ಮುಳ್ಳೂರು, ಜ. ೨೧: ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ. ೧೧ ರಂದು ಗೌಡಳ್ಳಿಯಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಹೊರತರಲಾಗುವುದು. ಸ್ಮರಣ ಸಂಚಿಕೆಗೆ ಕಥೆ, ಕವನ, ನಾಟಕ, ಲೇಖನ, ಹಾಸ್ಯ ಚುಟುಕು ಇನ್ನು ಮುಂತಾದ ಲೇಖನಗಳನ್ನು ಸ್ಮರಣ ಸಂಚಿಕೆ ಸಮಿತಿ ಆಹ್ವಾನಿಸಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಲೇಖಕರು ಮಾತ್ರ ಸ್ಮರಣ ಸಂಚಿಕೆಗೆ ಬರೆಯಲು ಅವಕಾಶ ಇದ್ದು, ಲೇಖನ ಕಳುಹಿಸುವವರಿಗೆ ತಾ. ೩೦ ಕೊನೆಯ ದಿನವಾಗಿದೆ.

ಲೇಖನ ಕಳುಹಿಸುವವರು ಕೈ ಬರಹದಲ್ಲಿ ಸ್ಪಷ್ಟವಾಗಿ ಸ್ಪುಟವಾಗಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಬರೆದಿರಬೇಕು. ಡಿಟಿಪಿ ಮಾಡಿ ಕಳುಹಿಸುವವರು ಕೂಡ ಹಾಳೆಯ ಒಂದೇ ಮಗ್ಗುಲಿನಲ್ಲಿ ಟೈಪ್ ಮಾಡಿರಬೇಕು. ಕಡ್ಡಾಯವಾಗಿ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ನಿಮ್ಮ ಒಂದು ಭಾವಚಿತ್ರವನ್ನು ಲೇಖನ ಅಥವಾ ಕವಿತೆಯ ಜೊತೆ ಕಳುಹಿಸಿಕೊಡಬೇಕು.

ಲೇಖನಗಳನ್ನು ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಮೊ. ೯೪೪೮೭೭೮೦೩೪, ಕೆ.ಪಿ. ಜಯಕುಮಾರ್ ಮೊ. ೮೦೫೦೩೨೬೭೭೪, ಡಿ. ಸುಜಲಾದೇವಿ ಮೊ. ೯೧೪೧೬೯೨೫೫೬ ಇವರುಗಳಿಗೆ ತಲುಪಿಸುವಂತೆ ಸ್ಮರಣ ಸಂಚಿಕೆ ಸಮಿತಿ ತಿಳಿಸಿದೆ.