ ತನ್ನ ಬಳಿಯಿದ್ದ ಇಲಾಖೆಯ ಗುರುತಿನ ಚೀಟಿಯನ್ನು ತೋರಿಸುತ್ತಾರೆ.

ದಾಳಿ ಆರಂಭಗೊಳ್ಳುತ್ತದೆ. ವ್ಯಾಪಾರ ಕೇಂದ್ರದ ಮಾಲೀಕನನ್ನು ಹೊರತುಪಡಿಸಿ ಉಳಿದವರು

ಯಾರೂ ಒಳಗೆ

(ಮೊದಲ ಪುಟದಿಂದ) ಇರಬಾರದೆಂದು ತಾಕಿತು ಮಾಡುತ್ತಾರೆ. ಇದರಿಂದ ಮಾಲೀಕ ತನ್ನ ಸಿಬ್ಬಂದಿಗಳನ್ನೆಲ್ಲ ಹೊರ ಕಳುಹಿಸುತ್ತಾರೆ. ಮತ್ತೊಬ್ಬ ವ್ಯಕ್ತಿ ಅಲ್ಲೇ ನಿಂತಿದ್ದನ್ನು ಗಮನಿಸಿದ ಈ ಅಧಿಕಾರಿ ಈತ ಯಾರೆಂದು ಕೇಳಿದಾಗ ಆತ ತನ್ನ ಮಗನೆಂದು ಮಾಲೀಕ ಹೇಳುತ್ತಾರೆ. ಮಗನಾದರೆ ಒಳಗಿರಲಿ ಪರವಾಗಿಲ್ಲ ಎಂದು ಹೇಳುತ್ತಾರೆ. ಒಳಗೆ ಉಳಿದ ಮಾಲೀಕನ ಮಗ ಈ ಘಟನೆ ಎಲ್ಲವನ್ನು ಅಧಿಕಾರಿಗೆ ತಿಳಿಯದಂತೆ ತನ್ನ ಮೊಬೈಲ್ ಕೆಮರಾದಲ್ಲಿ ಚಿತ್ರೀಕರಿಸುತ್ತಾನೆ. ಅಧಿಕಾರಿ ಕೇಳಿದ ದಾಖಲೆಗಳನ್ನೆಲ್ಲ ಮಾಲೀಕ ಒದಗಿಸುತ್ತಾನೆ. ವ್ಯಾಪಾರ ಕೇಂದ್ರದ ಒಳಭಾಗದ ಎಲ್ಲ ದಾಖಲೆ ಪತ್ರಗಳನ್ನೆಲ್ಲ ಜಾಲಾಡಿದ ಈ ಅಧಿಕಾರಿ ಮಾಲೀಕನ ಲೋಪಗಳನ್ನೆಲ್ಲ ಪತ್ತೆ ಹಚ್ಚಿ ರೂ. ೩,೨೮,೦೦೦ ದಂಡ ಕಟ್ಟುವಂತೆ ಸ್ಥಳದಲ್ಲೇ ನೋಟಿಸ್ ಬರೆಯುತ್ತಾರೆ.

ಇದು ಸೋಮವಾರದಂದು ಗೋಣಿಕೊಪ್ಪಲಿನಲ್ಲಿ ನಡೆದ ಸಿನಿಮಿಯ ಮಾದರಿಯ ನಕಲಿ ಐಟಿ ದಾಳಿಯ ಕಥೆಯಾಗಿದೆ. ಬೆಂಗಳೂರು ನೋಂದಣಿಯ ಕೆ.ಎ. ೦೨ ಎ.ಎಫ್. ೨೭೧೭ ಟೊಯೋಟಾ ಎಟಿಯೋಸ್ ಕಾರಿನಲ್ಲಿ ಐಟಿ ದಾಳಿಯ ಸೋಗಿನಲ್ಲಿ ಬಂದ ನಕಲಿ ಅಧಿಕಾರಿಯೊಬ್ಬ ಗೋಣಿಕೊಪ್ಪಲಿನ ವ್ಯಾಪಾರ ಕೇಂದ್ರದ ಮಾಲೀಕರೊಬ್ಬರಿಗೆ ಪಂಗನಾಮ ಹಾಕಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದು, ಬೇರೆÀಡೆಗಳಲ್ಲೂ ಈ ರೀತಿಯಾಗಿ ವ್ಯಾಪಾರಿಗಳನ್ನು ಮೋಸಗೊಳಿಸಿರುವ ಸಾಧ್ಯತೆಯಿದೆ. ದಿಢೀರ್ ನಡೆದ ಈ ನಕಲಿ ಐಟಿ ದಾಳಿಯ ನೈಜ್ಯತೆ ತಿಳಿಯದ ಮಾಲೀಕ ಕಂಗಾಲಾಗಿ ಭಾರಿ ಮೊತ್ತದ ದಂಡ ಪಾವತಿಸುವ ಬದಲು ನಕಲಿ ಅಧಿಕಾರಿಯ 'ಕೈ ಬಿಸಿ' ಮಾಡಿ ಜೇಬು ತುಂಬಿಸಿ ಕಳುಹಿಸಿ ನಂತರ ಸತ್ಯಾಂಶ ತಿಳಿದು ಪೆಚ್ಚುಮೋರೆ ಹಾಕಿಕೊಂಡಿದ್ದಾರೆ.

