ಗೋಣಿಕೊಪ್ಪ ವರದಿ, ಜ. ೨೩: ಕೊಡಗು ದೈವಗಳ ಮೂಲ ಸ್ಥಾನ ಬೈತೂರು ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಪುಗ್ಗೇರ ಕುಟುಂಬದಿAದ ಅಕ್ಕಿ ಅಳ್ಪೊ ಶಾಸ್ತçದ ಮೂಲಕ ಧಾರ್ಮಿಕ ವಿಧಿ-ವಿಧಾನವನ್ನು ನಡೆಸಲಾಯಿತು. ಎತ್ತ್ ಪೋರಾಟದ ಮೂಲಕ ದೇವಸ್ಥಾನಕ್ಕೆ ೩ ಸುತ್ತು ಪ್ರದಕ್ಷಿಣೆ ಹಾಕÀಲಾಯಿತು. ನಂತರ ಅನ್ನದಾನಕ್ಕೆ ಬೇಕಾಗುವ ಅಕ್ಕಿಯನ್ನು ಅಳೆದು ನೀಡುವ ಅಕ್ಕಿ ಅಳ್ಪೊ ಕಾರ್ಯ ನಡೆಸಲಾಯಿತು. ತಕ್ಕರಾದ ಪಿ. ಪೊನ್ನಪ್ಪ, ಪುಗ್ಗೇರ ಕುಟುಂಬಸ್ಥರು ಭಾಗಿಯಾದರು. ತಾ. ೨೨ ರಂದು ಎಟ್ಟೂಟ್ ಆಚರಣೆ ನಡೆಯಿತು. ತಾ. ೨೫ ರಂದು ದೊಡ್ಡ ಹಬ್ಬ ನಡೆಯಲಿದೆ.