ಸೋಮವಾರಪೇಟೆ, ಜ. ೨೪: ಮಡಿಕೇರಿ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಗೆಲ್ಲಲು ಭಾರೀ ತಾಲೀಮು ನಡೆಸುತ್ತಿರುವ ಜೆಡಿಎಸ್ ಪಕ್ಷವು ಭರ್ಜರಿ ಸಿದ್ಧತೆಯಲ್ಲಿದೆ. ಪಕ್ಷಕ್ಕೆ ಹೆಚ್ಚಿನ ಬಲ ಇರುವ ಸೋಮವಾರಪೇಟೆ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಪಕ್ಷದ ನಾಯಕ ಪ್ರಜ್ವಲ್ ರೇವಣ್ಣ ಅವರು ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದು ಒಂದೆಡೆಯಾದರೆ, ಪಕ್ಷದ ಆಂತರಿಕ ವಿಚಾರವನ್ನು ಮಾಧ್ಯಮದೆದುರು ಬಹಿರಂಗಪಡಿಸಿದ ತಮ್ಮದೇ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಗರಂ ಆಗಿದ್ದಾರೆ. ಇದರೊಂದಿಗೆ ಜೆಡಿಎಸ್ನಲ್ಲಿ ಹಲವು ಚುನಾವಣೆ ಮಾಧ್ಯಮದೆದುರು ಬಹಿರಂಗಪಡಿಸಿದ ತಮ್ಮದೇ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಗರಂ ಆಗಿದ್ದಾರೆ. ಇದರೊಂದಿಗೆ ಜೆಡಿಎಸ್ನಲ್ಲಿ ಹಲವು ಚುನಾವಣೆ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ಸಭೆಗೆ ಆಗಮಿಸಿದ
(ಮೊದಲ ಪುಟದಿಂದ) ಜೆಡಿಎಸ್ ಮುಖಂಡ, ಹಾಸನದ ಸಂಸದರೂ ಆಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಾರ್ಯಕರ್ತರು ಸಂಭ್ರಮದಿAದ ಬರಮಾಡಿಕೊಂಡರು. ಪಟ್ಟಣದಲ್ಲಿ ಪಟಾಕಿ ಸಿಡಿಸಿ ಬೈಕ್ ಜಾಥಾ ಮೂಲಕ ತೆರಳಿದ ಕಾರ್ಯಕರ್ತರು, ಸಭೆಯ ಆರಂಭದಿAದ ಮುಕ್ತಾಯದವರೆಗೂ ಉತ್ಸಾಹದಲ್ಲಿದ್ದರು.
ಸಭೆಗೂ ಮುನ್ನ ಪ್ರಜ್ವಲ್ ಅವರು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಅವರು ಇಂದಿನ ಸಭೆ ಹಾಗೂ ನಾಪಂಡ ಮುತ್ತಪ್ಪ ಅವರಿಗೆ ನೋಟೀಸ್ ನೀಡಿರುವ ವಿಚಾರಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೆ.ಎಂ.ಬಿ. ಗಣೇಶ್ ವಿರುದ್ಧ ಕಿಡಿಕಾರಿದರು.
‘ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ನೋಟೀಸ್ ನೀಡಲು ಜಿಲ್ಲಾಧ್ಯಕ್ಷರಿಗೆ ಅಧಿಕಾರ ಇಲ್ಲ. ಪಕ್ಷದ ಮುಖಂಡರು ನಾಪಂಡ ಮುತ್ತಪ್ಪ, ಹೆಚ್.ಆರ್. ಸುರೇಶ್ ಸೇರಿದಂತೆ ಇತರ ಎಲ್ಲಾ ನಾಯಕರುಗಳಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ. ಅಭ್ಯರ್ಥಿ ಪರವಾಗಿ ಯಾವುದೇ ಪ್ರಚಾರ ನಡೆಸುತ್ತಿಲ್ಲ. ಈ ನಡುವೆ ಜಿಲ್ಲಾಧ್ಯಕ್ಷರು ನೋಟಿಸ್ ಕೊಟ್ಟಿರೋದಕ್ಕೆ ಅರ್ಥವೇ ಇಲ್ಲ’ ಎಂದರು.