ಮಧ್ಯಾಹ್ನದಿAದಲೇ ಗೋಣಿಕೊಪ್ಪಲಿನಲ್ಲಿ ಸಂಚರಿಸುತ್ತಿದ್ದ ಚಾಲಕನನ್ನು ಹೊರತುಪಡಿಸಿ ಓರ್ವನಿದ್ದ ಈ ಕಾರು ಸಂಜೆ ೪ರ ವೇಳೆಗೆ ಪಾಲಿಬೆಟ್ಟ ರಸ್ತೆಯಲ್ಲಿರುವ ಈ ವ್ಯಾಪಾರ ಕೇಂದ್ರದ ಬಳಿ ಬಂದಿತ್ತು. ಐಟಿ ದಾಳಿಯ ಬಗ್ಗೆ ಪೂರ್ಣವಾದ ತಿಳುವಳಿಕೆಯಿರುವ ಈ ವ್ಯಕ್ತಿ, ನಕಲಿ ಐಟಿ ದಾಳಿ ನಡೆಸಿ ಹಣ ವಸೂಲಿ ಮಾಡಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ನಿವೃತ್ತಿಯಂಚಿನಲ್ಲಿರುವ ವೃದ್ಧನಂತಿದ್ದ ಈ ವ್ಯಕ್ತಿ ಐಟಿ ಇಲಾಖೆಯ ಅಧಿಕಾರಿಯಂತೆ ನಟಿಸಿ ಆರಂಭದಿAದ ಅಂತ್ಯದವರೆಗೂ ತಮ್ಮ ನಡೆಯಲ್ಲಿ ಅನುಮಾನ ಬಾರದಂತೆ ನೋಡಿಕೊಂಡಿದ್ದಾನೆ. ಈ ನಕಲಿ ಐಟಿ ಅಧಿಕಾರಿ ತಮಿಳು ಭಾಷೆಯಲ್ಲಿ ಮಾತನಾಡುತ್ತಾ, ತಾನು ಇಲಾಖೆಯಲ್ಲಿ ಬಹಳ ಪ್ರಾಮಾಣಿಕ. ಯಾರಿಗೂ ಅನಗತ್ಯವಾಗಿ ಕಿರುಕುಳ ನೀಡುವುದಿಲ್ಲ. ನಾನು ಎಲ್ಲಾ ವರ್ಗದ ವ್ಯಾಪಾರಿಗಳ ಮನಸ್ಥಿತಿ ಬಲ್ಲವನಾಗಿದ್ದಾನೆ ಎಂದೆಲ್ಲ ಹೇಳಿಕೊಂಡು ಮಾಲೀಕನಿಗೆ ಕಿಂಚಿತ್ತು ಸಂಶಯಬಾರದAತೆ ನಡೆದು ಕೊಂಡಿದ್ದಾನೆ. ವೃದ್ಧನಂತೆ ಕಾಣುವ ಈ ವ್ಯಕ್ತಿ ಐಟಿ ಅಧಿಕಾರಿಯೇ ಇರಬಹುದು ಎಂದು ಆರಂಭದಲ್ಲಿ ನಂಬಿದ್ದ ಮಾಲೀಕ ಆತನ ಮಾತಿಗೆ ಸ್ಪಂದಿಸಿ ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದರು.

