ಕರಡ, ಜ. ೨೨: ಚೆಯ್ಯಂಡಾಣೆ ಕ್ಲಸ್ಟರ್ನ ಕಲಿಕಾ ಹಬ್ಬದ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಮಾಪ್ರಭು ಆಗಮಿಸಿದ್ದರು. ಪಾರಾಣೆ ಶಾಲೆಯ ಶಿಕ್ಷಕರಾದ ಕೆ.ಬಿ. ಕಿಶೋರ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಚೆಯ್ಯಂಡಾಣೆ ಶಾಲೆಯ ಶಿಕ್ಷಕಿ ಜಯಪ್ರದ, ಎಡಪಾಲ ಶಾಲೆಯ ಶಿಕ್ಷಕಿ ಕೆ.ಯು. ಮರಿಯಾಂಬಿ, ಕಡಂಗ ಶಾಲೆಯ ಶಿಕ್ಷಕಿ ಎ.ಟಿ. ಬಬಿತ ಹಾಗೂ ಕರಡ ಶಾಲೆಯ ಡಿ.ಕೆ. ಲೀಲಾವತಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಶಾಲೆಯ ಮುಖ್ಯ ಶಿಕ್ಷಕರು ಸಿಆರ್ಪಿ ಉಷಾ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಮಾಪ್ರಭು, ಕರಡ ಶಾಲೆಯ ಮುಖ್ಯ ಶಿಕ್ಷಕಿ ಡಿ.ಕೆ. ಲೀಲಾವತಿ ಹಾಗೂ ಸಹಶಿಕ್ಷಕಿ ದಮಯಂತಿ ಬಿ.ಎ. ಇವರನ್ನು ಸನ್ಮಾನಿಸಿದರು. ಚೆಯ್ಯಂಡಾಣೆ ಶಿಕ್ಷಕಿ ಜಯಪ್ರದ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಡಿ.ಕೆ. ಸ್ವಾಗತಿಸಿ, ಎಡಪಾಲ ಶಿಕ್ಷಕಿ ಮರಿಯಾಂಬಿ ವಂದಿಸಿದರು.