‘ನಾವು ಕರೆದಿರೋದು ಕಾರ್ಯಕರ್ತರ ಸಭೆ; ಅಭ್ಯರ್ಥಿ ಘೋಷಣೆಯ ಸಭೆ ಅಲ್ಲ. ಅಷ್ಟಕ್ಕೂ ಪಕ್ಷದ ನಾಯಕರಿಗೆ ನೋಟೀಸ್ ನೀಡುವ ಅಧಿಕಾರ ಜಿಲ್ಲಾಧ್ಯಕ್ಷರಿಗೆ ಇಲ್ಲ. ರಾಜ್ಯಾಧ್ಯಕ್ಷ ಇಬ್ರಾಹಿಂ ಅವರಿಗೆ ಮಾಹಿತಿ ನೀಡಿ ರಾಜ್ಯಾಧ್ಯಕ್ಷರು ನೋಟೀಸ್ ನೀಡಬಹುದು. ಜಿಲ್ಲಾಧ್ಯಕ್ಷರು ತಮ್ಮ ಪರಿಮಿತಿ ಅರಿತು ಕೆಲಸ ಮಾಡಬೇಕು. ಈ ಗೊಂದಲದ ಬಗ್ಗೆ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಅವರೊಂದಿಗೆ ಮಾತನಾಡಿದ್ದೇನೆ. ಗಣೇಶ್ ಅವರನ್ನು ಕರೆದು ಮಾತನಾಡುತ್ತೇವೆ. ಭಿನ್ನಾಭಿಪ್ರಾಯ ಗಳನ್ನು ಬಗೆಹರಿಸುತ್ತೇವೆ’ ಎಂದರು.
ನಾನೊಬ್ಬ ಸಂಸದನಾಗಿ ಕಾರ್ಯಕರ್ತರ ಸಭೆ ಕರೆಯಲು ಹೇಳಿದ್ದೇನೆ. ಕಾರ್ಯಕರ್ತರ ಸಭೆಯನ್ನು ಅಸಿಂಧು ಎನ್ನಲು ಅವರು ಯಾರು? ಸ್ಥಳೀಯ ಮುಖಂಡರು ಮಾಹಿತಿ ನೀಡಿದ್ದಾರೆ. ಗೊಂದಲ ಸೃಷ್ಟಿಸುವ ಕೆಲಸ ಆಗಬಾರದು. ಗಣೇಶ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ನಾಯಕರುಗಳ ಜೊತೆ ಚರ್ಚೆ ನಡೆಸಬೇಕು. ಇದನ್ನು ಬಿಟ್ಟು ಮಾಧ್ಯಮಗಳ ಎದುರು ಹೇಳಿಕೆ ನೀಡುವುದು ಸರಿಯಲ್ಲ ಎಂದು ಚಾಟಿ ಬೀಸಿದರು.
ಕೊಡಗಿನ ಎರಡೂ ವಿಧಾನ ಸಭಾ ಕ್ಷೇತ್ರಗಳಿಗೆ ಈವರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಅಂತಿಮ ಪಟ್ಟಿಯನ್ನು ರಾಜ್ಯ ನಾಯಕರು ಬಿಡುಗಡೆ ಮಾಡಲಿದ್ದಾರೆ. ಪಕ್ಷದೊಳಗಿನ ಸಣ್ಣಪುಟ್ಟ ಗೊಂದಲಗಳಿದ್ದರೆ ವರಿಷ್ಠರ ಗಮನಕ್ಕೆ ತರಬೇಕು. ಅಸಮಾಧಾನವಿದ್ದರೆ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಿ; ಇದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಯತ್ನ ಸರಿಯಲ್ಲ ಎಂದ ಪ್ರಜ್ವಲ್ ಅವರು, ಪಕ್ಷದ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಎಲ್ಲವೂ ಸರಿಯಾಗಲಿದೆ ಎಂದರು.