ಆತ ದಾಖಲೆ ಪತ್ರಗಳನ್ನೆಲ್ಲ ಶೋಧಿಸಿ, ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್, ಕ್ಯಾಶ್ ಬುಕ್ ಮೊದಲಾದ ದಾಖಲೆಗಳನ್ನೆಲ್ಲ ಪರಿಶೀಲಿಸಿ ದಂಡದ ಮೊತ್ತದ ಕುರಿತು ಸ್ಥಳದಲ್ಲೇ ನೋಟೀಸು ನೀಡಿ, ಮತ್ತಷ್ಟು ಅಗತ್ಯ ದಾಖಲೆಗಳೊಂದಿಗೆ ಮುಂದಿನ ೫ ದಿನಗಳಗಾಗಿ ಬೆಂಗಳೂರಿನ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಿ ಅಲ್ಲಿಂದ ತೆರಳಿದ್ದ. ಹೊರಡುವ ಮುನ್ನ ಮುಂದಿನ ಒಂದೆರಡು ದಿನಗಳಲ್ಲಿ ಗೋಣಿಕೊಪ್ಪಲಿನಲ್ಲಿ ದೊಡ್ಡ ಪ್ರಮಾಣದ ಐಟಿ ರೈಡ್ ನಡೆಯುತ್ತದೆ. ಆದ್ದರಿಂದ ಇಂದಿನ ದಾಳಿಯ ಮಾಹಿತಿಯನ್ನು ಗೌಪ್ಯವಾಗಿರಿಸಬೇಕು. ಈ ಕುರಿತು ಎಲ್ಲಿಯೂ ಬಹಿರಂಗಪಡಿಸಬಾರದು ಎಂದು ಸೂಚಿಸುತ್ತಾನೆ. ಕೆಲವೇ ಸಮಯದ ನಂತರ ಮತ್ತೆ ಅದೇ ವ್ಯಾಪಾರ ಕೇಂದ್ರಕ್ಕೆ ಕಾರಿನಲ್ಲಿ ಬಂದ ಈ ನಕಲಿ ಅಧಿಕಾರಿ ಬೆಂಗಳೂರಿಗೆ ಬರುವುದು ಕಷ್ಟವಾಗುವುದಾದರೆ ಇಲ್ಲೇ 'ಸೆಟಲ್ಮೆಂಟ್' ಮಾಡಬಹುದು ಎಂಬ ಸುಳಿವನ್ನು ನೀಡುತ್ತಾನೆ.

ಇದೀಗ ಬಿಡುವಿಲ್ಲದ ವ್ಯಾಪಾರದ ಸಮಯದಲ್ಲಿ ಬೆಂಗಳೂರಿಗೆ ತೆರಳುವುದು ಕಷ್ಟ ಎಂದು ಅರಿತ ಮಾಲೀಕ, ನಕಲಿ ಅಧಿಕಾರಿಯ ಮಾತಿಗೆ ಮರುಳಾಗಿ ಸೆಟಲ್ಮೆಂಟಿಗೆ ತಯಾರಾಗುತ್ತಾರೆ. ಇದೀಗ ಕೈಯಲ್ಲಿ ತನ್ನ ಬಳಿ ಹಣವಿಲ್ಲ ಸ್ವಲ್ಪ ಸಮಯ ನೀಡಿದರೆ ಹಣ ಹೊಂದಿಸಿಕೊAಡು ನೀಡುತ್ತೇನೆ ಎಂದು ಮಾಲೀಕ ನಕಲಿ ಅಧಿಕಾರಿಗೆ ಹೇಳಿದಾಗ ಅದಕ್ಕೆ ಒಪ್ಪಿಗೆ ಸೂಚಿಸಿದ ಆತ ಹಣಕ್ಕಾಗಿ ಅಂದಾಜು ೧ ಗಂಟೆಗಳ ಕಾಲ ಕಾಯುತ್ತಾನೆ. ಈ ಮಧ್ಯೆ ಹಣ ಹೊಂದಿಸಿದ ಮಾಲೀಕ ಅದನ್ನು ನಕಲಿ ಅಧಿಕಾರಿಗೆ ನೀಡಿದ ಕೂಡಲೇ, ಮೊದಲು ನೀಡಿದ ಅದೇ ನೋಟೀಸಿನಲ್ಲಿ ಯಾವುದೇ ದಂಡ ಪಾವತಿಸುವುದು ಅಗತ್ಯವಿಲ್ಲ ಎಂದು ಷರಾ ಬರೆದು ಸಂಜೆ ೬ ಗಂಟೆ ಸಮಯದಲ್ಲಿ ಕಾರು ಹತ್ತಿ ಪರಾರಿಯಾಗುತ್ತಾನೆ.

