ಕುಶಾಲನಗರ, ಜ. ೨೫: ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರ ಸೀಗೆಹೊಸೂರು, ಮಾವಿನಹಳ್ಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದು, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವಂತೆ ರೈತರು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸಹಾಯಕ ಸಂರಕ್ಷಣಾ ಅಧಿಕಾರಿ ಗೋಪಾಲ್, ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಹುದುಗೂರು ವಲಯ ಅರಣ್ಯ ಅಧಿಕಾರಿ ಮನು ಸೇರಿದಂತೆ ಗ್ರಾಮಸ್ಥರು ಕಾಡಾನೆಗಳಿಂದ ಹಾನಿಯಾದ ವಿವಿಧ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರ ಅರ್ಜಿಗಳಿಗೆ ಅನುಗುಣವಾಗಿ ಪರಿಹಾರವನ್ನು ನೀಡುವುದರ ಜೊತೆಗೆ ಬೆಂಡೆಬೆಟ್ಟ ಮೀಸಲು ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸಮೀಪದ ದೊಡ್ಡ ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಲು ಸಂಬAಧಿಸಿದ ವಿಭಾಗಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭ ಹುದುಗೂರು ಗ್ರಾಮದ ಪ್ರಮುಖರಾದ ಉತ್ತಪ್ಪ, ರಘು, ಕುಶಾಲಪ್ಪ, ಜರ್ನಾಧನ್, ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ ಸೇರಿದಂತೆ ಗ್ರಾಮಸ್ಥರು, ರೈತ ಹಿತರಕ್ಷಣಾ ಸಮಿತಿಯವರು, ಸಾರ್ವಜನಿಕರು ಹಾರಂಗಿ ನದಿಯನ್ನು ದಾಟಿಕೊಂಡು ಬರುವ ಕಾಡಾನೆಗಳ ಹಾವಳಿ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.