ಜೀವಿಜಯ ವಿರುದ್ಧ ಟೀಕೆ: ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರಾಗಿ ಗುರುತಿಸಿಕೊಂಡು ಎಲ್ಲಾ ಸಹಾಯವನ್ನು ಪಡೆದ ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರು ಹಿರಿಯರು; ಅವರ ಬಗ್ಗೆ ನಾನು ಟೀಕೆ ಮಾಡಬಾರದು ಎನ್ನುತ್ತಲೇ ಜೀವಿಜಯ ಅವರ ಕಾಲೆಳೆದ ಪ್ರಜ್ವಲ್ ರೇವಣ್ಣ, ದೇವೇಗೌಡರನ್ನು ನಂಬಿರುವ ಗಟ್ಟಿ ಕಾರ್ಯಕರ್ತರು ಇಂದಿಗೂ ಜೆಡಿಎಸ್ನಲ್ಲಿದ್ದಾರೆ. ಜೀವಿಜಯ ಅವರೊಂದಿಗೆ ನಮ್ಮ ನಾಯಕರಾರೂ ಹೋಗಿಲ್ಲ. ಬಸ್ನ ಡ್ರೆöÊವರ್ ಮಾತ್ರ ಹೋಗಿದ್ದಾರೆ. ಆದರೆ ಪ್ರಯಾಣಿಕರೆಲ್ಲರೂ ಜೆಡಿಎಸ್ನೊಂದಿಗೆ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಜೀವಿಜಯ ಅವರು ಇಂದಿಗೂ ಜೆಡಿಎಸ್ನಲ್ಲಿದ್ದರೆ ಸ್ವತಃ ದೇವೇಗೌಡರೇ ಮನೆಗೆ ತೆರಳಿ ಬಿ. ಫಾರಂ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷ ಸೇರಿರುವ ಅವರು ಬಿ.ಫಾರಂಗಾಗಿ ಹತ್ತಾರು ಮನೆಗಳ ಬಾಗಿಲು ಹತ್ತಿದರೂ ಟಿಕೇಟ್ ಸಿಗುತ್ತಿಲ್ಲ. ಜೀವಿಜಯ ಅವರು ಪಕ್ಷ ತೊರೆದಾಗ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಜೆಡಿಎಸ್ ಕಥೆ ಮುಗಿದೇ ಹೋಯ್ತು ಎಂದುಕೊAಡಿದ್ದರು. ಆದರೆ ಜೆಡಿಎಸ್ ಅನಾಥವಾಗಿಲ್ಲ; ಪಕ್ಷ ತೊರೆದ ಜೀವಿಜಯ ಅವರೇ ಅನಾಥರಾಗಿದ್ದಾರೆ ಎಂದು ಕುಹಕವಾಡಿದರು.
ಜೀವಿಜಯ ಅವರಿಗೆ ದೇವೇಗೌಡ ಹಾಗೂ ರೇವಣ್ಣ ಅವರು ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೂ ಪಕ್ಷ ತೊರೆದಿದ್ದಾರೆ. ನಮ್ಮ ಪಕ್ಷದಲ್ಲಿ ನಾಯಕರ ಸಂಖ್ಯೆ ಕಡಿಮೆ ಇದೆ. ಆದರೆ ಪ್ರತಿಯೋರ್ವ ಕಾರ್ಯಕರ್ತನೂ ಜೆಡಿಎಸ್ನಲ್ಲಿ ನಾಯಕನಾಗಿದ್ದಾನೆ. ನದಿ ನೀರು ಹರಿಯುವುದು ನಿಲ್ಲುವುದಿಲ್ಲ. ಹಳೆ ನೀರು ಹೋದಂತೆ ಹೊಸ ನೀರು ಬರುತ್ತದೆ ಎಂದು ಜೀವಿಜಯ ಅವರು ಪಕ್ಷ ತೊರೆದ ಬಗ್ಗೆ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.