ಘಟನೆ ನಡೆದು ಕೆಲ ಹೊತ್ತಿನ ನಂತರ ಮಾಲೀಕ ಈ ವಿಚಾರವನ್ನು ತಮ್ಮ ಆಪ್ತರೊಂದಿಗೆ ಹಂಚಿಕೊAಡಾಗ ಐಟಿ ದಾಳಿಯ ನೈಜತೆ ಬಗ್ಗೆ ಸಂಶಯ ಮೂಡುತ್ತದೆ. ಮತ್ತೆ ಈ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲದಿಂದ ಬೆಂಗಳೂರು ಐಟಿ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಗ ಇದು ಐಟಿ ಇಲಾಖೆಯ ದಾಳಿಯಲ್ಲ ಎಂಬುದು ಮನವರಿಕೆ ಯಾಗುತ್ತದೆ. ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಡೆದ ಈ ಸಿನಿಮಯ ಘಟನೆ ಆಶ್ಚರ್ಯ ಮೂಡಿಸಿದ್ದು, ಈ ಮೋಸದ ಕೃತ್ಯದ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ನಕಲಿ ದಾಳಿ ಸಂದರ್ಭದಲ್ಲಿ ಈ ಅಧಿಕಾರಿ ತನ್ನನ್ನು ಆದಾಯ ತೆರಿಗೆ ಇಲಾಖೆಯ ಶ್ರೇಣಿ IIIರ ಅಧಿಕಾರಿ ಕೆ. ಚಂದ್ರಶೇಖರನ್ ಎಂದು ಹೇಳಿಕೊಂಡು ಅದೇ ಹೆಸರಿನ ಗುರುತಿನ ಚೀಟಿಯನ್ನು ತೋರಿಸಿ ದ್ದಾನೆ. ಜೊತೆಗೆ ಭಾರತ ಸರಕಾರದ ಆದಾಯ ತೆರಿಗೆ ಇಲಾಖೆ ಲೆಟರ್ ಹೆಡ್ ತಂದಿದ್ದ ಈ ನಕಲಿ ಅಧಿಕಾರಿ ತನ್ನ ಸಹಿ ಮತ್ತು ಷರಾವನ್ನೆಲ್ಲ ಹಸಿರು ಬಣ್ಣದ ಇಂಕ್ ಮೂಲಕವೇ ಬರೆದು ಅನುಮಾನ ಬಾರದಂತೆ ನಟಿಸುತ್ತಾನೆೆ. ಲೆಟರ್ ಹೆಡ್‌ನಲ್ಲಿ ಬೆಂಗಳೂರು ಆದಾಯ ತೆರಿಗೆ ಇಲಾಖೆಯ ನಿರ್ದೇಶನಾಲ ಯದ ವಿಳಾಸವಿದ್ದರೂ ಚೆನ್ನೆöÊನ ದೂರವಾಣಿ ಸಂಖ್ಯೆ ನೀಡಲಾಗಿದೆ. ದಾಳಿ ಸಂದರ್ಭದಲ್ಲಿ ಮಾಲೀಕನಿಗೆ ನೀಡಿದ್ದ ನಕಲಿ ಅಧಿಕಾರಿಯ ಮೊಬೈಲ್ ಸಂಖ್ಯೆಗೆ ನಂತರ ಕರೆ ಮಾಡಿದರೆ ಆ ಸಂಖ್ಯೆ ಸದ್ಯಕ್ಕೆ ಚಾಲ್ತಿಯಲ್ಲಿ ಇಲ್ಲ ಎಂಬ ಉತ್ತರ ದೊರೆಯುತ್ತಿದೆ. ಟ್ರೂಕಾಲರ್‌ನಲ್ಲಿ ಈ ಸಂಖ್ಯೆಯನ್ನು ಶೋಧಿಸಿದಾಗ 'ಎಲ್‌ಐಸಿ ಸಾಮಿ' ಎಂಬ ಹೆಸರು ತೋರಿಸುತ್ತಿದೆ. ಐಟಿ ದಾಳಿಯಿಂದ ಜೋಬು ತುಂಬಿಸಿ ಕೊಂಡು ಪರಾರಿಯಾದ ಇಳಿವಯಸಿನ ನಕಲಿ ಅಧಿಕಾರಿಯ ಚಾಣಾಕ್ಷತನದ ಬಗ್ಗೆ ಪಟ್ಟಣದ ವ್ಯಾಪಾರಿಗಳ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.