ಸುಂಟಿಕೊಪ್ಪ, ಜ.೨೨ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸಂಬAಧಿಸಿದAತೆ ೭ ವಾರ್ಡ್ಗಳ ಸಭೆ ವಾರ್ಡ್ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೩ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಉಲುಗುಲಿ ೨ನೇ ವಾರ್ಡಿನ ಗಿರಿಯಪ್ಪಮನೆ ಗದ್ದೆಯ ಎಂ.ಎಚ್. ಅಬೂಬಕರ್ ಅವರ ಮನೆಯ ಆವರಣದಲ್ಲಿ ಎಂ.ಮAಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಂಜೆ ೪.೩೦ ಗಂಟೆಗೆ ಉಲುಗುಲಿ ೧ ನೇ ವಾರ್ಡ್ ಸಭೆ ಪನ್ಯ ತೋಟದಲ್ಲಿ ಎಂ.ವನಿತ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ.೨೪ ರಂದು ಉಲುಗುಲಿ ೩ನೇ ವಾರ್ಡ್ ಸಭೆಯು ಡಾ. ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಆರ್.ಎಸ್. ವಸಂತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ.೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಸುಂಟಿಕೊಪ್ಪ ೨ನೇ ವಿಭಾಗದ ಸಭೆ ಅಪ್ಪಾರಂಡ ಬಡಾವಣೆಯ ಜಿ.ಎಲ್.ನಾಗರಾಜ್ ಮನೆಯ ಆವರಣದಲ್ಲಿ ಸದಸ್ಯೆ ಎನ್.ರೇಷ್ಮಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಸುಂಟಿಕೊಪ್ಪ ೩ ನೇ ವಿಭಾಗದ ಸಭೆ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಸದಸ್ಯೆ ಹಸೀನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೩೦ ರಂದು ಸಂಜೆ ೪ ಗಂಟೆಗೆ ಉಲುಗುಲಿ ೪ನೇ ವಾರ್ಡಿನ ಸಭೆ ಗದ್ದೆಹಳ್ಳ ಅಂಗನವಾಡಿ ಕೇಂದ್ರದಲ್ಲಿ ಸದಸ್ಯೆ ಸಿ.ಗೀತಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ.೩೧ ರಂದು ಸಂಜೆ ೪ ಗಂಟೆಗೆ ಸುಂಟಿಕೊಪ್ಪ ೧ನೇ ವಿಭಾಗದ ವಾರ್ಡ್ ಸಭೆ ಗುಡ್ಡಪ್ಪ ರೈ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಸದಸ್ಯ ಐ. ಸೋಮನಾಥ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.